ಬ್ರೇಕಿಂಗ್ ನ್ಯೂಸ್
17-04-25 09:56 pm Mangalore Correspondent ಕ್ರೈಂ
ಉಳ್ಳಾಲ, ಎ.17: ಪಶ್ಚಿಮ ಬಂಗಾಳ ಮೂಲದ 19 ವರ್ಷದ ಯುವತಿಯೋರ್ವಳನ್ನು ಆಟೋ ಚಾಲಕ ಸಹಿತ ಮೂವರು ಸೇರಿ ಗ್ಯಾಂಗ್ ರೇಪ್ ನಡೆಸಿರುವ ಕೃತ್ಯ ಮಂಗಳೂರು ಹೊರವಲಯದ ಉಳ್ಳಾಲದ ಕುತ್ತಾರು ರಾಣಿಪುರ ರಿಷಿವನ ಕಾನ್ವೆಂಟ್ ಬಳಿಯಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ. ಕೆಲಸ ಕೊಡಿಸುವ ನೆಪದಲ್ಲಿ ರಿಕ್ಷಾ ಚಾಲಕ ಪ್ರಭುರಾಜ್ ಎಂಬಾತ ಹೊರ ರಾಜ್ಯದ ಯುವತಿಯನ್ನ ಪುಸಲಾಯಿಸಿ ಆಕೆಗೆ ಮದ್ಯ ಕುಡಿಸಿ ಮತ್ತಿಬ್ಬರು ಸಹಚರರೊಂದಿಗೆ ಗ್ಯಾಂಗ್ ರೇಪ್ ನಡೆಸಿರುವ ಆರೋಪ ಕೇಳಿ ಬಂದಿದೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ಆಟೋ ರಿಕ್ಷಾ ಚಾಲಕನಾಗಿರುವ, ಮೂಲ್ಕಿ ಕಾರ್ನಾಡು ಲಿಂಗಪ್ಪಯ್ಯಕಾಡು ನಿವಾಸಿ ಪ್ರಭುರಾಜ್ (38), ಪೈಂಟರ್ ಕಮ್ ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿರುವ ಕುಂಪಲ ಚಿತ್ರಾಂಜಲಿ ನಗರ ನಿವಾಸಿ ಮಿಥುನ್ (37), ಡೆಲಿವರಿ ಬಾಯ್ ಆಗಿರುವ ಪಡೀಲ್ ಕೊಡಕ್ಕಲ್ ನಿವಾಸಿ ಮನೀಶ್ (30) ಎಂಬ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಸಂತ್ರಸ್ತ ಯುವತಿ ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದ ಫ್ಲೈವುಡ್ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದು ಸ್ನೇಹಿತನ ಜೊತೆ ಮಂಗಳೂರಿನಲ್ಲಿ ಬೇರೆ ಉದ್ಯೋಗಕ್ಕಾಗಿ ಬುಧವಾರ ರೈಲಿನಲ್ಲಿ ಮಂಗಳೂರಿಗೆ ಬಂದಿದ್ದಳು. ಮಂಗಳೂರಿನಲ್ಲಿ ಯುವತಿ ತನ್ನ ಜೊತೆ ಬಂದಿದ್ದ ಸ್ನೇಹಿತನೊಂದಿಗೆ ಜಗಳವಾಡಿದ್ದು ಆಕೆಯ ಮೊಬೈಲಿಗೆ ಹಾನಿಯುಂಟಾಗಿತ್ತು. ಈ ವೇಳೆ ಯುವತಿ ಆರೋಪಿ ಪ್ರಭುರಾಜ್ ಎಂಬವನ ಆಟೋ ಹತ್ತಿದ್ದು ರಿಕ್ಷಾ ಚಾಲಕ ಆಕೆಯನ್ನು ಮೊಬೈಲ್ ರಿಪೇರಿ ಅಂಗಡಿಗೆ ಕರೆದುಕೊಂಡು ಹೋಗಿ ಸಹಕರಿಸಿದ್ದಾನೆ. ಸಂತ್ರಸ್ತ ಯುವತಿಗೆ ಊಟ ಕೊಡಿಸಿದ್ದಲ್ಲದೆ, ಆಕೆಯ ಕೋರಿಕೆ ಮೇರೆಗೆ ರಿಕ್ಷಾ ಚಾಲಕ ಮತ್ತೆ ಆಕೆಯನ್ನ ರೈಲು ನಿಲ್ದಾಣಕ್ಕೆ ಬಿಡಲು ಒಪ್ಪಿದ್ದಾನೆ. ಈ ಮಧ್ಯೆ ಆಟೋ ಚಾಲಕ ಯುವತಿಯ ಪರಿಚಯ ಬೆಳೆಸಿದ್ದು ಆಕೆಗೆ ರೊಟ್ಟಿ ಅಂಗಡಿಯೊಂದರಲ್ಲಿ ಕೆಲಸ ಕೊಡಿಸೋದಾಗಿ ಆಮಿಷ ತೋರಿಸಿ ತನ್ನ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದಾನೆ.

ದಾರಿ ಮಧ್ಯದಲ್ಲಿ ಮತ್ತೆ ಇಬ್ಬರು ಸಚಚರರನ್ನ ರಿಕ್ಷಾಕ್ಕೆ ಹತ್ತಿಸಿಕೊಂಡಿದ್ದು ಆರೋಪಿಗಳು ನಗರದಲ್ಲೇ ಯುವತಿಗೆ ಮದ್ಯ ಕುಡಿಸಿದ್ದಾರೆ. ನಶೆಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ ಎಚ್ಚೆತ್ತಾಗ ತನ್ನನ್ನು ರಿಕ್ಷಾ ಚಾಲಕ ಸೇರಿ ಮೂವರೊಂದಿಗೆ ಕಾರಿನಲ್ಲಿ ಕರೆದೊಯ್ಯುತ್ತಿದ್ದುದನ್ನು ಕಂಡು ಬೊಬ್ಬಿಟ್ಟಿದ್ದಾಳೆ. ಯುವತಿಯ ಚೀರಾಟಕ್ಕೆ ಬೆದರಿದ ಆರೋಪಿಗಳು ಯುವತಿಯನ್ನ ಮಧ್ಯರಾತ್ರಿ ರಾಣಿಪುರದ ನೇತ್ರಾವತಿ ನದಿ ತೀರದ ರಸ್ತೆ ಬದಿ ಬಿಟ್ಟು ಓಡಿದ್ದಾರೆ. ಯುವತಿಯು ಮಧ್ಯರಾತ್ರಿ ಸುಮಾರು 1.30 ಗಂಟೆ ವೇಳೆ ಅತ್ಯಾಚಾರಿಗಳಿಂದ ತಪ್ಪಿಸಿ ರಾಣಿಪುರದ ಸ್ಥಳೀಯರೋರ್ವರ ಮನೆಯ ಬಾಗಿಲನ್ನು ತಟ್ಟಿದ್ದು ಕುಡಿಯಲು ನೀರು ಕೇಳಿದ್ದಾಳೆ. ಯುವತಿಯ ಮೈಮೇಲೆ ತರಚಿದ ಗಾಯಗಳಾಗಿದ್ದು, ಗಾಬರಿಗೊಂಡ ಸ್ಥಳೀಯರು ಆಕೆಯನ್ನ ಉಪಚರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ತೀವ್ರ ಅಸ್ವಸ್ಥಗೊಂಡಿದ್ದ ಯುವತಿಯನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ತಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೇಳೆ ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಕುರಿತಾಗಿ ಸಂತ್ರಸ್ತ ಯುವತಿ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾಳೆ. ಆಸ್ಪತ್ರೆಗೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸೇರಿದಂತೆ ಪೊಲೀಸರ ತನಿಖಾ ತಂಡವು ಭೇಟಿ ನೀಡಿ ಘಟನಾ ಸ್ಥಳದ ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಿದೆ. ವೈದ್ಯಕೀಯ ವರದಿ ಬಂದ ನಂತರವಷ್ಟೆ ಅತ್ಯಾಚಾರದ ಬಗ್ಗೆ ತಿಳಿಯಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಘಟನೆ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 51/2025 ರಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್): ಕಲಂ 126(2),140(2), 352, 351(1), 115(2), 64, 309(6), 70 ಮತ್ತು 3(5) ರಂತೆ ಪ್ರಕರಣ ದಾಖಲಾಗಿರುತ್ತದೆ. ರಾಣಿಪುರದ ನದಿತೀರದ ನಿರ್ಜನ ಪ್ರದೇಶದ ಒಂಟಿ ಮನೆಯಲ್ಲಿ ಸ್ಥಳೀಯ ಯುವಕರು ಆಗಿಂದಾಗ್ಗೆ ಗುಂಡು-ತುಂಡಿನ ಮೋಜು ಮಸ್ತಿ ಮಾಡುತ್ತಿರುವ ಆರೋಪಗಳಿದ್ದು ಇದರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಆರೋಪಿ ಖಾತೆಗೆ ಎರಡು ಸಾವಿರ ಗೂಗಲ್ ಪೇ..?
ಮಂಗಳೂರಿಗೆ ಬಂದಿದ್ದ ಸಂತ್ರಸ್ತ ಯುವತಿಯು ಊರಿನಲ್ಲಿರುವ ತನ್ನ ತಾಯಿಯಲ್ಲಿ ಮೊಬೈಲ್ ರಿಪೇರಿಗೆ ಹಣ ಕೇಳಿದ್ದು, ಸಂತ್ರಸ್ತೆಯ ಮೊಬೈಲ್ಗೆ ಹಾನಿಯುಂಟಾದ ಕಾರಣ ಆರೋಪಿ ರಿಕ್ಷಾ ಚಾಲಕನ ಖಾತೆಗೆ ಸಂತ್ರಸ್ತೆಯ ತಾಯಿ ಎರಡು ಸಾವಿರ ರೂಪಾಯಿ ಹಣ ವರ್ಗಾಯಿಸಿದ್ದಾಳೆ ಎಂಬ ಮಾಹಿತಿ ಇದೆ. ಈ ಬಗ್ಗೆ ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Three Arrested in Mangalore Ullal Gang Rape Case, Victim Lured with Job Promise. The arrested has been identified as Prabhuraj, Mithun, Manish. In a statement, Police Commissioner Anupam Agrawal said the victim, a native of Kooch Bihar in West Bengal and recently began working in a plywood factory in Kerala, came to Mangaluru on April 16 by train along with her male acquaintance. She was in search of a job in the city.
01-01-26 06:21 pm
Bangalore Correspondent
ಜನವರಿ 15ರ ನಂತರ ಸಂಪುಟ ವಿಸ್ತರಣೆ ಆಗಲಿದೆ, ನನಗೂ ಮಂ...
01-01-26 05:18 pm
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ಸವಾರಿ ; 70ರ...
01-01-26 03:05 pm
ಕೋಗಿಲು ಬಡಾವಣೆ ವಿವಾದ ; ಬಿಜೆಪಿಯಿಂದ ಸತ್ಯಶೋಧನಾ ಸಮ...
31-12-25 10:57 pm
ಕೋಗಿಲು ಬಡಾವಣೆ ವಿವಾದ ನಡುವೆಯೇ ಕೇರಳ ಸಿಎಂ ಪಿಣರಾಯಿ...
31-12-25 02:35 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
01-01-26 09:43 am
Mangalore Correspondent
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
ಕೋಟೆಕಾರು ಪ.ಪಂ ಸಭೆ ; ಸರ್ಕಾರಿ ಜಮೀನು ಅತಿಕ್ರಮಣ ಪರ...
31-12-25 03:35 pm
ಶೀಘ್ರದಲ್ಲೇ ಸ್ಕ್ಯಾನ್ ಜೆಟ್ ವಿಮಾನ ಸೇವೆ ; ವಿಜಯ್ ಮ...
31-12-25 11:47 am
31-12-25 07:05 pm
Mangalore Correspondent
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm
ಪುತ್ತೂರಿನ ನಿವೃತ್ತ ಪ್ರಾಂಶುಪಾಲರ ಮನೆಗೆ ನುಗ್ಗಿ ಕಳ...
31-12-25 05:48 pm
ಸ್ಟಾಕ್ ಮಾರ್ಕೆಟ್ ಹೆಸ್ರಲ್ಲಿ ವಂಚಕರಿಂದ ಪಂಗನಾಮ ; 5...
30-12-25 10:40 pm
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm