ಬ್ರೇಕಿಂಗ್ ನ್ಯೂಸ್
07-07-25 10:18 pm Mangalore Correspondent ಕ್ರೈಂ
ಮಂಗಳೂರು, ಜುಲೈ 7 : ದುಬೈನ ಎನ್ನೆಂಸಿ ಹೆಲ್ತ್ ಸೆಂಟರಿನಲ್ಲಿ ಉದ್ಯೋಗ ಇದೆಯೆಂದು ಹೇಳಿ ಮಹಿಳೆಯೊಬ್ಬಳು ಮಾಡಿದ ಫೋನ್ ಕರೆಗೆ ಮಂಗಳೂರಿನ ಯುವ ವೈದ್ಯ ಬೌಲ್ಡ್ ಆಗಿದ್ದು, ಕುಳಿತಲ್ಲೇ 4.20 ಲಕ್ಷ ರೂಪಾಯಿ ಕಳಕೊಂಡ ಬಗ್ಗೆ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿದೆ.
ಜೂನ್ 6ರಂದು ಸಂಗೀತಾ ಎಂದು ತನ್ನನ್ನು ಪರಿಚಯಿಸಿದ್ದ ಮಹಿಳೆ ಮಂಗಳೂರಿನ ವೈದ್ಯರೊಬ್ಬರಿಗೆ ಕರೆ ಮಾಡಿದ್ದಾಳೆ. ತಾನು ದುಬೈನ ಎನ್ ಎಂಸಿ ಹೆಲ್ತ್ ಸೆಂಟರಿನಲ್ಲಿದ್ದು ಇಲ್ಲಿ ಡಾಕ್ಟರ್ ಹುದ್ದೆಯೊಂದು ಖಾಲಿಯಿದ್ದು, ನೀವು ಎಪ್ಲೈ ಮಾಡಬಹುದು ಎಂದು ಹೇಳಿ ಆಫರ್ ಮಾಡಿದ್ದಳು. ಅಲ್ಲದೆ, ಹುದ್ದೆ ಖಾಲಿಯಿರುವ ಬಗ್ಗೆ ಮೈಲ್ ಸಂದೇಶ ಕಳುಹಿಸುವುದಾಗಿಯೂ ಹೇಳಿದ್ದಳು.
ಆನಂತರ, support@thejobswitch.com ಹೆಸರಿನಲ್ಲಿ ವೈದ್ಯರಿಗೆ ಮೈಲ್ ಬಂದಿದ್ದು, ಹುದ್ದೆಯ ವಿವರ, ಸ್ಯಾಲರಿ ಇತ್ಯಾದಿ ಮಾಹಿತಿಯನ್ನೂ ಕೊಡಲಾಗಿತ್ತು. ಇದರ ಬೆನ್ನಲ್ಲೇ ವಿನಯ್ ಸಿಂಗ್ ಎಂಬಾತ ವೈದ್ಯರನ್ನು ಸಂಪರ್ಕಿಸಿದ್ದು, ಎನ್ನೆಂಸಿ ಹೆಲ್ತ್ ಸೆಂಟರಿನಲ್ಲಿ ಉದ್ಯೋಗ ಖಾತ್ರಿ ಪಡಿಸುವುದಕ್ಕೆ ರಿಜಿಸ್ಟ್ರೇಶನ್ ಮಾಡುವಂತೆ ಹೇಳಿ ಅದಕ್ಕಾಗಿ 5499 ರೂ. ಕಳಿಸುವಂತೆ ತಿಳಿಸಿದ್ದ. ಇದನ್ನು ನಂಬಿದ ಮಂಗಳೂರಿನ ವೈದ್ಯ ಜೂನ್ 13ರಂದು ಹಣವನ್ನು ರವಾನಿಸಿದ್ದಾರೆ. ಆಮೇಲೆ ವೆರಿಫಿಕೇಶನ್, ಪ್ರೊಸೆಸ್ಸಿಂಗ್, ಲೈಸನ್ಸಿಂಗ್, ಎನ್ಓಸಿ ಇತ್ಯಾದಿ ಹೆಸರಲ್ಲಿ ಹಣವನ್ನು ಕೇಳಿದ್ದು, ವೈದ್ಯರು ದುಬೈ ಉದ್ಯೋಗ ಸಿಕ್ಕೇಬಿಡ್ತು ಎಂದುಕೊಂಡು ಹಣ ಕಳಿಸಿದ್ದರು. ಒಟ್ಟು 4,20,062 ರೂಪಾಯಿ ಹಣವನ್ನು ಅಪರಿಚಿತ ಹೇಳಿದ ಖಾತೆಗಳಿಗೆ ವರ್ಗಾಯಿಸಿದ್ದರು.
ಇಷ್ಟಾದರೂ, ಹಣದ ಬೇಡಿಕೆ ನಿಂತಿರಲಿಲ್ಲ. ಮತ್ತೆ 2.62 ಲಕ್ಷ ರೂಪಾಯಿ ಹಣವನ್ನು ಕಳಿಸುವಂತೆ ವೈದ್ಯರಿಗೆ ಸೂಚಿಸಲಾಗಿತ್ತು. ಇದರಿಂದ ಸಂಶಯಕ್ಕೀಡಾದ ವೈದ್ಯ ತನ್ನ ಗೆಳೆಯರಲ್ಲಿ ಹೇಳಿಕೊಂಡಿದ್ದು, ಎನ್ನೆಂಸಿ ಹೆಲ್ತ್ ಸೆಂಟರಿನಲ್ಲಿ ಜಾಬ್ ಆಫರ್ ಇರೋದು ಹೌದಾ ಎಂದು ಚೆಕ್ ಮಾಡಲು ಮುಂದಾಗಿದ್ದರು. ಚೆಕ್ ಮಾಡಿದಾಗ, ಎನ್ನೆಂಸಿ ಸಂಸ್ಥೆಯಲ್ಲಿ ಅಂತಹ ಹುದ್ದೆಯೇ ಇಲ್ಲ ಎನ್ನುವುದು ಗೊತ್ತಾಗಿದೆ. ತಾನು ಮೋಸ ಹೋದ ಅರಿವಾಗುತ್ತಿದ್ದಂತೆ ವೈದ್ಯ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ದೂರು ನೀಡಿದ್ದು, ಸೈಬರ್ ವಂಚಕರು ಹೀಗೂ ಮೋಸ ಮಾಡುತ್ತಾರಲ್ಲಾ ಎಂದು ಹುಬ್ಬೇರಿಸಿದ್ದಾರೆ.
In a shocking case of cyber fraud, a young doctor from Mangaluru was duped of ₹4.20 lakh after falling for a fake job offer allegedly from NMC Healthcare in Dubai. The incident has been reported at the Kankanady Town Police Station in Mangaluru.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:46 am
HK News Staffer
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm