ಬ್ರೇಕಿಂಗ್ ನ್ಯೂಸ್
11-06-25 07:26 pm Mangalore Correspondent ಕ್ರೈಂ
ಮಂಗಳೂರು, ಜೂನ್ 11 : ಜುಗಾರಿ ಆಟ ಆಡುತ್ತಿದ್ದ ಜಾಗಕ್ಕೆ ದಾಳಿ ನಡೆಸಿ, ಆರೋಪಿಗಳು ಕೈಗೆ ಸಿಗದೇ ಇದ್ದಾಗ ಹಣಕ್ಕಾಗಿ ಪೀಡಿಸಿ ಆಡಿಯೋದಲ್ಲಿ ಸಿಕ್ಕಿಬಿದ್ದ ವಿಟ್ಲ ಠಾಣೆಯ ಪಿಎಸ್ಐ ಒಬ್ಬರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕರ್ತವ್ಯದಿಂದ ಅಮಾನತುಗೊಳಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜುಗಾರಿ ನಡೆಸುತ್ತಿದ್ದವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಿಟ್ಲ ಠಾಣೆ ಪಿಎಸ್ಐ ಬಿ.ಸಿ ಕೌಶಿಕ್ ಅಮಾನತು ಆದವರು.
ಮೇ ತಿಂಗಳ 8ರಂದು ವಿಟ್ಲ ಪೇಟೆ ಬಳಿಯ ಪಳಿಕೆ ಎಂಬಲ್ಲಿ ನಾಲ್ವರು ಯುವಕರು ಜುಗಾರಿ ಆಡುತ್ತಿದ್ದ ಮಾಹಿತಿ ಪಡೆದ ವಿಟ್ಲ ಠಾಣೆ ಪಿಎಸೈ ಬಿ.ಸಿ.ಕೌಶಿಕ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ, ಅಲ್ಲಿದ್ದವರು ಪರಾರಿಯಾಗಿದ್ದರೆ, ದ್ವಿಚಕ್ರ ವಾಹನ ಒಂದನ್ನು ಬಿಟ್ಟು ಹೋಗಿದ್ದರು. ಆರೋಪಿಗಳು ಯಾರೆಂದು ತಿಳಿದು ಒಬ್ಬಾತನಿಗೆ ಕರೆ ಮಾಡಿದ್ದ ಎಸೈ ಕೌಶಿಕ್, ಸ್ಕೂಟರ್ ಬಿಡಿಸಿಕೊಂಡು ಹೋಗಲು ಠಾಣೆಗೆ ಬಾ.. ಇಲ್ಲದಿದ್ದರೆ ಮನೆಗೆ ನುಗ್ಗುತ್ತೇನೆಂದು ಬೆದರಿಸಿದ್ದರು.
ಆ ವ್ಯಕ್ತಿ ಮತ್ತೆ ಎಸ್ಐ ಕೌಶಿಕ್ ಅವರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ವಿಚಾರಿಸಿದಾಗ, ಕ್ರಿಮಿನಲ್ ಹಿನ್ನೆಲೆಯ ಜಮಾಲ್ ಎಂಬಾತನ ಬಳಿ ಹೋಗಿ ಮಾತಾಡಿ ಸೆಟ್ಲ್ ಮಾಡ್ಕೊಳ್ಳುವಂತೆ ಹೇಳಿದ್ದರು. ಅದೇ ಯುವಕ, ಜಮಾಲ್ ಬಳಿ ಮಾತಾಡಿದಾಗ ಮೂವತ್ತು ಸಾವಿರ ಕೊಡು. ಸ್ಟೇಶನ್ ಕೊಡಲಿಕ್ಕಿದೆ, ಎಲ್ಲವನ್ನೂ ಮುಗಿಸುತ್ತೇನೆ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಎಸ್ಐ ಮತ್ತು ಜಮಾಲ್ ಜೊತೆಗೆ ಸರ್ಫುದ್ದೀನ್ ಎಂಬಾತ ಸಂಭಾಷಣೆ ನಡೆಸಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಎಸ್ಐ ಬಿ.ಸಿ.ಕೌಶಿಕ್ ಅವರನ್ನು ಈ ಹಿಂದಿನ ಎಸ್ಪಿ ಯತೀಶ್, ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶಿಸಿದ್ದರು.
ಆನಂತರ, ಎಸ್ಪಿ ಯತೀಶ್ ವರ್ಗಾವಣೆಯಾಗಿದ್ದರಿಂದ ಇಲಾಖಾ ತನಿಖೆ ಆಗಿರಲಿಲ್ಲ. ಇಲಾಖಾ ತನಿಖೆಯ ಹೊಣೆಯನ್ನು ಸುಳ್ಯದ ಇನ್ಸ್ ಪೆಕ್ಟರ್ ತಿಮ್ಮಪ್ಪ ಕುಲಾಲ್ ಗೆ ವಹಿಸಲಾಗಿತ್ತು. ಒಂದು ತಿಂಗಳ ಬಳಿಕ ಜೂನ್ 9ರಂದು ಇಲಾಖಾ ತನಿಖೆ ಹಿನ್ನೆಲೆಯಲ್ಲಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆಂದು ಆರೋಪಿಸಿದ್ದ ಸರ್ಫುದ್ದೀನ್, ಮಧ್ಯವರ್ತಿ ಜಮಾಲ್, ಮತ್ತು ಜೂಜು ಅಡ್ಡೆಗೆ ದಾಳಿ ನಡೆಸಿದ್ದ ಇತರ ಸಿಬಂದಿಯನ್ನು ತನಿಖೆಗೆ ಒಳಪಡಿಸಲಾಗಿದೆ. ಹೀಗಾಗಿ ಒಂದು ತಿಂಗಳ ಬಳಿಕ ಪಿಎಸ್ ಐ ಅಮಾನತು ಸುದ್ದಿ ಹೊರ ಬಂದಿದೆ.
ಪೊಲೀಸರ ಬ್ರೋಕರ್ ಆಗಿ ಪೋಸು ನೀಡುತ್ತಿರುವ ಜಮಾಲ್ ವಿಟ್ಲದ್ದೇ ನಿವಾಸಿಯಾಗಿದ್ದು ನಟೋರಿಯಸ್ ಹನಿಟ್ರ್ಯಾಪ್ ಬ್ಲಾಕ್ಮೇಲರ್. ಕೊಡಗಿನ ಪಿರಿಯಾಪಟ್ಟಣದಲ್ಲಿ ಮೂರು ವರ್ಷಗಳ ಹಿಂದೆ ಕೇರಳದ ಉದ್ಯಮಿಯೊಬ್ಬನ ಹನಿಟ್ರ್ಯಾಪ್ ನಡೆಸಿದ್ದ ಜಮಾಲ್ ಲಕ್ಷಗಟ್ಟಲೆ ಸುಲಿಗೆ ಮಾಡಿ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದ. ಆನಂತರ, ಅದೇ ಕೇರಳದ ವ್ಯಕ್ತಿ ಬೇರೊಬ್ಬರ ಮುಖಾಂತರ ಜಮಾಲ್ ನನ್ನು ಬರಮಾಡಿಕೊಂಡು ಚೆನ್ನಾಗಿ ಉಪಚರಿಸಿ ಕಳಿಸಿದ್ದ. ಇದರಿಂದ ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ನರಳಾಡಿದ್ದ ಜಮಾಲ್ ಮತ್ತೆ ಚಾಳಿ ಮುಂದುವರಿಸಿ, ಉಪ್ಪಿನಂಗಡಿಯಲ್ಲಿ ಮತ್ತೊಂದು ಹನಿಟ್ರ್ಯಾಪ್ ನಡೆಸಿ ಜೈಲು ಸೇರಿದ್ದ. ಪೊಲೀಸರ ಜೊತೆಗೂ ಬ್ರೋಕರ್ ಕೆಲಸ ಮಾಡುತ್ತಿದ್ದು ಈತನ ಅಸಲಿತನ ಅರಿಯದ ಎಸೈ ಬಿ.ಸಿ.ಕೌಶಿಕ್ ಹಣದ ಹಿಂದೆ ಹೋಗಿ ಅಮಾನತು ಆಗಬೇಕಾಗಿ ಬಂದಿದೆ.
In a startling development, Vittal Police Sub-Inspector B.C. Kaushik has been suspended after an alleged bribe demand came to light through a leaked audio recording. The incident, which occurred following a gambling raid in May, has triggered departmental action against multiple individuals, including middlemen allegedly operating between the accused and police officers.
21-09-25 10:23 pm
HK News Desk
ಅಳಂದ ವಿಧಾನಸಭೆ ಕ್ಷೇತ್ರದಲ್ಲಿ ಮತ ಕಳ್ಳತನ ; ತನಿಖೆಗ...
21-09-25 01:28 pm
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
21-09-25 02:30 pm
Bangalore Correspondent
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm