ಬ್ರೇಕಿಂಗ್ ನ್ಯೂಸ್
06-04-25 03:32 pm Mangalore Correspondent ಕ್ರೈಂ
ಮಂಗಳೂರು, ಎ.6 : ಕೆಲವು ಯುವಕರಿಗೆ ಚಂದದ ಹುಡುಗಿ ಕಣ್ಣಿಗೆ ಬಿದ್ದರಾಯ್ತು. ಆಕೆಯನ್ನು ಪಟಾಯಿಸುವುದು ಹೇಗೆ ಅಂತಲೇ ಲೆಕ್ಕ ಹಾಕುತ್ತಾರೆ. ವಿಟ್ಲದಲ್ಲಿ ಯುವಕನೊಬ್ಬ ಇದೇ ರೀತಿ ಯಾರೋ ಒಬ್ಬಳು ಹುಡುಗಿ ಕಣ್ಣಿಗೆ ಬಿದ್ದಳು ಅಂತ ಆಕೆಯ ನಂಬರ್ ಪಡೆಯಲು ಯತ್ನಿಸಿ, ಕೊನೆಗೆ ಇನ್ಯಾರದ್ದೋ ನಂಬರ್ ಪಡೆದು ಅಶ್ಲೀಲ ಮೆಸೇಜ್ ಕಳಿಸಿ ಕೊನೆಗೆ ಚೆನ್ನಾಗಿ ಒದೆ ತಿಂದ ಘಟನೆ ನಡೆದಿದೆ.
ಒದೆ ತಿಂದವನನ್ನು ಕನ್ಯಾನ ನಿವಾಸಿ ಸವಾದ್ (26) ಎಂದು ಗುರುತಿಸಿದ್ದು ಸಾರ್ವಜನಿಕರು ಧರ್ಮದೇಟು ನೀಡಿ ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರಿನಲ್ಲಿ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸವಾದ್ ರಂಜಾನ್ ಹಬ್ಬಕ್ಕೆಂದು ಊರಿಗೆ ಬಂದಿದ್ದ. ಈ ನಡುವೆ, ವಿಟ್ಲ ಪೇಟೆಗೆ ಬಂದಿದ್ದಾಗ ಕಚೇರಿ ಒಂದರಲ್ಲಿ ಸುಂದರಿಯಾಗಿದ್ದ ಹಿಂದು ಹುಡುಗಿಯನ್ನು ನೋಡಿದ್ದ. ಆನಂತರ ಅಲ್ಲಿಗೆ ತೆರಳಿ, 1 ರೂ.ಗೆ ವಸ್ತು ಒಂದನ್ನು ಪಡೆದು ಚಿಲ್ಲರೆ ಇಲ್ಲವೆಂದು ನೂರು ರೂಪಾಯಿ ಕೊಟ್ಟಿದ್ದ. ಅಲ್ಲಿದ್ದ ಹುಡುಗಿ ಒಂದು ರೂ.ಗೆ ನೂರು ರೂ. ಕೊಟ್ಟರೆ ಹೇಗೆ, ಚಿಲ್ಲರೆ ಇಲ್ಲವೆಂದು ನಿರಾಕರಿಸಿದ್ದಾಳೆ.
ಅದಕ್ಕೆ ಗೂಗಲ್ ಪೇ ನಂಬರ್ ಕೊಡುವಂತೆ ಹೇಳಿ, ಒಂದು ರೂಪಾಯಿ ಹಾಕಿದ್ದ. ಮುಸ್ಲಿಂ ಯುವಕನೆಂದು ತಿಳಿದ ಹುಡುಗಿ, ತನ್ನ ನಂಬರ್ ನೀಡದೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಆ ವೇಳೆಗೆ ಕಚೇರಿಯಲ್ಲಿ ಇಲ್ಲದ ಬೇರೊಬ್ಬ ಯುವಕನ ನಂಬರ್ ನೀಡಿದ್ದಳು. ಆದರೆ ಯುವಕ ಸವಾದ್, ಇದು ಆಕೆಯದ್ದೇ ನಂಬರ್ ಎಂದುಕೊಂಡು ಹಣ ಹಾಕಿದ್ದೇನೆಂದು ಹೇಳಿ ಅಲ್ಲಿಂದ ತೆರಳಿದ್ದ. ಸಂಜೆಯಾಗುತ್ತಲೇ ಹುಡುಗಿಯ ನಂಬರ್ ಎಂದುಕೊಂಡು ಹೈ, ನಾನು ಸವಾದ್ ಅಂತ ಮೆಸೇಜ್ ಮಾಡಲಾರಂಭಿಸಿದ್ದ. ಅತ್ತಲಿಂದಲೂ ಹೈ ಎಂದು ಮರುತ್ತರ ಬಂದಿತ್ತು. ಈ ನಡುವೆ, ಒಂದು ರೂಪಾಯಿ ಹಾಕಿದ್ದ ವಿಚಾರ ತಿಳಿದಿದ್ದ ಕಚೇರಿಯ ಯುವಕನೂ ಅದಕ್ಕೆ ತಕ್ಕಂತೆ ರಿಪ್ಲೈ ನೀಡಲಾರಂಭಿಸಿದ್ದ. ನಿಂಗೆ ಮದುವೆ ಆಗಿಲ್ವಾ ಎಂದು ಸವಾದ್ ಕೇಳಿದ್ದಾನೆ. ಇಲ್ಲ ಎಂದು ಉತ್ತರ ನೀಡಿದ್ದಲ್ಲದೆ, ಇವನನ್ನು ಸ್ವಲ್ಪ ಆಟ ಆಡಿಸಬೇಕೆಂದು ಎಂದುಕೊಂಡು ಆತನ ತುಂಟ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುತ್ತ ಸಾಗಿದ್ದ. ಇದರ ನಡುವೆ 50 ರೂಪಾಯಿ ಹಾಕಿ, ಹಣ ಹಾಕಿದ್ದೀನಿ, ಐಸ್ ಕ್ರೀಮ್ ತಿನ್ನು ಎಂದು ಮೆಸೇಜ್ ಮಾಡಿದ್ದ.
ರಾತ್ರಿಯಾಗುತ್ತಲೇ ವಾಯ್ಸ್ ಮೆಸೇಜ್ ಹಾಕಿದ್ದು ನಾನು ಕರೆ ಮಾಡುತ್ತೇನೆ, ಪಿಕ್ ಮಾಡು ಎಂದಿದ್ದ. ಅದಕ್ಕೆ, ಮನೆಯಲ್ಲಿ ತಂದೆ- ತಾಯಿ ಇದ್ದಾರೆ, ಈಗ ಪಿಕ್ ಮಾಡೋಕೆ ಆಗಲ್ಲ ಎಂದುತ್ತರ ಬಂದಿತ್ತು. ಮತ್ತೆ ರಾತ್ರಿಯೂ ಮೆಸೇಜ್ ಮಾಡುತ್ತಲೇ ಅಶ್ಲೀಲ ವಿಡಿಯೋಗಳನ್ನು ಹಾಕತೊಡಗಿದ್ದ. ನಡುರಾತ್ರಿ ವೇಳೆಗೆ ಮತ್ತೆ ವಾಯ್ಸ್ ಮೆಸೇಜ್ ಹಾಕಿ, ನಿನ್ನನ್ನು ಬೆತ್ತಲೆಯಾಗಿಸಿ ಅಂಗಾಂಗ ತೋರಿಸು ಎಂದು ಕಳಿಸಿದ್ದ. ಈಗ ಆಗಲ್ಲ, ನಾಳೆ ನೋಡೋಣ ಎಂದು ಈ ಕಡೆಯಿಂದ ಉತ್ತರ ಬಂದಿತ್ತು. ಇದರಿಂದ ಮತ್ತಷ್ಟು ಉತ್ತೇಜನಗೊಂಡಿದ್ದ ಸವಾದ್ ರಾತ್ರಿ 2 ಗಂಟೆ ವರೆಗೂ ಕಾತರದಿಂದ ಮೆಸೇಜ್ ಮಾಡುತ್ತ ವಿಡಿಯೋ ಕರೆ ಮಾಡುವಂತೆ ಒತ್ತಾಯಿಸುತ್ತಿದ್ದ. ಮತ್ತೆ ಮರುದಿನ ಬೆಳಗ್ಗೆ ಹಾಯ್ ಡಾರ್ಲಿಂಗ್ ಎನ್ನುತ್ತಲ್ಲೇ ಮೆಸೇಜ್ ಶುರುವಾಗಿತ್ತು. ಇವತ್ತು ಮೀಟ್ ಮಾಡೋಣ ಎಂದೂ ಹೇಳಿದ್ದ. ಈ ಕಡೆಯಿಂದ ಓಕೆ ಎಂದು ಸ್ನೇಹದ ಚಿಹ್ನೆ ಬಂದಿದ್ದನ್ನು ನೋಡಿ ಹುಡುಗನಿಗೆ ಬುಡವೇ ತಪ್ಪಿದಂತಾಗಿತ್ತು.
ಬೆಳಗ್ಗೆ ಹನ್ನೊಂದು ಗಂಟೆಗೆ ಬರ್ತೀನಿ ಎಂದು ಮೆಸೇಜ್ ಹಾಕಿದ್ದ. ಆ ಕಡೆಯಿಂದ ಓಕೆ ಸಂಜ್ಞೆ ಬಂದಿದ್ದನ್ನು ನೋಡಿ ಹುಡುಗ ಸಕತ್ ಡ್ರೆಸ್ ಮಾಡ್ಕೊಂಡು ಮೈಗೆ ಸೆಂಟ್ ಸುರಿದುಕೊಂಡು ಹೊರಟಿದ್ದ. ನಿನ್ನ ಇಷ್ಟದ ತಿಂಡಿಯೇನು ಬೇಕು, ಅದೆಲ್ಲ ಹಿಡ್ಕೊಂಡು ಬರ್ತೀನಿ ಎಂದು ಮತ್ತೆ ಕೇಳಿದ್ದ. ಐಸ್ ಕ್ರೀಮ್, ಚಾಕಲೇಟ್ ಎಲ್ಲ ಹೇಳಿದ್ದಕ್ಕೆ ಕುಡ್ತಮುಗೇರಿನಲ್ಲಿ ಹೆಚ್ಚು ಬೆಲೆಯ ಐಸ್ ಕ್ರೀಮ್, ಚಾಕ್ಲೇಟ್ ಖರೀದಿಸಿ ಪ್ಯಾಕ್ ಮಾಡಿಕೊಂಡಿದ್ದ. ನೀನು ಕಾರಲ್ಲಿ ಬರ್ತೀಯಾ, ಸ್ಕೂಟರಲ್ಲೇ ಎಂದು ಈ ಕಡೆಯಿಂದ ಮತ್ತೆ ಪ್ರಶ್ನೆ ಬಂದಿತ್ತು. ಇಲ್ಲಾ, ಸ್ಕೂಟರಲ್ಲಿ ಬರ್ತಿದ್ದೇನೆ ಎಂದಿದ್ದ. ಅದರ ನಂಬರ್ ಹಾಕು, ಗುರುತಿಸಲು ಸುಲಭ ಆಗುತ್ತೆ ಎಂದು ಮಾರುತ್ತರ ಬಂದಿತ್ತು. ಕೆಎ 19, ಎಚ್ ಕ್ಯು 4068 ಏಕ್ಟಿವಾ ಗಾಡಿ ಅಂತ ಸವಾದ್ ಮೆಸೇಜ್ ಹಾಕಿದ್ದ.
