ಬ್ರೇಕಿಂಗ್ ನ್ಯೂಸ್
28-06-25 05:35 pm Richard, Mangaluru Correspondent ಕ್ರೈಂ
ಮಂಗಳೂರು, ಜೂನ್ 28: ಎರಡು ಕೋಟಿ ಬೆಲೆಯ ಐಷಾರಾಮಿ ಕಾರನ್ನು ಬರೀ 32 ಲಕ್ಷ ಮೌಲ್ಯದ್ದೆಂದು ತೋರಿಸಿ ನೋಂದಣಿ ಮಾಡಿರುವ ಪ್ರಕರಣದಲ್ಲಿ ಮಂಗಳೂರು ಆರ್ ಟಿಓ ಕಚೇರಿಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆದರೆ ಈ ಪ್ರಕರಣದಲ್ಲಿ ಪ್ರಮುಖ ಸೂತ್ರಧಾರ ಒಬ್ಬ ಕತರ್ನಾಕ್ ಆರ್ ಟಿಓ ಏಜಂಟ್ ಅನ್ನುವ ಮಾಹಿತಿ ದೊರಕಿದ್ದು, ಆತನ ಮೂಲಕ ಹಲವರು ಮಂಗಳೂರು, ಬೆಂಗಳೂರಿನಲ್ಲಿ ಕೋಟ್ಯಂತರ ಬೆಲೆಯ ಕಾರುಗಳನ್ನು ಕಡಿಮೆ ದರಕ್ಕೆ ತೋರಿಸಿ ರಿಜಿಸ್ಟ್ರೇಶನ್ ಮಾಡಿದ್ದಾರೆಂಬ ಮಾಹಿತಿ ಸಿಕ್ಕಿದೆ.
2015ರ ವೇಳೆಗೆ ಆರ್ ಟಿಓ ಬ್ರೇಕ್ ಇನ್ಸ್ ಪೆಕ್ಟರ್ ಪರೀಕ್ಷೆ ಬರೆದು ಅದರಲ್ಲಿ ಪಾಸ್ ಆಗದಿದ್ದರೂ, ತಾನು ಪಾಸ್ ಆಗಿದ್ದೇನೆ, ಬ್ರೇಕ್ ಇನ್ಸ್ ಪೆಕ್ಟರ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಆ ವ್ಯಕ್ತಿ ತುಳು ಸಿನಿಮಾ ನಿರ್ಮಾಣದಲ್ಲಿಯೂ ಕೈಯಾಡಿಸಿದ್ದ. ಒಂದೆರಡು ಚಿತ್ರದಲ್ಲಿ ಸಹ ನಿರ್ಮಾಪಕನಾಗಿದ್ದು, ಅದರ ಜೊತೆಗೆ ಬಂಟ್ವಾಳ ಆರ್ ಟಿಓ ವಿಭಾಗದಲ್ಲಿ ಇನ್ಸ್ ಪೆಕ್ಟರ್ ಎಂದು ಹೇಳಿ ಪರಿಚಯ ಮಾಡಿಕೊಳ್ಳುತ್ತಿದ್ದ. ಇದೇ ನೆಪದಲ್ಲಿ ಆರ್ ಟಿಓ ಇಲಾಖೆಯಲ್ಲಿ ಹಲವು ಅಧಿಕಾರಿಗಳ ಜೊತೆಗೆ ಸಂಪರ್ಕವನ್ನೂ ಸಾಧಿಸಿದ್ದ. ಇದರ ಜೊತೆ ಜೊತೆಗೆ ಕೋಟಿ ಬೆಲೆಯ ಐಷಾರಾಮಿ ಕಾರುಗಳನ್ನು ಕಡಿಮೆ ಮೌಲ್ಯ ತೋರಿಸಿ ಸರ್ಕಾರಕ್ಕೆ ದೋಖಾ ಎಸಗುವ ಏಜಂಟನಾಗಿಯೂ ಕೆಲಸ ಮಾಡುತ್ತಿದ್ದ. ಮರ್ಸಿಡಿಸ್ ಬೆಂಜ್ ಎಎಂಜಿ 663 ಹೆಸರಿನ ಈ ಕಾರನ್ನು ಮಂಗಳೂರಿನಲ್ಲಿ ನೋಂದಣಿ ಮಾಡಿಸಿದ್ದರಲ್ಲಿ ಈತನೇ ಸೂತ್ರಧಾರ ಎನ್ನುವುದನ್ನು ಕಚೇರಿ ಸಿಬಂದಿ ಹೇಳುತ್ತಿದ್ದಾರೆ.
2024ರ ಡಿಸೆಂಬರ್ 19ರಂದು 1.96 ಕೋಟಿ ಬೆಲೆಯ ಮರ್ಸಿಡಿಸ್ ಬೆಂಜ್ ಕಾರನ್ನು 32 ಲಕ್ಷ ಬೆಲೆಯದ್ದೆಂದು ಉಲ್ಲೇಖಿಸಿ ಮಂಗಳೂರು ಆರ್ಟಿಓ ಕಚೇರಿಯಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಲಾಗಿತ್ತು. ಮಂಗಳೂರು ಆರ್ ಟಿಓ ಅಧೀಕ್ಷಕರು ಮತ್ತು ಕೇಂದ್ರ ಸ್ಥಾನೀಯ ಸಹಾಯಕರ ಲಾಗಿನ್ ಐಡಿಯಲ್ಲಿ ಡಿ.24ರಂದು ಕಾರಿನ ನೋಂದಣಿಯೂ ಆಗಿತ್ತು. ಕಚೇರಿ ಅಧಿಕಾರಿಗಳು ಕಾರಿನ ಮೂಲ ಬೆಲೆಯನ್ನು ಗೌಪ್ಯವಾಗಿರಿಸಿ 32 ಲಕ್ಷ ರೂ. ಬೆಲೆಯ ಕಡಿಮೆ ದರದ ಬೆಂಜ್ ಕಾರೆಂದು ತೋರಿಸಿ ರಾಜ್ಯ ಸರಕಾರಕ್ಕೆ ಭಾರೀ ವಂಚನೆ ಎಸಗಿದ್ದರು. 2025ರಲ್ಲಿ ಎರಡು ಕೋಟಿ ಬೆಲೆಯ ಮರ್ಸಿಡಿಸ್ ಬೆಂಜ್ ಕಾರನ್ನು ನೋಂದಣಿ ಮಾಡಿಸುವುದಿದ್ದರೆ 40 ಲಕ್ಷ ತೆರಿಗೆ ಕಟ್ಟಬೇಕಿತ್ತು. ಅಂಥದ್ದರಲ್ಲಿ ಈ ಕಾರಿನ ಬೆಲೆಯೇ 32 ಲಕ್ಷ ಎಂದು ತೋರಿಸಿ ಒಟ್ಟು ತೆರಿಗೆ 6 ಲಕ್ಷದಲ್ಲಿ ಮುಗಿಸಿದ್ದರು.
ಇತ್ತೀಚೆಗೆ ಮೈಸೂರಿನಲ್ಲಿ ಪೊಲೀಸರು ಪಾಂಡಿಚೇರಿ ನೋಂದಣಿಯ ಕಾರುಗಳನ್ನು ಗುರಿಯಾಗಿಸಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, ಎದುರಾಗಿದ್ದ ಕೋಟಿ ಬೆಲೆಯ ಮರ್ಸಿಡಿಸ್ ಬೆಂಜ್ ಕಾರನ್ನು ನಿಲ್ಲಿಸಿ, ರಿಜಿಸ್ಟ್ರೇಶನ್ ಮತ್ತು ಟ್ಯಾಕ್ಸ್ ರಶೀದಿ ಚೆಕ್ ಮಾಡಿದ್ದರು. ಇಷ್ಟೊಂದು ಐಷಾರಾಮಿ ಕಾರಿಗೆ ಕೇವಲ 6 ಲಕ್ಷ ತೆರಿಗೆ ಕಟ್ಟಿದ್ದನ್ನು ನೋಡಿ ಸಂಶಯಗೊಂಡ ಅಧಿಕಾರಿಗಳು ತನಿಖೆ ನಡೆಸಿದ್ದರು. ಈ ವೇಳೆ, ಕಾರನ್ನು ಕೇವಲ 32 ಲಕ್ಷ ಬೆಲೆಯದ್ದೆಂದು ತೋರಿಸಿ ಅಕ್ರಮವಾಗಿ ರಿಜಿಸ್ಟ್ರೇಶನ್ ಮಾಡಿರುವುದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆ ನಡೆಸಿದ್ದು, ಮಂಗಳೂರು ಆರ್ಟಿಓ ಕಚೇರಿಯಲ್ಲಿ ಲೋಪ ಎಸಗಿರುವುದು ಕಂಡುಬಂದಿದ್ದರಿಂದ ಇಬ್ಬರು ಮಹಿಳಾ ಅಧಿಕಾರಿಗಳು ಮತ್ತು ಒಬ್ಬ ಸಹಾಯಕನನ್ನು ಸಸ್ಪೆಂಡ್ ಮಾಡಿದ್ದಾರೆ.
ಮಂಗಳೂರು ಆರ್ ಟಿಓ ಕಚೇರಿಯ ಕೇಂದ್ರ ಸ್ಥಾನೀಯ ಸಹಾಯಕರಾದ ಸರಸ್ವತಿ, ಕಚೇರಿ ಅಧೀಕ್ಷಕಿ ರೇಖಾ, ಪ್ರಥಮ ದರ್ಜೆ ಸಹಾಯಕ ನೀಲಪ್ಪ ಎಂಬವರನ್ನು ಅಮಾನತು ಮಾಡಲಾಗಿ. ಇದಲ್ಲದೆ, ಇವರನ್ನು ಶಿವಮೊಗ್ಗ ಮತ್ತು ಬೆಂಗಳೂರು ಆರ್ ಟಿಓ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಮಂಗಳೂರು ಆರ್ ಟಿಓ ಅಧಿಕಾರಿ ಶ್ರೀಧರ್ ಮಲ್ಲಾಡ್ ವಿರುದ್ಧವೂ ಆರೋಪ ಕೇಳಿಬಂದಿದ್ದು ಅವರ ವಿರುದ್ಧ ತನಿಖೆಗೆ ಆದೇಶ ಮಾಡಲಾಗಿದೆ. ತೆರಿಗೆ ವಂಚನೆ ಜಾಲ ಹೊರಬೀಳುತ್ತಿದ್ದಂತೆ ಇದಕ್ಕೆಲ್ಲ ಆತನೇ ಕಾರಣ ಎಂದು ಅಮಾನತಾದವರು ಹೇಳುತ್ತಿದ್ದಾರಂತೆ. ಕಚೇರಿಯಲ್ಲಿ ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲಾಗಿನ್ ಐಡಿಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಕತರ್ನಾಕ್ ಏಜಂಟ್, ಬೆಂಗಳೂರು ಮಟ್ಟದಲ್ಲೂ ಸಂಪರ್ಕ ಹೊಂದಿದ್ದ. ಐಷಾರಾಮಿ ಕಾರುಗಳನ್ನು ಕಡಿಮೆ ಮೊತ್ತ ತೋರಿಸಿ ದೊಡ್ಡ ಮಟ್ಟದಲ್ಲಿ ಕಮಾಯಿ ಮಾಡುತ್ತಿದ್ದ. ಅದರಲ್ಲಿ ಒಂದಷ್ಟು ಪಾಲನ್ನೂ ಈ ಅಧಿಕಾರಿಗಳಿಗೂ ನೀಡುತ್ತಿದ್ದ. ಇಷ್ಟೆಲ್ಲ ಆದರೂ ಈ ಬಗ್ಗೆ ಪೊಲೀಸ್ ದೂರು ದಾಖಲಾಗಿಲ್ಲ. ಆರ್ಟಿಓ ಅಧಿಕಾರಿಗಳು ದೂರು ದಾಖಲಿಸಿದರೆ ಎಫ್ಐಆರ್ ದಾಖಲಾಗುವ ಸಾಧ್ಯತೆ ಇರುವುದರಿಂದ ಏಜಂಟ್ ವಿದೇಶಕ್ಕೆ ಹಾರುವ ಪ್ಲಾನಲ್ಲಿದ್ದಾನೆ.
ಮಂಗಳೂರಿನ ನಿಹಾಲ್ ಅಹ್ಮದ್ ಎಂಬವರು 2017ರಲ್ಲಿ ಮರ್ಸಿಡಿಸ್ ಬೆಂಜ್ ಕಾರನ್ನು ಖರೀದಿಸಿದ್ದು, ಬೆಂಗಳೂರಿನಲ್ಲಿ ತಾತ್ಕಾಲಿಕ ನೋಂದಣಿ ಮಾಡಿಸಿ ಅದೇ ನಂಬರಿನಲ್ಲಿ ಐದಾರು ವರ್ಷಗಳಿಂದ ಓಡಾಟ ನಡೆಸುತ್ತಿದ್ದರು. 2024ರಲ್ಲಿ ಕಾರನ್ನು ನೀರಜ್ ಕುಮಾರ್ ಶರ್ಮಾ ಅವರಿಗೆ ಮಾರಾಟ ಮಾಡಿದ್ದು, ಕಾರು ಆವರೆಗೂ ನೋಂದಣಿ ಮಾಡಿಸದೇ ಇದ್ದುದರಿಂದ ಏಜಂಟ್ ಮೂಲಕ ಡೀಲ್ ಕುದುರಿಸಲಾಗಿತ್ತು. ತೆರಿಗೆಯನ್ನೇ ಪಾವತಿಸದೆ ತಾತ್ಕಾಲಿಕ ನೋಂದಣಿಯಲ್ಲೇ ಐದಾರು ವರ್ಷ ಓಡಿಸಿದ್ದರಿಂದ ಕಾರು ಹಳತಾಗಿತ್ತು. ಡೀಲ್ ಕುದುರಿಸಿದ್ದ ರಿಯಲ್ ಏಜಂಟ್, ಎರಡು ಕೋಟಿಯ ಕಾರು ಆಗಿದ್ದರೂ ಅದನ್ನು 32 ಲಕ್ಷದ್ದೆಂದು ತೋರಿಸಿ ನೋಂದಣಿ ಮಾಡಿಕೊಟ್ಟಿದ್ದ. ಸಾಧಾರಣವಾಗಿ ಐಷಾರಾಮಿ ಕಾರುಗಳನ್ನು ಟ್ರಾಫಿಕ್ ಪೊಲೀಸರು ನಿಲ್ಲಿಸಿ ಚೆಕ್ ಮಾಡಲ್ಲ. ಇದನ್ನೇ ನೆಪವಾಗಿಸ್ಕೊಂಡ ಕಂತ್ರಿಗಳು ಮೂಲ ಬೆಲೆಯನ್ನು ತೋರಿಸದೆ ವಂಚನಾ ಜಾಲ ಹೆಣೆದಿದ್ದರು. ಅಧಿಕಾರಿಗಳು ಸರಿಯಾಗಿ ಚೆಕ್ ಮಾಡಿದರೆ ಇಂಥ ಅಕ್ರಮ ಬಹಳಷ್ಟು ಸಿಗಬಹುದು.
In a shocking case of tax evasion, a luxury Mercedes-Benz car worth ₹2 crore was fraudulently registered at the Mangaluru RTO office for just ₹32 lakh. As a result, three officials — including two women officers — have been suspended pending investigation. The scam has unearthed a larger tax-evasion racket allegedly orchestrated by a fake RTO agent with ties to the Tulu film industry. The agent, who falsely claimed to be a "Brake Inspector" despite failing the qualifying exam in 2015, had reportedly built strong connections within the transport department.
30-08-25 04:51 pm
Bangalore Correspondent
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
30-08-25 06:44 pm
HK News Desk
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
30-08-25 11:08 pm
Mangalore Correspondent
2002ರ ಉಳ್ಳಾಲದ ಚಾರಿತ್ರಿಕ ನಾಗಮಂಡಲದ ರೂವಾರಿ, ಧಾರ್...
30-08-25 11:01 pm
Mangalore, Ganesh Chaturthi, Catholic: ಸಂಘನಿಕ...
30-08-25 10:10 pm
ಕೊಲ್ಲೂರು ; ನದಿಯಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರಿನ...
30-08-25 09:16 pm
Talapady Accident, Mangalore, Ksrtc Bus: ತಲಪಾ...
30-08-25 04:23 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm