ಬ್ರೇಕಿಂಗ್ ನ್ಯೂಸ್
08-05-25 05:32 pm HK News Desk ಕ್ರೈಂ
ನವದೆಹಲಿ, ಮೇ 8: ಜೈಶ್ ಇ ಮಹಮ್ಮದ್ ಮುಖ್ಯಸ್ಥ ಮೋಸ್ಟ್ ವಾಂಟೆಡ್ ಉಗ್ರ ಮೌಲಾನಾ ಮಸೂದ್ ಅಜರ್ನ ಸೋದರ, ಮುಫ್ತಿ ಅಬ್ದುಲ್ ರೌಫ್ ಅಸ್ಗರ್ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯಲ್ಲಿ ಬಲಿಯಾಗಿದ್ದಾನೆ.
1999ರಲ್ಲಿ ಭಾರತದಿಂದ ಕಂದಹಾರ್ ತೆರಳುತ್ತಿದ್ದ IC-814 ಪ್ರಯಾಣಿಕ ವಿಮಾನದ ಹೈಜಾಕ್ ಪ್ರಕರಣದಲ್ಲಿ ಅಬ್ದುಲ್ ರೌಫ್ ಅಸ್ಗರ್ ಮಾಸ್ಟರ್ ಮೈಂಡ್ ಆಗಿದ್ದ. ಮುಜಫರಬಾದ್ ನಲ್ಲಿರುವ ಜೈಶ್ ನೆಲೆಯ ಮೇಲೆ ಬಾಂಬ್ ದಾಳಿ ನಡೆಸಿದಾಗ ಮಸೂದ್ ಅಜರ್ ಪತ್ನಿ, ಸೋದರ ಸೇರಿದಂತೆ ಹತ್ತು ಮಂದಿ ಸಾವಿಗೀಡಾಗಿದ್ದರು.
ತೀವ್ರ ಗಾಯಗೊಂಡಿದ್ದ ಅಸ್ಗರ್ ಈಗ ಪ್ರಾಣ ಬಿಟ್ಟಿದ್ದಾನೆ. ಮುಫ್ತಿ ಅಬ್ದುಲ್ ರೌಫ್ ಅಸ್ಗರ್ನನ್ನು ಅಬ್ದುಲ್ ರೌಫ್ ಅಜರ್ ಅಂತಲೂ ಕರೆಯುತ್ತಿದ್ದರು. ಜೈಷ್-ಇ- ಮೊಹಮ್ಮದ್ ಸಂಘಟನೆಯ ಕಮಾಂಡರ್ ಹಾಗೂ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಂಡ್ ಉಗ್ರನೂ ಆಗಿದ್ದ.
ಭಾರತದ ದಾಳಿ ಬಗ್ಗೆ ಸ್ಥಳೀಯ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಮಸೂದ್ ಅಜರ್, ನನ್ನ ಕುಟುಂಬದ 10 ಮಂದಿಯ ಜೀವ ಹೋಗಿದೆ ಎಂದು ತಿಳಿಸಿದ್ದ. ಇದೇ ಮೌಲಾನಾ ಮಸೂದ್ ಅಜರ್ನನ್ನು ಐಸಿ-814 ಕಂದಹಾರ್ ವಿಮಾನ ಅಪಹರಣ ಸಂದರ್ಭದಲ್ಲಿ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಬಳಿಕ ಪಾಕ್ಗೆ ಹೋಗಿ ಭಾರತದ ವಿರುದ್ಧ ಜೈಷ್-ಇ-ಮೊಹಮ್ಮದ್ ಸಂಘಟನೆ ಕಟ್ಟಿದ್ದ.
ಇದೇ ಜೈಷ್ ಮೊಹಮ್ಮದ್ ಸಂಘಟನೆಯೇ 2001ರಲ್ಲಿ ಭಾರತದ ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿತ್ತು. ಮಸೂದ್ ಅಜರ್ ಅನುಪಸ್ಥಿತಿಯಲ್ಲಿ ಜೈಷ್ ಇ ಮೊಹಮ್ಮದ್ ಸಂಘಟನೆ ಮುನ್ನೆಡೆಸಿದ್ದ ರೌಫ್ ಅಜರ್ ನನ್ನು ಹೊಡೆದುರುಳಿಸುವಲ್ಲಿ ಭಾರತದ ಸೇನೆ ಯಶಸ್ವಿಯಾಗಿದೆ.
Abdul Rauf Azhar, a globally designated terrorist and the mastermind of the IC-814 Air India flight hijacking, was killed in Indian Armed Forces missile strikes on terror launch pads in Pakistan's Punjab and PoK under 'Operation Sindoor' on Wednesday sources said
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm