ಬ್ರೇಕಿಂಗ್ ನ್ಯೂಸ್
28-03-25 06:12 pm Bangalore Correspondent ಕ್ರೈಂ
ಬೆಂಗಳೂರು, ಮಾ.28 : ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ ಸುಂದರಿ ಪತ್ನಿಯನ್ನು ಸಾಫ್ಟ್‌ವೇರ್ ಪತಿಯೇ ಭೀಕರವಾಗಿ ಕೊಲೆಗೈದು ಪೀಸ್ ಪೀಸ್ ಮಾಡಿ ಸೂಟ್ ಕೇಸಿನಲ್ಲಿ ತುಂಬಿಸಿಟ್ಟು ಮನೆಯಿಂದ ಪರಾರಿಯಾದ ಘಟನೆ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯ ಹೆಸರು ಗೌರಿ ಅನಿಲ್ ಸಾಂಬೇಕರ್. ಮಾಸ್ ಕಮ್ಯುನಿಕೇಷನ್ನಲ್ಲಿ ಡಿಗ್ರಿ ಮುಗಿಸಿದ್ದ ಗೌರಿ ಗಂಡನೊಂದಿಗೆ ಬೆಂಗಳೂರಿಗೆ ಬಂದು ಕೆಲಸದ ಹುಡುಕಾಟ ನಡೆಸುತ್ತಿದ್ದಳು. ಪತಿ ರಾಕೇಶ್ ಮಹಾರಾಷ್ಟ್ರದ ಪುಣೆ ಮೂಲದ ನಿವಾಸಿಯಾಗಿದ್ದು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ.
ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿನ ಹುಳಿಮಾವು ಪರಿಸರದ ದೊಡ್ಡ ಕಮ್ಮನಹಳ್ಳಿಯ ಬಾಡಿಗೆ ಮನೆ ಮಾಡಿ ನೆಲೆಸಿದ್ದರು. ಪತ್ನಿ ಗೌರಿ, ಮನೆಯಲ್ಲೇ ಇದ್ದು ಕೆಲಸ ಹುಡುಕುತ್ತಿದ್ದಳು. ಈ ನಡುವೆ, ಪತಿ ರಾಕೇಶ್ ವರ್ಕ್ ಫ್ರಮ್ ಹೋಮ್ ಕೆಲ್ಸ ಮಾಡುತ್ತಿದ್ದ. ಸುಖ ಜೀವನದಲ್ಲಿದ್ದಾಗಲೇ ಮೊನ್ನೆ ರಾತ್ರಿ ಊಟದ ಸಮಯದಲ್ಲಿ ಪತಿ- ಪತ್ನಿ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ. ಗಲಾಟೆ ವಿರೋಪಕ್ಕೆ ತಿರುಗಿದ್ದು ರಾಕೇಶ್ ಕೋಪದಲ್ಲಿ ಚೂರಿಯಿಂದ ಇರಿದು ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಪತ್ನಿಯ ಕುತ್ತಿಗೆ, ಹೊಟ್ಟೆಯ ಭಾಗದಲ್ಲಿ ಕೊಯ್ದು ಸೂಟ್ಕೇಸ್ಗೆ ತುಂಬಿಸಿ ಹೊರಕ್ಕೆ ಒಯ್ಯಲು ಯತ್ನಿಸಿದ್ದಾನೆ.
ಆದರೆ ಸೂಟ್ಕೇಸ್ ತುಂಬಿದ್ದ ರಾಕೇಶ್ ನಡುರಾತ್ರಿ 12.30ರ ಸುಮಾರಿಗೆ ಒಬ್ಬನೇ ನಡೆದುಕೊಂಡು ಅಪಾರ್ಟ್ ಮೆಂಟ್ ಬಳಿ ನಿಲ್ಲಿಸಿದ್ದ ತನ್ನ ಕಾರಿನಲ್ಲಿ ಎಸ್ಕೇಪ್ ಆಗಿದ್ದಾನೆ. ಇದಕ್ಕೂ ಮುನ್ನ ಪತ್ನಿ ಗೌರಿ ಮನೆಯವರಿಗೆ ಮತ್ತು ತಾವು ಬಾಡಿಗೆ ಇದ್ದ ಕೆಳಗಿನ ಮನೆಯವರಿಗೂ ಕರೆ ಮಾಡಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ವಿಷ್ಯ ತಿಳಿಸಿದ್ದಾನೆ. ಕೆಳಗಿನ ಮನೆಯಲ್ಲಿದ್ದ ಮಾಲೀಕರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದರು. ಬಳಿಕ ಹುಳಿಮಾವು ಪೊಲೀಸರು ಸ್ಥಳಕ್ಕೆ ಬಂದು, ಮನೆಯ ಬಾಗಿಲು ಓಪನ್ ಮಾಡಿದಾಗ ಟಾಯ್ಲೆಟ್ನಲ್ಲಿ ಇಟ್ಟಿದ್ದ ಸೂಟ್ಕೇಸ್ನಲ್ಲಿ ಶವ ಪತ್ತೆ ಆಗಿದೆ.
ಇದೇ ವೇಳೆ, ಪೊಲೀಸರು ಆರೋಪಿ ರಾಕೇಶ್ ಸಿಂಗ್ ನನ್ನು ಸಿಡಿಆರ್ ಮೂಲಕ ಟ್ರೇಸ್ ಮಾಡಿದ್ದು ಪುಣೆಯಲ್ಲಿ ಬಂಧಿಸಿದ್ದಾರೆ.
A 36-year-old man has been arrested in connection with the murder of his 32-year-old wife, whose body was found stuffed in a suitcase at their rented house in south Bengaluru.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
23-01-26 09:36 pm
Mangaluru Staffer
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm