ಬ್ರೇಕಿಂಗ್ ನ್ಯೂಸ್
28-04-25 11:24 am Mangalore Correspondent ಕ್ರೈಂ
ಉಳ್ಳಾಲ,ಎ.28 : ಬೈಕ್ನಲ್ಲಿ ತೆರಳುತ್ತಿದ್ದ ಅಡಿಕೆ ವ್ಯಾಪಾರಿಗೆ ಗುಂಡೇಟು ಬಿದ್ದಿರುವ ಘಟನೆ ಕರ್ನಾಟಕ- ಕೇರಳ ಗಡಿಭಾಗ ಬಾಕ್ರಬೈಲ್ ತಿರುವಿನಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಬಾಕ್ರಬೈಲ್ ನಡೀಬೈಲು ನಿವಾಸಿ ಸವಾದ್ (22) ಎಂಬ ಯುವಕ ಶೂಟೌಟ್ ಒಳಗಾದವರು.
ನಿನ್ನೆ ರಾತ್ರಿ ಬೈ ಕ್ ನಲ್ಲಿ ಮನೆ ಕಡೆಗೆ ತೆರಳುತ್ತಿದ್ದ ಸಂದರ್ಭ ಬಾಕ್ರಬೈಲ್ ತಿರುವಿನ ಸೂರ್ಯೇಶ್ವರ ದ್ವಾರದ ಬಳಿ ಶೂಟೌಟ್ ನಡೆದಿದೆ. ಕಾಲಿಗೆ ಗಂಭೀರ ಗಾಯಗೊಂಡ ಸವಾದ್ ನನ್ನು ತಕ್ಷಣ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಚೇತರಿಸಿಕೊಂಡಿದ್ದಾರೆ. ಪ್ರಾಣಿ ಬೇಟೆಗೆ ಬಂದವರು ತಪ್ಪಿ ಗುಂಡು ಹಾರಿಸಿರುವ ಸಾಧ್ಯತೆ ಇರುವುದಾಗಿ ಮಂಜೇಶ್ವರ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರ್ಷಾದ್ ವರ್ಕಾಡಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.


ಇನ್ನೊಂದು ಮೂಲದ ಪ್ರಕಾರ ಗಾಂಜಾ ವ್ಯಸನಿಗಳು ಅಥವಾ ವ್ಯಾಪಾರಿಗಳು ಕೃತ್ಯ ಎಸಗಿರುವ ಸಾಧ್ಯತೆ ವ್ಯಕ್ತವಾಗಿದೆ. ಬೈಕ್ನಲ್ಲಿ ತೆರಳುವ ಸಂದರ್ಭ ನಿರ್ಜನ ಗುಡ್ಡದಲ್ಲಿ ವಾಹನದ ಹೆಡ್ಲೈಟ್ ಕಾಣಿಸಿದ್ದು., ಅದನ್ನು ಗಮನಿಸಿ ಸವಾದ್ ಬೈಕ್ ನಿಲ್ಲಿಸಿದ ಕಾರಣಕ್ಕೆ ಶೂಟೌಟ್ ನಡೆದಿದೆ ಅನ್ನುವ ಮಾತುಗಳು ಕೇಳಿಬಂದಿದೆ. ಘಟನೆ ನಡೆದ ಬಾಕ್ರಬೈಲ್ ಪ್ರದೇಶ ಕೇರಳಕ್ಕೆ ಸೇರಿದ್ದು ಮಂಜೇಶ್ವರ ಠಾಣಾ ಪೋಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದು ತನಿಖೆ ನಡೆಸುತ್ತಿದ್ದಾರೆ. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
In a shocking incident near Bakrebail, Mangalore, an arecanut trader named Savad sustained a bullet injury to his leg while traveling on a bike. Savad was immediately rushed to a hospital in Deralakatte, where he is currently receiving treatment. His condition is reported to be stable.
21-11-25 10:19 am
Bangalore Correspondent
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
ಸ್ತ್ರೀ ವೇಷಧಾರಿಗಳು ಸಹಕರಿಸದಿದ್ದರೆ ಮರುದಿನ ಮೇಳದಿಂ...
19-11-25 12:20 pm
19-11-25 06:47 pm
HK News Desk
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
20-11-25 10:48 pm
Mangalore Correspondent
Mangalore, Dharmasthala Case: ಧರ್ಮಸ್ಥಳ ಪ್ರಕರಣ...
20-11-25 10:08 pm
'ಮಹಿಷಾಸುರ'ನ ವೇಷ ಕಳಚುತ್ತಿದ್ದಂತೆ ಯಕ್ಷಗಾನ ಕಲಾವಿದ...
20-11-25 01:42 pm
ಡಿ.3ರಂದು ಕೊಣಾಜೆಯಲ್ಲಿ ನಾರಾಯಣ ಗುರು-ಗಾಂಧೀಜಿ 'ಸಂವ...
19-11-25 10:46 pm
ಯಕ್ಷಗಾನದ ಬಗ್ಗೆ ಅವಹೇಳನ ; ಬಿಳಿಮಲೆ ಅವರನ್ನು ಅಧ್ಯಕ...
19-11-25 07:28 pm
20-11-25 10:53 pm
Bangalore Correspondent
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am
B C Road, Crime, Mangalore: ಗ್ರಾಹಕಿ ಸೋಗಿನಲ್ಲಿ...
19-11-25 11:17 pm
Shri Tatvamasi Charitable Trust, Fraud: ಸುಳ್ಯ...
19-11-25 09:26 pm