ಬ್ರೇಕಿಂಗ್ ನ್ಯೂಸ್
23-05-25 11:20 pm Mangalore Correspondent ಕ್ರೈಂ
ಮಂಗಳೂರು, ಮೇ 23 : ಡ್ರಗ್ಸ್ ಅಮಲು ಮನುಷ್ಯನ ಕೈಯಲ್ಲಿ ಏನನ್ನೂ ಮಾಡಿಸುತ್ತದೆ ಅಂತ ಹೇಳುತ್ತಾರೆ. ಅಡ್ಯಾರ್ ವಳಚ್ಚಿಲ್ ಪದವಿನಲ್ಲಿ ನಡೆದ ಘಟನೆ ಈ ಮಾತನ್ನು ನಿಜಗೊಳಿಸಿದೆ. ಹಾಳು ಹೋದ ಸಂಸಾರವನ್ನು ಒಂದುಗೂಡಿಸಲು ಹೋದ ಸ್ವಂತ ಚಿಕ್ಕಪ್ಪನನ್ನೇ ಯುವಕನೊಬ್ಬ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ.
ಮಂಗಳೂರು ಹೊರವಲಯದ ವಳಚ್ಚಿಲ್ ಪದವಿನಲ್ಲಿ ಗುರುವಾರ ರಾತ್ರಿ ನಡೆದ ಘಟನೆ, ಕ್ಷುಲ್ಲಕ ಕಾರಣಕ್ಕೂ ಜನ ಜೀವ ತೆಗೆಯುತ್ತಾರೆಯೇ ಎಂಬ ಉದ್ಗಾರ ಕೇಳಿಬರುವಂತೆ ಮಾಡಿದೆ. ಯಾಕಂದ್ರೆ, ಮೃತಪಟ್ಟ 52 ವರ್ಷದ ಸುಲೇಮಾನ್ ಅವರು ಕೊಲೆ ಆರೋಪಿ ಮುಸ್ತಫಾ ಪಾಲಿಗೆ ಹತ್ತಿರ ಸಂಬಂಧಿಕ. ಸುಲೇಮಾನ್ ಪತ್ನಿಯ ಸ್ವಂತ ಅಕ್ಕನ ಮಗನೇ ಮುಸ್ತಫಾ. ಕೆಲಸಕ್ಕೆ ಹೋಗದೆ ಮನೆಯಲ್ಲೇ ಬಿದ್ದುಕೊಂಡಿರುತ್ತಿದ್ದ ಮುಸ್ತಫಾನಿಗೆ ಆತನ ಹೆತ್ತವರ ಕೋರಿಕೆಯಂತೆ ಸುಲೇಮಾನ್ ಅವರೇ ತನ್ನ ಸಂಬಂಧಿಕಳೂ ಆದ ಯುವತಿಯನ್ನು ಎಂಟು ತಿಂಗಳ ಮದುವೆ ಮಾಡಿಸಿದ್ದರು. ಆದರೆ ಮದುವೆಯಾದ ಬೆನ್ನಲ್ಲೇ ಮುಸ್ತಫಾ ಸೈಕೋ ತರ ವರ್ತಿಸಲಾರಂಭಿಸಿದ್ದ.
ಸಂಬಂಧಿಕರು ಹೇಳುವ ಪ್ರಕಾರ, ಮುಸ್ತಫಾ ಡ್ರಗ್ಸ್ ವ್ಯಸನಿಯಾಗಿದ್ದ. ಹೀಗಾಗಿ ಹಿಂದೆ ಗುಜಿರಿ ವ್ಯಾಪಾರ, ಆನಂತರ ರಿಕ್ಷಾ ಡ್ರೈವರ್ ಆಗಿದ್ದರೂ ಹೆಚ್ಚಿನ ಸಮಯ ಮನೆಯಲ್ಲೇ ಇರುತ್ತಿದ್ದ. ಮನೆಯಲ್ಲಾಗಲೀ, ಹೊರಗಡೆಯಾಗಲೀ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಒಬ್ಬಂಟಿಯಾಗಿಯೇ ಇರುತ್ತಿದ್ದ. ಈತನ ಉಪಟಳ ತಾಳಲಾರದೆ ಪತ್ನಿ ಮನೆ ಬಿಟ್ಟು ಹೋಗಿದ್ದಳು. ಈ ವಿಚಾರದಲ್ಲಿ ಆತನ ಮನೆಯವರು ಸುಲೇಮಾನ್ ಹಿಂದೆ ಬಿದ್ದಿದ್ದರು. ಏನಾದ್ರೂ ಮಾಡಿ, ಮಗನ ಸಂಸಾರ ಸರಿ ಮಾಡಿಕೊಡಿ ಅಂತ ಅಂಗಲಾಚಿದ್ದರು. ಅದರಂತೆ, ಗುರುವಾರ ರಾತ್ರಿ ಸುಲೇಮಾನ್, ತನ್ನ ಹತ್ತಿರದ ಸಂಬಂಧಿಕನೂ ಆದ ಮುಸ್ತಫಾ ಮನೆಗೆ ಬಂದಿದ್ದರು. ಆದರೆ, ಮಾತುಕತೆ ಆಡುತ್ತಿರುವಾಗಲೇ ಮುಸ್ತಫಾ ಎದುರು ಮಾತನಾಡಿ ಗುರಾಯಿಸುತ್ತಿದ್ದ. ಆನಂತರ, ಇದು ಸರಿ ಹೋಗೋ ವಿಷ್ಯ ಅಲ್ಲ ಅಂತ ಸುಲೇಮಾನ್ ಮತ್ತು ಮಕ್ಕಳು ರಾತ್ರಿಯಾಯ್ತೆಂದು ಅಲ್ಲಿಂದ ಕಾಲ್ಕೀಳಲು ಮುಂದಾಗಿದ್ದರು.
ಇದೇ ವೇಳೆ ಮುಸ್ತಫಾ ಮನೆಯ ಅಡುಗೆ ಕೋಣೆಯಲ್ಲಿದ್ದ ಹರಿತ ಚೂರಿಯನ್ನು ತಂದಿದ್ದು ಸುಲೇಮಾನ್ ಅವರ ಮಗನಿಗೆ ಇರಿಯಲು ಯತ್ನಿಸಿದ್ದಾನೆ. ಅಡ್ಡ ಬಂದಿದ್ದ ಸುಲೇಮಾನ್ ಅವರ ಕುತ್ತಿಗೆಯನ್ನೇ ಸೀಳಿ ಹಾಕಿದ್ದಾನೆ. ಇನ್ನೊಬ್ಬ ಮಗನಿಗೂ ಚೂರಿ ಬೀಸಿದ್ದು, ಆತನ ಅಂಗೈಗೆ ಗಾಯವಾಗಿತ್ತು. ಸುಲೇಮಾನ್ ಕುತ್ತಿಗೆ ಸೀಳಿದ್ದರಿಂದ ನರಗಳು ಕಟ್ ಆಗಿ ರಕ್ತ ಚಿಮ್ಮತೊಡಗಿತ್ತು. ಮುಸ್ತಫಾ ಮನೆಯವರೆಲ್ಲ ಇರುವಂತೆಯೇ ಘಟನೆ ನಡೆದಿದ್ದು, ಸುಲೇಮಾನ್ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಆನಂತರ ಸ್ಥಳೀಯರು ಸೇರಿ ಮೂವರನ್ನೂ ಕಾರಿನಲ್ಲಿ ಹಾಕಿ, ಅಡ್ಯಾರ್ ಆಸ್ಪತ್ರೆಗೆಂದು ತರುತ್ತಿದ್ದರು. ಆದರೆ, ವಳಚ್ಚಿಲ್ ನಲ್ಲಿ ಬರುತ್ತಿದ್ದಾಗಲೇ ಅಡ್ಡಲಾಗಿದ್ದ ರೈಲ್ವೇ ಗೇಟ್ ಹಾಕಲಾಗಿತ್ತು. ಇದರಿಂದ ಮತ್ತೆ 15 ನಿಮಿಷ ವಿಳಂಬವಾಗಿದ್ದು, ಸುಲೇಮಾನ್ ರಕ್ತ ಸ್ರಾವದಿಂದಾಗಿ ಅಷ್ಟರಲ್ಲಿ ಜೀವ ಹಾರಿ ಹೋಗಿತ್ತು.
ಅಡ್ಯಾರಿನ ಖಾಸಗಿ ಆಸ್ಪತ್ರೆಗೆ ತಲುಪಿದಾಗ, ಸುಲೇಮಾನ್ ಪ್ರಾಣ ಹೋಗಿದೆಯೆಂದು ವೈದ್ಯರು ತಿಳಿಸಿದ್ದಾರೆ. ಗಾಯಗೊಂಡಿದ್ದ ಇಬ್ಬರು ಹರೆಯದ ಯುವಕರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುಸ್ತಫಾ ಡ್ರಗ್ಸ್ ಅಮಲಿನಲ್ಲಿಯೇ ಇದ್ದನೋ, ಆತನ ವರ್ತನೆಯೇ ಅಂಥದ್ದೋ ಎನ್ನುವುದು ಗೊತ್ತಿಲ್ಲ. ಆದರೆ ಕ್ಷಣಿಕ ಸಿಟ್ಟು, ದುರ್ಬುದ್ಧಿಯ ವರ್ತನೆಯಿಂದಾಗಿ ಅಮಾಯಕ ವ್ಯಕ್ತಿಯೊಬ್ಬರು ಜೀವ ಕಳಕೊಂಡಿದ್ದಾರೆ. ಅದರಲ್ಲೂ ಹತ್ತಿರದ ಸಂಬಂಧಿಕನೇ ಈ ರೀತಿಯ ಕೃತ್ಯ ಎಸಗಿದ್ದು ಸುಲೇಮಾನ್ ಸಂಬಂಧಿಕರಲ್ಲಿ ವಿಚಿತ್ರ ಭಾವ ಮೂಡಿಸಿದೆ. ಮುಸ್ತಫಾ ಜನ ಸರಿ ಇಲ್ಲ ಎನ್ನುವುದು ಗೊತ್ತಿತ್ತು. ಆದರೆ ಇಂಥ ಕೃತ್ಯ ಎಸಗುವ ವ್ಯಕ್ತಿಯೆಂದು ತಿಳಿದಿರಲಿಲ್ಲ ಎನ್ನುತ್ತಾರೆ. ಆತ ಸಂಬಂಧಿಕ ಆಗಿದ್ದರೂ ಜನ ಸರಿ ಇಲ್ಲವೆಂದು ಆತನ ಮದುವೆಗೂ ಹೋಗಿರಲಿಲ್ಲ. ಮದುವೆಯಾದರೂ ಆ ಹುಡುಗಿಯನ್ನೂ ಸರಿಯಾಗಿ ನೋಡಿಕೊಂಡಿರಲಿಲ್ಲ ಎಂದು ಸಂಬಂಧಿಕರು ಹೇಳುತ್ತಾರೆ.
Mangalore Valachil Murder, how did the accused kill his own uncle, crime report by Headline Karnataka.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 10:54 am
HK News Desk
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
03-09-25 11:03 pm
Mangalore Correspondent
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
Sowjanya Case, SIT, Uday Jain: 13 ವರ್ಷಗಳ ಬಳಿಕ...
03-09-25 03:45 pm
College student Missing, Mangalore: ಮಂಗಳೂರಿನಲ...
03-09-25 11:53 am
04-09-25 12:25 pm
Udupi Correspondent
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am