ಬ್ರೇಕಿಂಗ್ ನ್ಯೂಸ್
12-04-25 01:53 pm HK Staff ಕ್ರೈಂ
ಬೆಂಗಳೂರು, ಎ.12: ಸರ್ಕಾರಿ ಅಧಿಕಾರಿ ಸೋಗಿನಲ್ಲಿ 18 ಬಾರಿ ನ್ಯಾಯಾಲಯದ ಆದೇಶಗಳನ್ನೇ ನಕಲಿಯಾಗಿಸಿ ಬ್ಯಾಂಕ್ ನಿಂದ 1.32 ಕೋಟಿ ದೋಚಿದ್ದ ಉತ್ತರ ಭಾರತ ಮೂಲದ ಮೂವರು ವಂಚಕರನ್ನು ಬೆಂಗಳೂರು ನಗರ ಸೈಬರ್ ಕ್ರೈಂ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಹಲಸೂರು ಶಾಖೆಯ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು, ದೆಹಲಿಯ ಅಭಿಮನ್ಯು ಕುಮಾರ್ ಪಾಂಡೆ, ನೀರಜ್ ಸಿಂಗ್ ಹಾಗೂ ರಾಜಸ್ಥಾನ ಮೂಲದ ಸಾಗರ್ ಲಾಕುರ್ ಎಂಬುವರನ್ನ ಬಂಧಿಸಿದ್ದಾರೆ. ಬಂಧಿತರ ಬ್ಯಾಂಕ್ ಖಾತೆಯಲ್ಲಿದ್ದ 63 ಲಕ್ಷ ರೂ. ಹಣವನ್ನ ವಶಕ್ಕೆ ಪಡೆಯಲಾಗಿದೆ.
ಪ್ರಕರಣ ಪ್ರಮುಖ ಆರೋಪಿ ಸಾಗರ್, ರಾಜಸ್ಥಾನದ ಆಕ್ಸಿಸ್ ಬ್ಯಾಂಕ್ ಶಾಖೆಯೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ. ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಬ್ಯಾಂಕ್ನಲ್ಲಿ ಪ್ರೀಜ್ ಆಗಿರುವ ಹಣವನ್ನ ಹೇಗೆ ಬಿಡಿಸಿಕೊಳ್ಳಬೇಕೆಂಬುದರ ಬಗ್ಗೆ ತಿಳಿದುಕೊಂಡಿದ್ದ. ಮತ್ತೊಂದೆಡೆ ಆನ್ಲೈನ್ ಮೂಲಕ ಕ್ರಿಕೆಟ್ ಬೆಟ್ಟಿಂಗಲ್ಲೂ ತೊಡಗಿದ್ದರಿಂದ ಅಲಹಾಬಾದ್ ಪೊಲೀಸರು ಈತನನ್ನು ಬಂಧಿಸಿದ್ದರು. ಜಾಮೀನಲ್ಲಿ ಹೊರಬಂದ ಸಾಗರ್, ಬೆಂಗಳೂರಿನ ಹಲಸೂರಿನ ಐಸಿಐಸಿಐ ಬ್ಯಾಂಕ್ನಲ್ಲಿ ಪ್ರೀಜ್ ಆಗಿದ್ದ 1.32 ಕೋಟಿ ರೂ. ಬಗ್ಗೆ ತಿಳಿದುಕೊಂಡಿದ್ದ. ಈ ಹಣ ಲಪಟಾಯಿಸಲು ಇನ್ನಿಬ್ಬರು ಸಹಚರರನ್ನು ಜೊತೆಯಾಗಿಸಿ ಸರ್ಕಾರಿ ಅಧಿಕಾರಿ ರೀತಿ ದಾಖಲಾತಿ ಸಿದ್ದಪಡಿಸಿ ಸರ್ಕಾರದ ಅಧೀನದಲ್ಲಿರುವ ಕೆ-ಸ್ವಾನ್ ಹೆಸರಲ್ಲಿ (ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್ ವರ್ಕ್) ಆನ್ಲೈನ್ ಮೂಲಕ ಮನವಿ ಸಲ್ಲಿಸಿ ಮೇಲ್ ಐಡಿ ಪಡೆದುಕೊಂಡಿದ್ದ.
18 ಬಾರಿ ನಕಲಿ ಕೋರ್ಟ್ ಆದೇಶ ;
ಬ್ಯಾಂಕಿನಲ್ಲಿ ಹಣ ಎಗರಿಸಲು ಸಿದ್ದತೆ ಮಾಡಿಕೊಂಡ ಬಳಿಕ ಬ್ಯಾಂಕ್ ಇಮೇಲ್ ಗೆ ನಕಲಿ ಆರ್ಡರ್ ಕಳುಹಿಸಿದ್ದ. ಫೆಬ್ರವರಿಯಿಂದ 18 ಬಾರಿ ನಕಲಿ ನ್ಯಾಯಾಲಯ ಆದೇಶಗಳನ್ನು ಕಳುಹಿಸಿದ್ದು ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಫ್ರೀಜ್ ಆಗಿರುವ ಹಣವನ್ನ ವರ್ಗಾವಣೆ ಮಾಡುವಂತೆ ತಿಳಿಸಿದ್ದರು. ಆದೇಶದಲ್ಲಿರುವ ಪೋನ್ ನಂಬರ್ ಮತ್ತು ಕರೆ ಮಾಡಿದ ವ್ಯಕ್ತಿಗಳ ಮೊಬೈಲ್ ನಂಬರ್ ಒಂದೇ ಇದ್ದುದರಿಂದ ನಿಜವೆಂದು ನಂಬಿ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಬ್ಯಾಂಕ್ ಅಧಿಕಾರಿಗಳು 1.32 ಕೋಟಿ ರೂ. ಕಳುಹಿಸಿದ್ದರು. ಬಳಿಕ ಅನುಮಾನಗೊಂಡು ಅಧಿಕಾರಿಗಳು ದೂರು ನೀಡಿದ್ದು, ಪ್ರಕರಣ ದಾಖಲಿಸಿದ ಇನ್ಸ್ಪೆಕ್ಟರ್ ಹಜರೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ವಂಚಕರನ್ನ ಬಂಧಿಸಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಗುಪ್ತ ತಿಳಿಸಿದ್ದಾರೆ
38 ಲಕ್ಷ ಹಣದಲ್ಲಿ ಮೋಜು -ಮಸ್ತಿ ;
ಪ್ರಕರಣ ದಾಖಲಿಸಿದ ಸೈಬರ್ ಕ್ರೈಂ ಪೊಲೀಸರು, ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಯನ್ನ ಪರಿಶೀಲಿಸಿದ್ದರು. ದೆಹಲಿ ಮೂಲದ ಅಭಿಮನ್ಯು ಎಂಬುವನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ನೀರಜ್ ಪಾತ್ರದ ಬಗ್ಗೆ ಬಾಯ್ಬಿಟ್ಟಿದ್ದ. ಇಬ್ಬರನ್ನೂ ಬಂಧಿಸಿದಾಗ ನಕಲಿ ನ್ಯಾಯಾಲಯ ಆದೇಶ ಸೃಷ್ಟಿಸಿರುವುದು ಸಾಗರ್ ಎಂಬುದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದರು. ಅಲ್ಲದೇ ಆತನ ಖಾತೆಗೂ 38 ಲಕ್ಷ ರೂಪಾಯಿ ವರ್ಗಾಯಿಸಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ.
ಆತನನ್ನು ಪತ್ತೆ ಮಾಡಿ ತನಿಖೆ ಮಾಡಿದಾಗ ಕ್ಯಾಸಿನೊ, ಪಬ್ಗಳಲ್ಲಿ ಮೋಜು - ಮಸ್ತಿ ಮಾಡಿ 38 ಲಕ್ಷ ಹಣ ಉಡೀಸ್ ಮಾಡಿರುವುದು ಗೊತ್ತಾಗಿದೆ. ಸದ್ಯ 63 ಲಕ್ಷ ರೂಪಾಯಿ ಹಣ ಸೀಜ್ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Bangalore police have arrested three people for swindling Rs 1.3 crore from an ICICI Bank branch in Halasuru by submitting 18 fake court orders.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
23-01-26 09:36 pm
Mangaluru Staffer
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm