ಬ್ರೇಕಿಂಗ್ ನ್ಯೂಸ್
02-06-25 04:01 pm Mangalore Correspondent ಕ್ರೈಂ
ಉಳ್ಳಾಲ, ಜೂ 2 : ಕೇರಳದಿಂದ ಕದ್ದು ಕೂಡಿ ಹಾಕಿದ್ದ ಸುಮಾರು 24ಕ್ಕೂ ಹೆಚ್ಚು ಜಾನುವಾರುಗಳನ್ನ ಕಂಟೇನರ್ ಲಾರಿಯಲ್ಲಿ ಕೇರಳದಿಂದ ಮಂಗಳೂರಿಗೆ ಸಾಗಿಸುತ್ತಿದ್ದ ವೇಳೆ ತಲಪಾಡಿ ಟೋಲ್ ಗೇಟ್ ಬಳಿ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಜಾನುವಾರುಗಳನ್ನ ರಕ್ಷಿಸಿದ್ದಾರೆ.
ನಿನ್ನೆ (ಭಾನುವಾರ) ಮುಂಜಾನೆ 1 ಗಂಟೆಗೆ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಘಟಕದ ಪಿಎಸ್ ಐ ಶರಣಪ್ಪ ಭಂಡಾರಿ ನೇತೃತ್ವದ ತಂಡ, ತಲಪಾಡಿ ಟೋಲ್ ಗೇಟ್ ಬಳಿ ಜಾನುವಾರು ಸಾಗಾಟದ ಲಾರಿ ಬರುವುದನ್ನೇ ಕಾದು ಕುಳಿತಿತ್ತು. ಈ ವೇಳೆ ಕೇರಳದಿಂದ ಬಂದ ಕಂಟೇನರ್ ಲಾರಿಯ ನ್ನ ತಡೆದು ತಪಾಸಣೆ ನಡೆಸಿದಾಗ ಸುಮಾರು 24 ಜಾನುವಾರುಗಳನ್ನ ಅಮಾನುಷ, ಹಿಂಸಾತ್ಮಕ ರೀತಿಯಲ್ಲಿ,ಸಾಗಿಸುತ್ತಿರುವುದು ಪತ್ತೆಯಾಗಿದೆ. ಪೋಲೀಸರು ಕಂಟೇನರ್ ಚಾಲಕ ಉತ್ತರ ಪ್ರದೇಶ, ಮುಜಾಫರ್ ನಗರ ಜಿಲ್ಲೆಯ ಸಹಾನ್ ಪೂರ್ ನಿವಾಸಿ ಆಸಿಫ್(25) ಎಂಬಾತನನ್ನ ಬಂಧಿಸಿದ್ದು, ಆತನ ಜೊತೆಯಲ್ಲಿದ್ದ ಮತ್ತೋರ್ವ ಪರಾರಿಯಾಗಿದ್ದಾನೆ.
ಜಾನುವಾರುಗಳನ್ನ ಕೇರಳದಿಂದ ಕದ್ದು ಸಾಗಿಸುತ್ತಿರುವ ಬಗ್ಗೆ ಬಂಧಿತ ಲಾರಿ ಡ್ರೈವರ್ ಆಸಿಫ್ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ. ಜಾನುವಾರುಗಳನ್ನ ಎಲ್ಲೋ ಕೂಡಿಟ್ಟು ಬಳಿಕ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ನಡೆಸಿದ ಆರೋಪಿ ಆಸಿಫ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ಠಾಣೆಯಲ್ಲಿ ಕಳೆದ ಹತ್ತು ವರುಷಗಳಿಂದ ಖಾಕಿ ಸಮವಸ್ತ್ರದಲ್ಲೇ ಝಂಡಾ ಹೊಡಿರುವ ಸ್ಪೆಷಲ್ ಬ್ರಾಂಚ್ ಅತ್ಯನುಭವಿ ಪೊಲೀಸ್ ಇದ್ದರೂ ಈ ಭಾಗದಲ್ಲಿ ಅಕ್ರಮ ದನ ಸಾಗಣೆ, ಮರಳುಗಾರಿಕೆ, ಕೊಲೆ, ದರೋಡೆಗಳು ಮಾತ್ರ ನಿರಂತರವಾಗಿ ನಡೆಯುತ್ತಲೇ ಇದೆ. ನೂತನವಾಗಿ ಅಧಿಕಾರ ಸ್ವೀಕರಿಸಿರುವ ಖಡಕ್ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ನಗರವನ್ನ ಅಕ್ರಮ ಚಟುವಟಿಕೆಗಳಿಂದ ಮುಕ್ತವನ್ನಾಗಿಸಲು ಪೊಲೀಸರಿಗೆ ಆದೇಶಿಸಿದ ಕಾರಣ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಫ್ರೀ ಹ್ಯಾಂಡ್ ಆಗಿ ನುಗ್ಗಿ ಭೇಟೆಯಾಡುವಂತಾಗಿದೆ.
ಹತ್ತು ವರ್ಷದಿಂದ ಒಂದೇ ಠಾಣೆಯಲ್ಲೇ ಝಂಡಾ !
ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಅವರು ಒಂದೇ ಠಾಣೆಯಲ್ಲಿ ನಾಲ್ಕು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಗಳನ್ನ ವರ್ಗಾವಣೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಕಳೆದ ಹತ್ತು ವರ್ಷದಿಂದ ಒಂದೇ ಠಾಣೆಯಲ್ಲೇ ಝಂಡಾ ಹೂಡಿರುವ ಪೊಲೀಸರನ್ನು ಗುರುತಿಸಿ ಎತ್ತಂಗಡಿ ಮಾಡುವಂತೆ ಜನಸಾಮಾನ್ಯರು ಆಗ್ರಹಿಸಿದ್ದಾರೆ.
ಪೊಲೀಸರ ಕಾರ್ಯಾಚರಣೆಗೆ ವಿಹಿಂಪ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Mangalore CCB police intercepted a container truck near Talapady toll gate around 1 AM on Sunday, acting on a tip-off. The truck was transporting over 24 cattle in an inhumane and violent manner from Kerala to Mangaluru. The operation, led by PSI Sharanappa Bhandari, resulted in the arrest of driver Asif (25) from Saharanpur, Uttar Pradesh. Another accused managed to flee.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 10:54 am
HK News Desk
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
03-09-25 11:03 pm
Mangalore Correspondent
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
Sowjanya Case, SIT, Uday Jain: 13 ವರ್ಷಗಳ ಬಳಿಕ...
03-09-25 03:45 pm
College student Missing, Mangalore: ಮಂಗಳೂರಿನಲ...
03-09-25 11:53 am
04-09-25 12:25 pm
Udupi Correspondent
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am