ಬ್ರೇಕಿಂಗ್ ನ್ಯೂಸ್
22-04-25 03:26 pm Bangalore Correspondent ಕ್ರೈಂ
ಬೆಂಗಳೂರು, ಎ.22 : ನಿವೃತ್ತ ಡಿಜಿಪಿ ಓಂಪ್ರಕಾಶ್ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮಧ್ಯಾಹ್ನ ಡೈನಿಂಗ್ ಟೇಬಲ್ನಲ್ಲಿ ಕುಳಿತು ಊಟ ಮಾಡುತ್ತಿರುವಾಗಲೇ ಪತ್ನಿ ಭೀಕರವಾಗಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈದಿದ್ದಾಳೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಕೊಲೆಯಾದ ಭಾನುವಾರ ಮಧ್ಯಾಹ್ನ ಓಂ ಪ್ರಕಾಶ್ ಮನೆಗೆ ಊಟಕ್ಕೆ ಮೀನೂಟ ಪಾರ್ಸೆಲ್ ತರಿಸಿದ್ದರು. ಡೈನಿಂಗ್ ಟೇಬಲ್ನಲ್ಲಿ ಕುಳಿತು ಊಟ ಮಾಡುವಾಗ ದಂಪತಿ ನಡುವೆ ಜಗಳ ಶುರುವಾಗಿದೆ. ಈ ವೇಳೆ ಪತ್ನಿ ಪಲ್ಲವಿ ಏಕಾಏಕಿ ಚಾಕುವಿನಿಂದ ಓಂ ಪ್ರಕಾಶ್ ಮುಖಕ್ಕೆ ಇರಿದಿದ್ದು ಬಳಿಕ ಕುತ್ತಿಗೆ, ತಲೆ ಸೇರಿ ಹತ್ತಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ತಟ್ಟೆಯಲ್ಲಿ ಒಂದು ಪೂರ್ಣ ಮೀನು, ನೆಲದಲ್ಲಿ ಅರ್ಧ ಮೀನು ಬಿದ್ದಿರುವುದು ಪೊಲೀಸರ ಪರಿಶೀಲನೆ ವೇಳೆ ಕಂಡುಬಂದಿದೆ.
ಓಂಪ್ರಕಾಶ್ ಕೊಲೆಯ ಸಂದರ್ಭ ಮನೆಯಲ್ಲಿ ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿ ಮಾತ್ರ ಇದ್ದರು. ಕೊಲೆ ಬಳಿಕ ಪಲ್ಲವಿ ಸ್ನೇಹಿತೆಗೆ ವಿಡಿಯೋ ಕರೆ ಮಾಡಿ ದೈತ್ಯನನ್ನು ಕೊಂದಿದ್ದೇನೆ ಎಂದಿದ್ದಾರೆ. ಕೊಲೆ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪಲ್ಲವಿ ಮತ್ತು ಆಕೆ ಪುತ್ರಿ ಕೃತಿಯನ್ನು ವಶಕ್ಕೆ ಪಡೆದು ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಕೃತಿ ಪೊಲೀಸರ ಜೀಪು ಹತ್ತಲು ನಿರಾಕರಿಸಿ ಕೆಲ ಕಾಲ ಹೈಡ್ರಾಮಾ ಸೃಷ್ಟಿದ್ದಳು.
ಸೋಮವಾರ ಬೆಳಗ್ಗೆ ಪಲ್ಲವಿ ಮತ್ತು ಆಕೆಯ ಪುತ್ರಿ ಕೃತಿಯ ಬೆರಳಚ್ಚು ಸಂಗ್ರಹಿಸುವಲ್ಲಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ತಾಯಿ-ಮಗಳ ಬೆರಳಚ್ಚು ಸಂಗ್ರಹಿಸಲು ಮುಂದಾದಾಗ ಆರಂಭದಲ್ಲಿ ಇಬ್ಬರೂ ಸಹಕರಿಸಿಲ್ಲ. ಅದರಲ್ಲೂ ಕೃತಿ ಮತ್ತೆ ತನ್ನ ಹೈಡ್ರಾಮಾ ಮುಂದುವರೆಸಿದ್ದಾಳೆ. ನನ್ನ ಬೆರಳಚ್ಚು ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಚೀರಾಡಿದ್ದಾಳೆ. ಆದರೂ ಬಿಡದ ಪೊಲೀಸರು ಹಾಗೂ ಎಫ್ಎಸ್ಎಲ್ ತಜ್ಞರು ತಾಯಿ-ಮಗಳ ಬೆರಳಚ್ಚು ಸಂಗ್ರಹಿಸಿದ್ದಾರೆ. ಘಟನಾ ಸ್ಥಳದಲ್ಲಿ ಸಿಕ್ಕ ಚಾಕು ಹಾಗೂ ಮೃತದೇಹದ ಮೇಲಿನ ಬೆರಳಚ್ಚು ಹೋಲಿಕೆ ಮಾಡಲಿದ್ದಾರೆ.
IPS Officer Om Prakash has reportedly been murdered by his own daughter and wife in a calculated plot that has left the law enforcement community in disbelief. Authorities have revealed that the daughter, currently residing in Karwar, allegedly orchestrated the plan to eliminate her father. It is suspected that she communicated with her mother, coordinating their actions from a distance.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm