Puttur crime, Sword, Mangalore: ಪುತ್ತೂರಿನಲ್ಲಿ ತಲ್ವಾರು ಝಳಪಿಸಿದ ಯುವಕರ ಫೋಟೊ ವೈರಲ್ ; ಸುಮೊಟೋ ಕೇಸು ದಾಖಲು 

10-04-25 02:57 pm       Mangalore Correspondent   ಕ್ರೈಂ

ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಯುವಕರು ತಲ್ವಾರ್ ಹಿಡಿದು ನಿಂತಿರುವ ಪೋಟೋ ವೈರಲ್ ಆಗಿದ್ದು ಇದರ ಬೆನ್ನಲ್ಲೇ ಪುತ್ತೂರು ಗ್ರಾಮಾಂತರ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದ್ದಾರೆ. 

ಪುತ್ತೂರು, ಎ.10 : ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಯುವಕರು ತಲ್ವಾರ್ ಹಿಡಿದು ನಿಂತಿರುವ ಪೋಟೋ ವೈರಲ್ ಆಗಿದ್ದು ಇದರ ಬೆನ್ನಲ್ಲೇ ಪುತ್ತೂರು ಗ್ರಾಮಾಂತರ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದ್ದಾರೆ. 

ಯುವಕರನ್ನು ಪುತ್ತೂರಿನಲ್ಲಿ ಈ ಹಿಂದೆ ಹಿಂದು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಸುಜಿತ್ ಸಂಟ್ಯಾರು, ಪುಟ್ಟಣ್ಣ ಮರಿಕೆ ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಟೋ ವೈರಲ್ ಆದ ಬೆನ್ನಲ್ಲೇ ಯುವಕರ ವಿರುದ್ಧ ಸುಮೊಟೋ ಕೇಸ್ ದಾಖಲಾಗಿದೆ. 

ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಪಾಲ್ಗೊಂಡಿದ್ದ ಇಬ್ಬರು ಯುವಕರು ತಲ್ವಾರ್ ಹಿಡಿದು ಪೋಸು ಕೊಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ಪೊಲೀಸರು ಸುಮೊಟೊ ಕೇಸು ದಾಖಲಿಸಿದ್ದಲ್ಲದೆ ಆ ಇಬ್ಬರನ್ನೂ ಜೈಲಿಗೆ ತಳ್ಳಿದ್ದರು.

Photo of Youths Wielding a Sword Goes Viral in Puttur, Case Registered Under Sumoto case.