ಬ್ರೇಕಿಂಗ್ ನ್ಯೂಸ್
02-08-25 07:20 pm Bengaluru Correspondent ಕ್ರೈಂ
ಬೆಂಗಳೂರು, ಆ 02: ಮನೆಗೆಲಸದ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ಘೋಷಣೆಯಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಶಿಕ್ಷೆ ಪ್ರಕಟಿಸಿದ್ದು, ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು ದಂಡವನ್ನೂ ವಿಧಿಸಿದ್ದಾರೆ
ಐಪಿಸಿ ಸೆಕ್ಷನ್ 376(2)(ಕೆ) ಅಂದರೆ ಪ್ರಬಲವಾದ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಘೋಷಣೆಯಾಗಿದ್ದು, ಐದು ಲಕ್ಷ ರೂ. ದಂಡ ವಿಧಿಸಲಾಗಿದೆ. ಅದೇ ರೀತಿ ಐಪಿಸಿ ಸೆಕ್ಷನ್ 376(2)(ಎನ್) ಅಂದರೆ ಪದೇ ಪದೇ ಅತ್ಯಾಚಾರ ಅಪರಾಧಕ್ಕೆ ಜೀವಾವಧಿ ಶಿಕ್ಷೆ (ಜೀವನ ಪರ್ಯಂತ) ಹಾಗೂ ಐದು ಲಕ್ಷ ರೂ. ದಂಡ ವಿಧಿಸಲಾಗಿದೆ. ಹೀಗೆ ಒಟ್ಟು 10 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.
ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಜೀವಾವಧಿ ಶಿಕ್ಷೆ (ಜೀವನ ಪರ್ಯಂತ) ಹಾಗೂ ಒಟ್ಟು 11,60,000 ರೂ. ದಂಡವನ್ನು ವಿಧಿಸಲಾಗಿದೆ. ಈ ದಂಡದ ಮೊತ್ತದಲ್ಲಿ ಏಳು ಲಕ್ಷ ರೂ.ಗಳನ್ನು ಪರಿಹಾರವಾಗಿ ಅತ್ಯಾಚಾರ ಸಂತ್ರಸ್ತೆಗೆ ನೀಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಪ್ರಾಸಿಕ್ಯೂಷನ್ ವಾದ:
ಸರಕಾರದ ಪರವಾಗಿ ವಾದ ಮಂಡಿಸಿದ್ದ ವಿಶೇಷ ಸರಕಾರಿ ಅಭಿಯೋಜಕ ಬಿಎನ್ ಜಗದೀಶ್, "ಪ್ರಜ್ವಲ್ ಕೃತ್ಯ ಅತ್ಯಂತ ಹೀನವಾದುದು. ಜೀವನೋಪಾಯಕ್ಕಾಗಿ ಕೆಲಸಕ್ಕೆ ಸೇರಿದ್ದ ಅನಕ್ಷರಸ್ಥ ಮಹಿಳೆಯ ಮೇಲೆ ಈ ಘೋರ ಕೃತ್ಯ ಎಸಗಲಾಗಿದೆ. ವಿಡಿಯೋಗಳು ಬಹಿರಂಗಗೊಂಡ ನಂತರ ಸಂತ್ರಸ್ತೆ ತೀವ್ರ ಮಾನಸಿಕ ಹಿಂಸೆ ಅನುಭವಿಸಿ, ಆತ್ಮಹತ್ಯೆಗೂ ಯತ್ನಿಸಿದ್ದರು," ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಪ್ರಜ್ವಲ್ ಓರ್ವ ಚಟಗಾರನಾಗಿದ್ದು, ಅವರ ವಿರುದ್ಧ ಇನ್ನೂ ಮೂರು ಅತ್ಯಾಚಾರ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ಕೋರ್ಟ್ ಗಮನ ಸೆಳೆದಿದ್ದರು.
"ಸಮಾಜದಲ್ಲಿ ತಮಗಿದ್ದ ಉನ್ನತ ಸ್ಥಾನವನ್ನು ದುರುಪಯೋಗಪಡಿಸಿಕೊಂಡು, ಪಶ್ಚಾತ್ತಾಪವಿಲ್ಲದೆ ಅಪರಾಧವನ್ನು ಎಸಗಿದ್ದಾರೆ. ಸಂತ್ರಸ್ತೆಯು ಬೇಡಿಕೊಂಡರೂ ಲೆಕ್ಕಿಸದೆ ಅತ್ಯಾಚಾರ ಮಾಡಿ, ಅದನ್ನು ವಿಡಿಯೋ ಕೂಡ ಮಾಡಿರುವುದು ಪ್ರಜ್ವಲ್ ವಿಕೃತ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಸಮಾಜಕ್ಕೆ ಕಠಿಣ ಸಂದೇಶ ರವಾನಿಸಲು ಅವರಿಗೆ ಜೀವಾವಧಿ ಶಿಕ್ಷೆಯನ್ನೇ ವಿಧಿಸಬೇಕು," ಎಂದು ಜಗದೀಶ್ ಬಲವಾಗಿ ವಾದಿಸಿದ್ದರು.
ವಿಶೇಷ ಸರಕಾರಿ ಅಭಿಯೋಜಕ ಅಶೋಕ್ ನಾಯಕ್ ವಾದ ಮುಂದುವರಿಸಿ, "ಅತಿ ಕಿರಿಯ ವಯಸ್ಸಿನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಪ್ರಜ್ವಲ್ ರೇವಣ್ಣ, ತಮ್ಮ ಸ್ಥಾನಕ್ಕೆ ಕಳಂಕ ತಂದಿದ್ದಾರೆ. ಅವರಿಗೆ ಗರಿಷ್ಠ ಶಿಕ್ಷೆಯ ಜೊತೆಗೆ, ಸಂತ್ರಸ್ತೆಯು ಸಾಮಾಜಿಕವಾಗಿ ಅನುಭವಿಸಿದ ಅವಮಾನ ಮತ್ತು ಮುಜುಗರಕ್ಕಾಗಿ ದೊಡ್ಡ ಮೊತ್ತದ ದಂಡವನ್ನು ವಿಧಿಸಿ, ಅದನ್ನು ಪರಿಹಾರವಾಗಿ ನೀಡಬೇಕು," ಎಂದು ಮನವಿ ಮಾಡಿದ್ದರು.
ಪ್ರತಿವಾದಿಗಳ ವಾದ:
ಪ್ರಜ್ವಲ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ನಳಿನಾ ಮಾಯೇಗೌಡ, "ಪ್ರಜ್ವಲ್ ಹಣಕ್ಕಾಗಿ ರಾಜಕೀಯಕ್ಕೆ ಬಂದವರಲ್ಲ, ಜನಸೇವೆ ಅವರ ಉದ್ದೇಶ ಆಗಿತ್ತು. 2024ರ ಲೋಕಸಭಾ ಚುನಾವಣೆಗೆ ಕೆಲವೇ ದಿನ ಇರುವಾಗ ಈ ವಿಡಿಯೋಗಳನ್ನು ದುರುದ್ದೇಶದಿಂದ ಹರಿಬಿಡಲಾಗಿತ್ತು. ಇದು ಅವರ ರಾಜಕೀಯ ಭವಿಷ್ಯವನ್ನೇ ನಾಶಮಾಡಲು ನಡೆಸಿದ ಕುತಂತ್ರ," ಎಂದು ಆರೋಪಿಸಿದ್ದರು.
"ಪ್ರಜ್ವಲ್ ಇನ್ನೂ ಕೇವಲ 34 ವರ್ಷದ ಯುವಕ. ಈಗಾಗಲೇ ಒಂದು ವರ್ಷ ನಾಲ್ಕು ತಿಂಗಳಿಂದ ಜೈಲಿನಲ್ಲಿ ಇದ್ದಾರೆ. ಈ ಪ್ರಕರಣದಿಂದ ಅವರ ತೇಜೋವಧೆಯಾಗಿದ್ದು, ಅಪಾರ ನಷ್ಟವನ್ನೂ ಅನುಭವಿಸಿದ್ದಾರೆ. ಅವರ ವೃತ್ತಿ ಜೀವನಕ್ಕೆ ಮಾರಕವಾಗುವಂತಹ ಶಿಕ್ಷೆಯನ್ನು ಯಾವುದೇ ಕಾರಣಕ್ಕೂ ನೀಡಬಾರದು. ಸಂತ್ರಸ್ತೆಗಿಂತ ಪ್ರಜ್ವಲ್‌ಗೆ ಹೆಚ್ಚು ಹಾನಿಯಾಗಿದೆ," ಎಂದು ವಾದಿಸಿದ್ದರು.
ನ್ಯಾಯಾಲಯದಲ್ಲಿ ಪ್ರಜ್ವಲ್ ಭಾವುಕ;
ನ್ಯಾಯಾಲಯದಲ್ಲಿ ವೈಯಕ್ತಿಕವಾಗಿ ವಾದಿಸಿದ ಪ್ರಜ್ವಲ್ ರೇವಣ್ಣ, "ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ. ಮೆರಿಟ್ ವಿದ್ಯಾರ್ಥಿ. ಸಂಸದನಾಗಿ ಉತ್ತಮ ಕೆಲಸ ಮಾಡಿದ್ದೇನೆ. ನಾನು ಅತ್ಯಾಚಾರ ಮಾಡಿದ್ದೇನೆ ಎಂದು ಯಾರೂ ಚಕಾರವನ್ನೂ ಎತ್ತಿಲ್ಲ. ರಾಜಕೀಯದಲ್ಲಿ ವೇಗವಾಗಿ ಬೆಳೆದಿದ್ದೇ ನನಗೆ ಮುಳುವಾಯಿತು. ಚುನಾವಣೆಯ ಹೊತ್ತಲ್ಲಿ ಈ ಆರೋಪ ಹೊರಿಸಲಾಗಿದೆ. ಆರು ತಿಂಗಳಿಂದ ನನ್ನ ತಂದೆ-ತಾಯಿಯನ್ನೂ ನೋಡಿಲ್ಲ," ಎಂದು ದುಃಖಿತರಾಗಿ ನುಡಿದಿದ್ದರು.
In a landmark judgment, a special court for elected representatives in Bengaluru has sentenced former Member of Parliament Prajwal Revanna to life imprisonment in a rape case involving a domestic worker. The verdict was delivered by Judge Santhosh Gajanan Bhat, who also imposed a total fine of ₹11.6 lakh.
09-11-25 03:47 pm
Bangalore Correspondent
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm