Reshma Bariga, FIR, Mangalore; ಆಪರೇಶನ್ ಸಿಂಧೂರ ಬಗ್ಗೆ ಅಣಕಿಸಿ ಇನ್ ಸ್ಟಾ ಗ್ರಾಮ್ ಪೋಸ್ಟ್ ; ಕೊಣಾಜೆ ಠಾಣೆಯಲ್ಲಿ ಎಫ್ಐಆರ್, ಮಂಗಳೂರು ವಿವಿ ವಿದ್ಯಾರ್ಥಿನಿ ಪೊಲೀಸ್ ವಶಕ್ಕೆ  

18-05-25 07:45 pm       Mangaluru HK Staff   ಕ್ರೈಂ

ಭಾರತ ಸೇನೆಯ ಆಪರೇಶನ್ ಸಿಂಧೂರ ಕಾರ್ಯಾಚರಣೆಯನ್ನು ಅಣಕಿಸಿ ಇನ್ ಸ್ಟಾ ಗ್ರಾಮ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಮಂಗಳೂರು ವಿವಿಯ ಸ್ನಾತಕೋತ್ತರ ವಿದ್ಯಾರ್ಥಿನಿ ರೇಷ್ಮಾ ಬಾರಿಗ ಎಂಬ ಯುವತಿ ವಿರುದ್ಧ ಕೋಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ಮೇ 18: ಭಾರತ ಸೇನೆಯ ಆಪರೇಶನ್ ಸಿಂಧೂರ ಕಾರ್ಯಾಚರಣೆಯನ್ನು ಅಣಕಿಸಿ ಇನ್ ಸ್ಟಾ ಗ್ರಾಮ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಮಂಗಳೂರು ವಿವಿಯ ಸ್ನಾತಕೋತ್ತರ ವಿದ್ಯಾರ್ಥಿನಿ ರೇಷ್ಮಾ ಬಾರಿಗ ಎಂಬ ಯುವತಿ ವಿರುದ್ಧ ಕೋಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೇಶ್ಮಾ ಬಾರಿಗ ಎಂಬ ಹೆಸರಿನ ಇನ್ಸ್ ಟಾ ಗ್ರಾಮ್ ಖಾತೆಯಲ್ಲಿ ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ, ಅಲ್ಲಿ ನಂದಿ ಹೋಯಿತು ಬೆಳಕು ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ.. ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿದ್ದು ಕತ್ತಲು.... ಎಲ್ಲೆಲ್ಲೂ ಕತ್ತಲು.. ದಿಕ್ಕಾರ ಆಪರೇಶನ್ ಸಿಂದೂರ ಎಂದು ಪೋಸ್ಟ್ ಮಾಡಿರುವುದು ವೈರಲ್ ಆಗಿತ್ತಲ್ಲದೆ, ಸಾರ್ವಜನಿಕ ವಲಯದಲ್ಲಿ ಆಕ್ರೋಶವೂ ವ್ಯಕ್ತವಾಗಿತ್ತು.

ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕಲಂ 192, 196, 353(1)ಬಿ, 353(2) ಪ್ರಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ರೇಷ್ಮಾ ಬೆಳಾಲು ಬೆಳ್ತಂಗಡಿ ಮೂಲದವಳಾಗಿದ್ದು, ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಚೋದನಕಾರಿ ಮತ್ತು ಸೇನೆಯನ್ನು ಅಪಮಾನಿಸುವ ರೀತಿ ಪೋಸ್ಟ್ ಮಾಡಿದ್ದಕ್ಕೆ ಸ್ಪಷ್ಟನೆ ಕೇಳಿದ್ದು, ಕಾನೂನಿನ ಬಿಸಿ ಮುಟ್ಟಿಸಿದ್ದಾರೆ. ಸದ್ರಿ ಪ್ರಕರಣದ ಮುಂದಿನ ತನಿಖೆಯನ್ನು ಸಿಇಎನ್ ಠಾಣೆಗೆ ವರ್ಗಾಯಿಸಲಾಗಿದೆ.

Mocking Operation Sindhoora on Instagram, FIR Registered at Konaje Station on reshma bariga