ಬ್ರೇಕಿಂಗ್ ನ್ಯೂಸ್
17-06-25 05:06 pm Bangalore Correspondent ಕ್ರೈಂ
ಬೆಂಗಳೂರು, ಜೂ 17 : ಮಾದಕ ಪದಾರ್ಥಗಳ ಮಾರಾಟ ದಂಧೆಯಲ್ಲಿ ಕಳೆದ 10 ವರ್ಷಗಳಿಗೂ ಅಧಿಕ ಅವಧಿಯಿಂದಲೂ ಸಕ್ರಿಯನಾಗಿದ್ದ ಆರೋಪಿ ಒಬ್ಬನನ್ನ ಸಿಸಿಬಿ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೈಜೀರಿಯಾ ಮೂಲದ ಚಿಕ್ವುಮಾ ಬಂಧಿತ ಆರೋಪಿ. ಅವಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಆರೋಪಿಯ ಮನೆ ಮೇಲೆ ದಾಳಿ ನಡೆಸಿದ ಮಾದಕ ದ್ರವ್ಯ ನಿಗ್ರಹದಳದ ಪೊಲೀಸರು, ಬರೋಬ್ಬರಿ 1.2 ಕೋಟಿ ರೂ. ಮೌಲ್ಯದ 600 ಗ್ರಾಂ ತೂಕದ ಎಂಡಿಎಂಎ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ವಾಸವಿದ್ದ ಆರೋಪಿ, ಕಡಿಮೆ ಬೆಲೆಗೆ ಮಾದಕ ಪದಾರ್ಥಗಳನ್ನು ಖರೀದಿಸಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳು, ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದ. ಆರೋಪಿ ಕುರಿತು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು. ಈ ವೇಳೆ, 1.2 ಕೋಟಿ ರೂ ಮೌಲ್ಯದ ಎಂಡಿಎಂ ವಶಕ್ಕೆ ಪಡೆದುಕೊಂಡಿರುವುದಾಗಿ ಮಾದಕ ದ್ರವ್ಯ ನಿಗ್ರಹದಳದ ಪೊಲೀಸರು ಮಾಹಿತಿ ನೀಡಿದ್ದಾರೆ.
ಚೂಡಿದಾರ್ ಪೀಸ್ಗಳಲ್ಲಿ ಎಂಡಿಎಂಎ:
ದೆಹಲಿಯಿಂದ ಬಸ್ ಮೂಲಕ ಬೆಂಗಳೂರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ನೈಜೀರಿಯಾ ಮೂಲದ ಪ್ರಿನ್ಸೆಸ್ (25) ಎಂಬ ಮಹಿಳಾ ಆರೋಪಿಯನ್ನು ಇತ್ತೀಚೆಗೆ ಬಂಧಿಸಿದ್ದ ಸಿಸಿಬಿ ಪೊಲೀಸರು, ಆಕೆಯಿಂದ 10 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ಡ್ರಗ್ಸ್ ಜಪ್ತಿ ಮಾಡಿದ್ದರು.
ಬಂಧಿತ ಆರೋಪಿಯು ಪೊಲೀಸರ ಕಣ್ತಪ್ಪಿಸಲು ಕವರ್ನಲ್ಲಿ ಪ್ಯಾಕ್ ಮಾಡಿ ಚೂಡಿದಾರ್ ಡ್ರೆಸ್ ಪೀಸ್ಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ನಗರಕ್ಕೆ ತಂದಿದ್ದು ತನಿಖೆಯಿಂದ ತಿಳಿದು ಬಂದಿತ್ತು. ಆರೋಪಿಯಿಂದ 5.325 ಕೆ.ಜಿ.ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್, ಒಂದು ಆ್ಯಪಲ್ ಮೊಬೈಲ್ ಹಾಗೂ 11 ಜೊತೆ ಹೊಸ ಚೂಡಿದಾರ್ ಡ್ರೆಸ್ ಪೀಸ್ಗಳನ್ನು ವಶಕ್ಕೆ ಪಡೆದ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೋರ್ವ ವಿದೇಶಿ ಯುವತಿಯ ಬಂಧನಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಬ್ಯೂಟಿ ಪಾರ್ಲರ್ ತೆರೆಯಲು ಬಂದಿದ್ದ ಮಹಿಳೆ;
ನೈಜೀರಿಯಾದ ಸರಕಾರಿ ಅಧಿಕಾರಿಯೊಬ್ಬರ ಪುತ್ರಿ ಎಂದು ಹೇಳುವ ಪ್ರಿನ್ಸೆಸ್, ದಿಲ್ಲಿನಲ್ಲಿನ ತನ್ನ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ತಾನು ಬೆಂಗಳೂರಿನಲ್ಲಿ ಬ್ಯೂಟಿ ಪಾರ್ಲರ್ ತೆರೆಯುವ ಯೋಜನೆಯಲ್ಲಿದ್ದೆ ಎಂದು ತಿಳಿಸಿದ್ದಾಳೆ.
ತಲೆಗೆ ಕಪ್ಪು ಟೊಪ್ಪಿಗೆ ಧರಿಸಿರುವ ವ್ಯಕ್ತಿಗೆ ಪಾರ್ಸೆಲ್ ಆರೋಪಿ ಪ್ರಿನ್ಸೆಸ್ ಪ್ರಿಯಕರ ದಿಲ್ಲಿಯಲ್ಲಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿಗೆ ಡ್ರಗ್ಸ್ ಸರಬರಾಜಿನ ಕುರಿತು ಖಚಿತ ಮಾಹಿತಿ ನೀಡದ ಪ್ರಿನ್ಸೆಸ್, ದಿಲ್ಲಿಯ ಸ್ನೇಹಿತೆಯೊಬ್ಬಳು ಬೆಂಗಳೂರಿನಲ್ಲಿನ ತರಹುಣಸೆ ವಿಳಾಸ ನೀಡಿ ತಲೆಗೆ ಕಪ್ಪು ಟೊಪ್ಪಿಗೆ ಧರಿಸಿರುವ ವ್ಯಕ್ತಿಗೆ ಪಾರ್ಸೆಲ್ ನೀಡುವಂತೆ ಬ್ಯಾಗ್ ಕೊಟ್ಟು ಕಳುಹಿಸಿದ್ದಳು ಎಂದು ವಿಚಾರಣೆ ವೇಳೆ ತಿಳಿಸಿದ್ದಾಳೆ. ಆರೋಪಿ ಯಾರಿಗೆ ಡ್ರಗ್ಸ್ ತಲುಪಿಸಲು ಆಗಮಿಸಿದ್ದಳು. ಆಕೆಯ ಸಂಪರ್ಕಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ.
In a major breakthrough against the narcotics trade in the city, the Central Crime Branch (CCB) has arrested another Nigerian national in connection with an international drug smuggling racket. This follows closely on the heels of the recent arrest of a Nigerian woman who had smuggled MDMA by concealing it in churidar dress materials.
10-07-25 09:53 pm
Bangalore Correspondent
ED Raid Congress MLA Subba Reddy: ಮಲೇಶ್ಯಾ, ಬ್...
10-07-25 12:45 pm
ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ ; ಅರ್ಧ ನ...
09-07-25 10:45 pm
Chamarajanagar Heart Attack, Student; 'ಹೃದಯ"ಕ...
09-07-25 04:12 pm
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
11-07-25 12:08 pm
HK News Desk
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
Bangle Seller, Changur Baba Arrest, Uttar Pra...
10-07-25 03:24 pm
Amit Shah; ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್...
10-07-25 01:00 pm
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
10-07-25 07:23 pm
Mangalore Correspondent
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
Mangalore Home Minister Parameshwara, Peace M...
09-07-25 10:17 pm
Peace Meeting, Mangalore, Brijesh Chowta, Ash...
09-07-25 09:01 pm
10-07-25 08:09 pm
HK News Desk
Kerala Couple, Chit Fund Scam; ಚಿಟ್ ಫಂಡ್ ಹೆಸರ...
10-07-25 01:05 pm
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm
Drugs News, Mangalore: ಮಂಗಳೂರಿಗೆ ಡ್ರಗ್ಸ್ ಪೂರೈ...
09-07-25 10:56 pm
Kerala Chit Fund, Fraud, Mangalore: 20 ವರ್ಷಗಳ...
08-07-25 10:01 pm