ಬ್ರೇಕಿಂಗ್ ನ್ಯೂಸ್
29-07-25 08:54 pm HK News Desk ಕ್ರೈಂ
ದಾವಣಗೆರೆ, ಜುಲೈ 29 : ಮದುವೆಯಾಗಿ ಎಂಟು ವರ್ಷ ಆದರೂ ಗಂಡನಿಂದ ಮಕ್ಕಳಾಗಿಲ್ಲ ಅಂತ ಪರಿಚಯದ ಗೆಳೆಯನ ಸಖ್ಯ ಮಾಡಿದ್ದಳು. ಗರ್ಭಿಣಿಯೂ ಆಗಿದ್ದಳು. ಆದರೆ ಪತ್ನಿ ಗರ್ಭಿಣಿಯಾಗಿದ್ದನ್ನು ಸಂಶಯಿಸಿದ ಗಂಡ ಆಕೆಯ ಹೊಟ್ಟೆಗೆ ಕಾಲಿನಿಂದ ಒದ್ದು ಗರ್ಭಪಾತ ಮಾಡಿಸಿದ್ದ. ಇದರಿಂದ ಸಿಟ್ಟಾದ ಪತ್ನಿ ಗೆಳೆಯನಿಂದಲೇ ಪತಿಯನ್ನು ಉಪಾಯದಿಂದ ಕೊಲ್ಲಿಸಿದ್ದಳು. ಘಟನೆ ನಡೆದು18 ತಿಂಗಳ ಬಳಿಕ ವೈಯ್ಯಾರಗಿತ್ತಿ ಸಿಕ್ಕಿಬಿದ್ದಿದ್ದಾಳೆ.
ಪತಿಯ ಕೊಲೆಗೈದು ಕೇರಳದಲ್ಲಿ ಪ್ರಿಯಕರನ ಜೊತೆ ಸಂಸಾರ ನಡೆಸಿದ್ದ ಕಿಲಾಡಿ ಲೇಡಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಣಪುರ ಗ್ರಾಮದಲ್ಲಿ ಘಟನೆ ನಡೆದಿತ್ತು. ಪತಿಯ ಕೊಲೆಗೈದ ಆರೋಪಿ ಪತ್ನಿ ಲಕ್ಷ್ಮಿ(38), ಆಕೆಯ ಪ್ರಿಯಕರ ತಿಪ್ಪೇಶ್ ನಾಯ್ಕ (42) ಹಾಗೂ ಕೊಲೆಗೆ ಸಹಾಯ ಮಾಡಿದ ಸಂತೋಷ ಅಲಿಯಾಸ್ ಡಾಂಪ (38) ಬಂಧಿತ ಆರೋಪಿಗಳು.
ಅಣಪುರ ಗ್ರಾಮದ ನಿಂಗಪ್ಪನ ಜೊತೆ ಒಂಬತ್ತು ವರ್ಷಗಳ ಹಿಂದೆ ಲಕ್ಷ್ಮೀ ವಿವಾಹವಾಗಿತ್ತು. ಮದುವೆ ಆಗಿ ಎಂಟು ವರ್ಷ ಆದ್ರೂ ಮಕ್ಕಳಾಗದಿದ್ದಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಇದೇ ವೇಳೆ ಲಕ್ಷ್ಮಿಗೆ, ಅಡಿಕೆ ಸುಲಿಯಲು ಬರುತ್ತಿದ್ದ ಶೃಂಗಾರ ಭಾಗ್ ತಾಂಡಾ ನಿವಾಸಿ ತಿಪ್ಪೇಶ್ ನಾಯ್ಕ ಪರಿಚಯವಾಗಿದ್ದು ಸ್ನೇಹ, ಪ್ರೀತಿ, ಸಲುಗೆ ಅಂತಾ ಅನೈತಿಕ ಸಂಬಂಧಕ್ಕೆ ಒಳಗಾಗಿದ್ದರು. ಇದರ ಪರಿಣಾಮ ಲಕ್ಷ್ಮಿ ಗರ್ಭಿಣಿ ಆಗಿದ್ದಳು.
ಒಂಬತ್ತು ವರ್ಷದ ಬಳಿಕ ಪತ್ನಿ ಗರ್ಭಿಣಿ ಆಗಿದ್ದಕ್ಕೆ ಪತಿ ನಿಂಗಪ್ಪನಿಗೆ ಸಂಶಯ ಬಂದಿದ್ದು ಅನೈತಿಕ ಸಂಬಂಧದ ಶಂಕೆಯಿಂದ ಸಿಟ್ಟು ಮಾಡಿದ್ದ. ಅಲ್ಲದೆ, ಕುಡಿದು ಬಂದು ಹೊಟ್ಟೆಗೆ ಒದ್ದಿದ್ದ. ಪತಿಯ ಕಾಲಿನ ಒದೆತಕ್ಕೆ ಲಕ್ಷ್ಮೀಗೆ ಗರ್ಭಪಾತ ಆಗಿತ್ತು. ಇದರಿಂದ ಪತ್ನಿ ಸಿಟ್ಟಿಗೆದ್ದು ಪತಿಯನ್ನು ಕೊಲೆ ಮಾಡುವಂತೆ ಪ್ರಿಯಕರ ತಿಪ್ಪೇಶ್ ನಾಯ್ಕನಿಗೆ ಹೇಳಿದ್ದಳು. ನಿಂಗಪ್ಪನಿಗೆ ಪಾರ್ಟಿ ಕೊಡಿಸುವುದಾಗಿ ಹೇಳಿ ನಲ್ಲೂರ ಬಳಿ ಕಂಠಪೂರ್ತಿ ಕುಡಿಸಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದರು.
ಮಗ ದಿಢೀರ್ ಕಾಣೆಯಾದ ಹಿನ್ನೆಲೆ ನಿಂಗಪ್ಪನಿಗಾಗಿ ಕುಟುಂಬಸ್ಥರ ಹುಡುಕಾಡಿದ್ದು ಬಳಿಕ ತಾಯಿ ಯಲ್ಲಮ್ಮ ಚನ್ನಗಿರಿ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸುತ್ತಿದ್ದಾಗಲೇ ಲಕ್ಷ್ಮಿ ನಾಪತ್ತೆಯಾಗಿದ್ದು ಪೊಲೀಸರಿಗೆ ಸಂಶಯ ಬಂದು ಹುಡುಕಾಡಿದ್ದರು. ಈ ವೇಳೆ, ಆರೋಪಿ ತಿಪ್ಪೇಶ್ ಜೊತೆಗೆ ಲಕ್ಷ್ಮಿ ಸಂಸಾರ ಮಾಡುತ್ತಿರುವುದನ್ನು ತಿಳಿದು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೂವರು ಆರೋಪಿಗಳು ಕೃತ್ಯ ಬಗ್ಗೆ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
In a chilling case of betrayal and murder, a woman who conspired to kill her husband after he questioned her pregnancy has been arrested 18 months after the crime. The accused, who was living with her lover in Kerala following the murder, was nabbed by Davangere police along with two accomplices.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm