ಬ್ರೇಕಿಂಗ್ ನ್ಯೂಸ್
01-07-25 02:22 pm Bangalore Correspondent ಕ್ರೈಂ
ಬೆಂಗಳೂರು, ಜುಲೈ 1 : ಹಣಕ್ಕಾಗಿ ರಾಜಕಾರಣಿಗಳು ಮತ್ತು ತನ್ನ ಸ್ನೇಹಿತರ ಜೊತೆಗೆ ಮಲಗುವಂತೆ ಪತಿ ಒತ್ತಾಯಿಸುವುದು ಹಾಗೂ ಅತ್ತೆ, ಮಾವ ವರದಕ್ಷಿಣೆಗಾಗಿ ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ ಮಹಿಳೆಯೊಬ್ಬರು ಪತಿ, ಅತ್ತೆ, ಮಾವನ ವಿರುದ್ಧವೇ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪತಿ ಯೂನಿಸ್ ಪಾಷಾ ವಿಕೃತ ವರ್ತನೆಯಿಂದ ಬೇಸತ್ತು ದೂರು ದಾಖಲಿಸಿದ್ದಾರೆ. ರಾಜಕಾರಣಿಗಳು ಮತ್ತು ತನ್ನ ಸಹಚರರ ಜೊತೆ ಮಲಗುವಂತೆ ಒತ್ತಾಯಿಸುತ್ತಾನೆ. ಒಪ್ಪದೇ ಇದ್ದುದಕ್ಕೆ ಈಗಾಗಲೇ ಆರು ಬಾರಿ ತಲಾಖ್ ನೀಡಿದ್ದಾನೆ. ಜೊತೆಗೆ ಗರ್ಭಪಾತ ಮಾಡಿಸಿದ್ದಾನೆ. ಅಷ್ಟೇ ಅಲ್ಲದೆ, ತಲೆಗೆ ಗನ್ ಇಟ್ಟು ಬೆದರಿಕೆ ಹಾಕುತ್ತಾನೆ. ಪತ್ನಿ ಮನೆಯವರಿಗೆಲ್ಲ ಮಚ್ಚು, ಲಾಂಗ್ ತೋರಿಸಿ ಬೆದರಿಸುತ್ತಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸಂತ್ರಸ್ತ ಯುವತಿ 25-6-2021 ರಂದು ಆರೋಪಿ ಯೂನಸ್ ಪಾಷಾನನ್ನು ವಿವಾಹವಾಗಿದ್ದರು. 4 ತಿಂಗಳ ನಂತರ ಆರೋಪಿಗಳಾದ ಯೂನಸ್ ಪಾಷಾ, ಆತನ ತಂದೆ ಚಿಂದ್ ಪಾಷಾ, ತಾಯಿ ಪಹೀನ್ ತಾಜ್ ಸೇರಿಕೊಂಡು ಸಂತ್ರಸ್ತೆಗೆ ಹಿಂಸೆ ನೀಡಲು ಆರಂಭಿಸಿದ್ದಾರೆ. ಈ ಮಧ್ಯೆ, ಸಂತ್ರಸ್ತೆ ಗರ್ಭವತಿಯಾಗಿದ್ದು, ಯೂನಸ್ ಪಾಷಾ ಆಕೆಯ ಹೊಟ್ಟೆಯ ಮೇಲೆ ಒದ್ದು ಹಲ್ಲೆ ಮಾಡಿದ್ದ. 17-12-2021 ರಂದು ಸಂತ್ರಸ್ತೆಯನ್ನು ಹೆದರಿಸಿ ಮತ್ತು ಒತ್ತಾಯಪಡಿಸಿ ಗರ್ಭಪಾತ ಮಾಡಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪತಿ ಯೂನಸ್ ಪಾಷಾಗೆ ರಾಜಕಾರಣಿಗಳು, ಸ್ಥಳೀಯ ರೌಡಿಗಳ ನಂಟು ಇದೆ. ಆರೋಪಿ ಸಂತ್ರಸ್ತೆಯನ್ನು ಆತನ ರಾಜಕಾರಣಿ ಸ್ನೇಹಿತನಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬುದು ಕೆಲವು ತಿಂಗಳ ಹಿಂದೆ ತಿಳಿದುಬಂದಿದೆ. ಇದರಿಂದ ಭಯಗೊಂಡ ಸಂತ್ರಸ್ತೆ ಎರಡು ತಿಂಗಳಿಂದ ಗಂಡನ ಮನೆ ಬಿಟ್ಟು ಬಂದು ತಾಯಿ ಮನೆಯಲ್ಲಿ ವಾಸವಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ
ಪತಿ ಮಾತ್ರವಲ್ಲ, ಅತ್ತೆ, ಮಾವ ಕೂಡ ವರದಕ್ಷಿಣೆಗಾಗಿ ನಿರಂತರ ಟಾರ್ಚರ್ ನೀಡುತ್ತಾರೆ. ಮಾವ ತನಗೆ ಮಸಾಜ್ ಮಾಡುವಂತೆ ಒತ್ತಾಯ ಮಾಡುತ್ತಾರೆ ಎಂದು ಪತಿ, ಅತ್ತೆ ಹಾಗೂ ಮಾವನ ಮೇಲೆ ಆರೋಪಗಳನ್ನು ಹೊರಿಸಿದ್ದಾರೆ. ದೂರು ಕೊಟ್ಟು ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ತನಗೆ ನ್ಯಾಯ ಕೊಡಿಸಿ ಎಂದು ಮಹಿಳೆ ಕೇಳಿಕೊಂಡಿದ್ದಾರೆ. ಸದ್ಯ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಆರೋಪಿ ಯೂನಿಸ್ ಮತ್ತು ಆತನ ತಂದೆ, ತಾಯಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ
In a disturbing case of domestic abuse and exploitation, a woman from Bengaluru has filed a complaint at the Banashankari Police Station against her husband, mother-in-law, and father-in-law, accusing them of harassment, blackmail, and mental and physical torture.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:46 am
HK News Staffer
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm