Mangalore Maulvi Arrest, Sexual Harassment, Black Magic: ಮಾಟ ಮಾಡಿಸಿದ್ದಾರೆಂದು ನಂಬಿಸಿ ಮಹಿಳೆಗೆ ವಂಚನೆ, ಕುರಾನ್ ಓದಿಸಿ ಲೈಂಗಿಕ ಕಿರುಕುಳ ; ಮುಸ್ಲಿಂ ಧರ್ಮಗುರು 'ಕೂಳೂರು ಉಸ್ತಾದ್ ' ಬಂಧನ 

07-04-25 11:23 am       Mangalore Correspondent   ಕ್ರೈಂ

ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಯಾರೋ ಮಾಟ, ಮಂತ್ರ ಮಾಡಿಸಿದ್ದಾರೆಂದು ನಂಬಿಸಿ, ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ, ಒಂದು ಲಕ್ಷ ರೂ.ಗಳನ್ನು ಪಡೆದು ವಂಚಿಸಿದ ಆರೋಪದಲ್ಲಿ ಹೆಜಮಾಡಿಯ ಮುಸ್ಲಿಂ ಧರ್ಮಗುರು ಒಬ್ಬನನ್ನು ಮಂಗಳೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಎ.7 : ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಯಾರೋ ಮಾಟ, ಮಂತ್ರ ಮಾಡಿಸಿದ್ದಾರೆಂದು ನಂಬಿಸಿ, ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ, ಒಂದು ಲಕ್ಷ ರೂ.ಗಳನ್ನು ಪಡೆದು ವಂಚಿಸಿದ ಆರೋಪದಲ್ಲಿ ಹೆಜಮಾಡಿಯ ಮುಸ್ಲಿಂ ಧರ್ಮಗುರು ಒಬ್ಬನನ್ನು ಮಂಗಳೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿ ಜಿ.ಅಬ್ದುಲ್ ಕರೀಮ್ ಅಲಿಯಾಸ್ ಕೂಳೂರು ಉಸ್ತಾದ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

2022ರಲ್ಲಿ ಸಂತ್ರಸ್ತ ಮಹಿಳೆಗೆ ಖಿನ್ನತೆಯ ಸಮಸ್ಯೆ ಉಂಟಾಗಿದ್ದು , ಆಕೆ ತನ್ನ ಅಕ್ಕನ ಗಂಡನ ಸಲಹೆಯಂತೆ ಆಗ ಹೆಜಮಾಡಿಯಲ್ಲಿದ್ದ ಉಸ್ತಾದ್ ಅಬ್ದುಲ್ ಕರೀಮ್ ಮನೆಗೆ ಹೋಗಿದ್ದರು. ಅಲ್ಲಿ ಕೂಳೂರು ಉಸ್ತಾದ್ ಎಂಬ ಹೆಸರಿನ ಈ ಅಬ್ದುಲ್ ಕರೀಮ್ ಎಂಬಾತ ಮಹಿಳೆಯನ್ನು ನೋಡಿ ನಿಮಗೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ನಂಬಿಸಿ ಅದನ್ನು ತೆಗೆಸಬೇಕು ಎಂದು ಹೇಳಿದನೆನ್ನಲಾಗಿದೆ. 

ಮಾಟ ಮಂತ್ರ ನಿವಾರಿಸುವ ಚಿಕಿತ್ಸೆ ಕೊಡುತ್ತೇನೆ ಎಂದು ನಂಬಿಸಿ ಆ ಮಹಿಳೆಯನ್ನು ಆಗಾಗ ತನ್ನ ಮನೆಗೆ ಬರಲು ತಿಳಿಸಿದ್ದ. ಮಹಿಳೆ ತನ್ನ ಅಕ್ಕನ ಜೊತೆ ಈ ವ್ಯಕ್ತಿಯ ಬಳಿ ಹಲವು ಬಾರಿ ಹೋಗಿದ್ದಾರೆ.   ಅಲ್ಲಿ ಈತ ಮಹಿಳೆಗೆ ಕುರಾನ್ ಓದಿಸಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. 2022, ಫೆ.10 ರಂದು ಸಂತ್ರಸ್ತೆಯ ಅಕ್ಕನಿಗೆ ಕೆಲಸ ಇದ್ದ ಕಾರಣ ಸಂತ್ರಸ್ತೆ ಒಬ್ಬಳೇ ಹೆಜಮಾಡಿಯ ಮನೆಗೆ ಹೋಗಿದ್ದರು. ಅಲ್ಲಿ ಉಸ್ತಾದ್ ಆಕೆಯಲ್ಲಿ ಕುರಾನ್ ಓದಿಸಿ ಬಳಿಕ ಆಕೆಗೆ ಚಿಕಿತ್ಸೆಯ ನೆಪದಲ್ಲಿ ಮೈಮುಟ್ಟಿ ಕಿರುಕುಳ ನೀಡಿದ್ದಾನೆ. ಮತ್ತು ಮಹಿಳೆಯಿಂದ 55,000 ರೂ. ಪಡೆದಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ತಾನು ಹೆಜಮಾಡಿಗೆ ಹೋದಾಗಲೆಲ್ಲಾ, ತನ್ನಲ್ಲಿ ಚಿಕಿತ್ಸೆಗೆ ಜಾಸ್ತಿ ಹಣ ಖರ್ಚಾಗುತ್ತದೆ ಎಂದು  ಉಸ್ತಾದ್ ಹೇಳಿ ತನ್ನನ್ನು ವಂಚಿಸಿ ಸುಮಾರು ಒಂದು ಲಕ್ಷ ರೂ. ಪಡೆದು ವಂಚಿಸಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ಬಾಲಕೃಷ್ಣ ನಾಯಕ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Mangalore Maulvi Arrested for Sexually Harassing Woman Under Guise of Black Magic Rituals. The arrested has been identified as G Abdul Kareem alias Kuloor Ustad, a resident of Guruvayanakere.