ಇತ್ತ ಮುಸ್ಲಿಂ ಹುಡುಗ ಬರ್ತಿದ್ದಾನೆಂದು ತಿಳಿದು ಈ ಕಡೆಯಿಂದ ಹಿಂದು ಯುವಕರೂ ಉಪಚಾರಕ್ಕೆ ರೆಡಿ ಮಾಡಿಕೊಂಡಿದ್ದರು. ಮಧ್ಯಾಹ್ನ 12 ಗಂಟೆ ವೇಳೆಗೆ ಹುಡುಗಿ ಇದ್ದ ಕಚೇರಿ ಎದುರಲ್ಲಿ ಸವಾದ್ ಬಂದು ನಿಂತಿದ್ದಾನೆ. ಆಗ ಇಬ್ಬರು ವಯಸ್ಸಾದ ವ್ಯಕ್ತಿಗಳು ಕಚೇರಿಯಲ್ಲಿ ಇರೋದನ್ನು ನೋಡಿ, ಮತ್ತೆ ಮೆಸೇಜ್ ಹಾಕಿದ್ದಾನೆ. ಅಲ್ಲಿ ಯಾರೋ ಜನ ಇದ್ದಾರೆ ಅಂತ. ಸವಾದ್ ಬಂದಿದ್ದನ್ನು ಗುರುತಿಸಿದ್ದ ಯುವಕ, ಹೌದು.. ಈಗ ಬೇಡ. ಇವರು ಹೋದ ಮೇಲೆ ಬಾ ಎಂದು ರಿಪ್ಲೈ ಹಾಕಿದ್ದ. ಇಬ್ಬರು ವ್ಯಕ್ತಿಗಳು ಹೋಗಿದ್ದೇ ತಡ ಗಬಕ್ಕನೆ ಯುವತಿಯಿದ್ದ ಕಚೇರಿಗೆ ಸವಾದ್ ಎಂಟ್ರಿ ಕೊಟ್ಟಿದ್ದ. ಯುವತಿಗೆ ಇದ್ಯಾವುದೂ ವಿಷಯವೇ ಗೊತ್ತಿರಲಿಲ್ಲ. ಹಾಯ್ ಎನ್ನುತ್ತ ಎಂಟ್ರಿ ಕೊಟ್ಟ ಯುವಕನನ್ನು ಯುವತಿ ಅವಾಕ್ಕಾಗಿ ನೋಡಿದ್ದಳು. ಯಾರೂ ಇಲ್ವಾ ಎನ್ನುತ್ತ ಸೀದಾ ಒಳಗೆ ಬಂದಿದ್ದನ್ನು ನೋಡಿ ಯುವತಿ ಬೊಬ್ಬೆ ಹಾಕಿದ್ದಾಳೆ. ಅಷ್ಟರಲ್ಲಿ ಸ್ವಲ್ಪ ದೂರದಲ್ಲಿ ಕಾದು ನಿಂತಿದ್ದ ಅದಾಗಲೇ ಗುಂಪು ಕೂಡಿದ್ದ ಯುವಕರು ಸೀದಾ ಎಂಟ್ರಿ ಕೊಟ್ಟಿದ್ದು ಹೆಣ್ಣು ಹುಡುಕಿ ಬಂದಿದ್ದ ಯುವಕನಿಗೆ ಸರಿಯಾಗಿ ತದುಕಿದ್ದಾರೆ. ಹುಡುಗಿಯೆಂದು ನಂಬಿ ಬಂದಿದ್ದ ಸವಾದ್ ಇಂಗು ತಿಂದ ಮಂಗನಂತಾಗಿದ್ದ.
ಆನಂತರ ವಿಟ್ಲ ಪೊಲೀಸರನ್ನು ಕರೆಸಿ ಅವರ ವಶಕ್ಕೆ ನೀಡಿದ್ದಾರೆ. ಬಳಿಕ ಆತನ ಮನೆಯವರನ್ನು ಬರಹೇಳಿ ಇವನ ಉಪಟಳದ ಬಗ್ಗೆ ಹೇಳಿದ್ದಾರೆ. ಮನೆಯವರೂ ಸವಾದ್ ಉಪದ್ರಕ್ಕೆ ಬೇಸತ್ತು ಮತ್ತೆರಡು ಏಟು ಬಾರಿಸಿದ್ದಾರೆ. ಇದೇ ರೀತಿ ಹಿಂದೆಯೂ ಹುಡುಗಿ ಬೆನ್ನತ್ತಿ ಹೋಗಿ ಪೆಟ್ಟು ತಿಂದಿದ್ದಾನೆ, ಅವನ ಜೊತೆಗಿರೋರು ಸರಿಯಿಲ್ಲ. ಸಹವಾಸ ದೋಷ. ಹಾಗಂತಲೇ, ಬೆಂಗಳೂರಿಗೆ ಕಳಿಸಿ ಕೆಲಸಕ್ಕೆ ಹಾಕಿದ್ದೆವು ಅಂದಿದ್ದಾರೆ. ಪೊಲೀಸರು ಪಿಟ್ಟಿ ಕೇಸು ಹಾಕಿ ಯುವಕನನ್ನು ಬಿಟ್ಟು ಕಳಿಸಿದ್ದಾರೆ.
Mangalore Whirlwind of Romance and Mischief, Kanyara Youth thrashed for making video calls. In a bizarre incident reported from Vitla, a young man became infatuated with a girl he had noticed and decided to attempt to get her phone number. In his eagerness, he mistakenly acquired the phone number of someone else and ended up sending inappropriate messages, which created quite a stir.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm