ಬ್ರೇಕಿಂಗ್ ನ್ಯೂಸ್
27-06-25 07:27 pm HK News Desk ಕ್ರೈಂ
ವಿಜಯಪುರ, ಜೂನ್ 27 : ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ಬ್ಯಾಂಕ್ ಆಸ್ತಿಯನ್ನು ಕಾಪಾಡಬೇಕಾದವನೇ ಬ್ಯಾಂಕ್ ಲೂಟಿ ಮಾಡಿ ಜೈಲು ಸೇರಿದ್ದಾನೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ರಾಜ್ಯದ ಅತಿ ದೊಡ್ಡ ದರೋಡೆ ನಡೆದಿತ್ತು. ಪೊಲೀಸರು ಕಡೆಗೂ ಭರ್ಜರಿ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ್ದಾರೆ. ಬ್ಯಾಂಕ್ ಮ್ಯಾನೇಜರೇ ಕೃತ್ಯವೆಸಗಿದ್ದು ಕದ್ದ ಕೇಜಿಗಟ್ಟಲೆ ಚಿನ್ನವನ್ನು ಕರಗಿಸಿ ಗಟ್ಟಿ ಮಾಡಿ ಬಚ್ಚಿಟ್ಟಿರುವುದು ಪತ್ತೆಯಾಗಿದೆ.
2025ರ ಮೇ 25ರಂದು ಬ್ಯಾಂಕ್ ಲಾಕರ್ ಕೀಲಿ ತೆಗೆದು ಬರೋಬ್ಬರಿ 58 ಕೇಜಿ ಚಿನ್ನಾಭರಣ ಮತ್ತು 5 ಲಕ್ಷ ನಗದು ಹಣವನ್ನು ಕಳವು ಮಾಡಲಾಗಿತ್ತು. ಸುಮಾರು 53 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ, ಬ್ಯಾಂಕಿನಲ್ಲಿದ್ದ ಸಿಸಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ಕಿತ್ತುಕೊಂಡು ಹೋಗಿದ್ದರು. ಸವಾಲಾಗಿದ್ದ ಪ್ರಕರಣವನ್ನು ಪೊಲೀಸರು ಕೊನೆಗೂ ಭೇದಿಸಿ ಕಳ್ಳರನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ.
ಬ್ಯಾಂಕಿನ ಹಿರಿಯ ಮ್ಯಾನೇಜರ್ ಆಗಿದ್ದ ವಿಜಯಕುಮಾರ್ ಮಿರಿಯಾಳ (41), ಆತನ ಸಹಚರರಾದ ಚಂದ್ರಶೇಖರ್ ಕೋಟಿಲಿಂಗಂ ನೆರೆಲ್ಲಾ(38) ಮತ್ತು ಸುನಿಲ್ ನರಸಿಂಹಲು (40) ಬಂಧಿತರಾಗಿದ್ದು ಇವರ ಬಳಿಯಿಂದ 10.75 ಕೋಟಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಬೆನ್ನಲ್ಲೇ ಕಳ್ಳರ ಪತ್ತೆಗಾಗಿ ಎಂಟು ತಂಡಗಳನ್ನು ರಚಿಸಿ ಸುಳಿವು ಬೆನ್ನತ್ತಿ ದೇಶದ ವಿವಿಧ ಕಡೆಗಳಿಗೆ ಪೊಲೀಸರನ್ನು ಕಳಿಸಲಾಗಿತ್ತು. ಕೊನೆಗೆ ಆರೋಪಿಗಳು ಗೋವಾದಲ್ಲಿ ಅಡಗಿರುವುದು ಪತ್ತೆಯಾಗಿತ್ತು. ಪೊಲೀಸರು ಕಾರ್ಯಾಚರಣೆ ಸದ್ಯ ಬ್ಯಾಂಕ್ ಮ್ಯಾನೇಜರ್ ಸೇರಿ ಮೂವರನ್ನು ಬಂಧಿಸಿದ್ದು ಇತರ ಆರೋಪಿಗಳಿಗಾಗಿ ಬಲೆ ಬೀಸಿದೆ.
ಬ್ಯಾಂಕ್ ಕಚೇರಿಯ ಎದುರಿನ ಶಟರ್ ಕೀಯನ್ನು ಓಪನ್ ಮಾಡಿ ಸಲೀಸಾಗಿ ಕಳ್ಳರು ನುಗ್ಗಿದ್ದರು. ಒಳ ಹೋದ ಬೆನ್ನಲ್ಲೇ ಅಲಾರಂ ಬೆಲ್ ಸಂಪರ್ಕ ಕಡಿತಗೊಳಿಸಿದ್ದರು. ಆನಂತರ ಡುಪ್ಲಿಕೇಟ್ ಕೀ ಮೂಲಕ ಚಿನ್ನಾಭರಣ ಇದ್ದ ಲಾಕರನ್ನೇ ತೆರೆದಿದ್ದರು. ಇನ್ನೊಂದು ಲಾಕರ್ ಓಪನ್ ಮಾಡಿರಲಿಲ್ಲ. ಇಷ್ಟು ಸಲೀಸಾಗಿ ಕೃತ್ಯ ಎಸಗಿದ್ದರಿಂದ ಯಾರೋ ಒಳಗಿನವರೇ ಇರಬೇಕೆಂಬ ಪೊಲೀಸರಿಗೆ ಬಂದಿತ್ತು. ಇದೇ ಆಯಾಮದಲ್ಲಿ ಪೊಲೀಸರು ಒಂದ್ಕಡೆ ಕಾರ್ಯಾಚರಣೆ ಶುರು ಮಾಡಿದ್ದರು. ಇದೇ ವೇಳೆ, ಕಿಟಕಿಯನ್ನು ಒಡೆದು ಅಲ್ಲೊಂದು ಬೊಂಬೆಯನ್ನಿಟ್ಟು ಮಾಟ ಮಂತ್ರ ಮಾಡಿರುವಂತೆ ಗುರುತಿಗಳನ್ನು ಉಳಿಸಿದ್ದರು. ಪೊಲೀಸರ ದಿಕ್ಕು ತಪ್ಪಿಸುವ ಹುನ್ನಾರ ಇದರ ಹಿಂದಿತ್ತು.
ಈ ಹಿಂದೆ ಇದೇ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದ ವಿಜಯಕುಮಾರ್ ಕಳ್ಳತನದ ರೂವಾರಿಯಾಗಿದ್ದು ತನ್ನ ಸಹೋದರ ಮತ್ತು ಸ್ನೇಹಿತರ ಸಹಾಯದಿಂದ ಬ್ಯಾಂಕ್ ಲಾಕರಿನ ನಕಲಿ ಕೀಲಿ ತಯಾರಿಸಿದ್ದು ಅದನ್ನೇ ಕೃತ್ಯಕ್ಕೆ ಬಳಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇದಕ್ಕಾಗಿ ಒಂದು ತಿಂಗಳ ಕಾಲ ಯೋಜನೆ ರೂಪಿಸಿದ್ದರು. ಹಾಲಿವುಡ್ ಸಿನಿಮಾಗಳಲ್ಲಿ ಬ್ಯಾಂಕ್ ದೋಚುವ ದೃಶ್ಯಗಳನ್ನು ನೋಡಿ ಕಳ್ಳತನಕ್ಕೆ ಸ್ಫೂರ್ತಿ ಪಡೆದಿದ್ದರು. ಚಿನ್ನಾಭರಣಗಳನ್ನು ಕದ್ದು ಕಾರಿನಲ್ಲಿ ಸಾಗಿಸಿ, ಬೈಕ್‌ಗಳನ್ನು ಸಾಗಿಸುವ ಟ್ರಕ್‌ನಲ್ಲಿ ಹಾಕಿ ಗೋವಾಕ್ಕೆ ಪರಾರಿಯಾಗಿದ್ದರು. ಆದರೆ, ಪೊಲೀಸರು ಅಷ್ಟೇ ಚಾಣಾಕ್ಷತನದಿಂದ ತನಿಖೆ ನಡೆಸಿದ್ದು ಪ್ರಕರಣವನ್ನು ಭೇದಿಸಿದ್ದಾರೆ.
ವೈಜ್ಞಾನಿಕ ಸುಳಿವುಗಳನ್ನು ಆಧರಿಸಿ ಪ್ರಕರಣ ಭೇದಿಸಿದ ತಂಡವನ್ನು ವಿಜಯಪುರ ಎಸ್ಪಿ ಲಕ್ಷ್ಮಣ್ ನಿಂಬರಗಿ ಶ್ಲಾಘಿಸಿದ್ದಾರೆ. ಎಎಸ್ಪಿಗಳಾದ ಶಂಕರ್ ಮರಿಹಾಳ್ ಮತ್ತು ರಮಾನಂದ ಗೌಡ ಹಟ್ಟಿ ನೇತೃತ್ವದಲ್ಲಿ ಎಂಟು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.
In a case of betrayal from within, a senior bank manager who was supposed to safeguard the bank’s assets has been arrested for orchestrating one of Karnataka’s biggest gold heists. The sensational robbery, which took place in the Canara Bank branch in Mangalore village, Basavana Bagewadi taluk of Vijayapura district, has finally been cracked by police after a high-intensity investigation.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
20-07-25 03:06 pm
Mangaluru Correspondent
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
Dharmasthala Case, Santosh Kumar, CPIM: ಧರ್ಮಸ...
19-07-25 06:14 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm