ಬ್ರೇಕಿಂಗ್ ನ್ಯೂಸ್
05-08-25 10:39 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 05 : ಸೈಬರ್ ವಂಚನೆಗೊಳಗಾದ ಉದ್ಯಮಿಗೆ ಕಾನೂನು ಸೇವೆ ಒದಗಿಸುವುದಾಗಿ ನಂಬಿಸಿ ನಗರದಲ್ಲಿ ಕಾಲ್ ಸೆಂಟರ್ ತೆರೆದು ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪದ ಮೇಲೆ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಹೆಚ್ ಬಿಆರ್ ಲೇಔಟ್ ನಿವಾಸಿ ತೌಫೈಲ್ ಮೊಹಮ್ಮದ್ (38) ಬಂಧಿತ ಆರೋಪಿ. 12.5 ಲಕ್ಷ ಹಣ ಕಳೆದುಕೊಂಡ ಮಧ್ಯಪ್ರದೇಶ ಮೂಲದ ಉದ್ಯಮಿ ಸೂರ್ಯನಾರಾಯಣ್ ಸಿನ್ಹಾ ಎಂಬುವರು ನೀಡಿದ ದೂರು ಆಧರಿಸಿ ಸಿಸಿಬಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಈತ ನೀಡಿದ ಮಾಹಿತಿ ಆಧರಿಸಿ ಕಸ್ತೂರಿನಗರದಲ್ಲಿರುವ ಇಂಡಿಯಾ ಲೀಗಲ್ ಹೆಸರಿನಲ್ಲಿ ನಡೆಸುತ್ತಿದ್ದ ಕಾಲ್ ಸೆಂಟರ್ನಲ್ಲಿದ್ದ 10 ಕಂಪ್ಯೂಟರ್ ಹಾರ್ಡ್ ಡಿಸ್ಕ್ ಗಳು, 7 ನಕಲಿ ಕಂಪನಿ ಸೀಲ್ಗಳು, ಬಾಡಿಗೆ ಒಪ್ಪಂದ ಪತ್ರಗಳು, 11 ಸಿಮ್ ಕಾರ್ಡ್ ಗಳು ಹಾಗೂ ಎಸ್ಐಪಿ ಟ್ರಂಕ್ ವ್ಯವಸ್ಥೆಯ ಡೇಟಾ ಸೇರಿದಂತೆ ಇನ್ನಿತರ ಉಪಕರಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಸದ್ಯ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಮಿ ಸೂರ್ಯನಾರಾಯಣ್ ಅವರು ಮಧ್ಯಪ್ರದೇಶದಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸುವುದಾಗಿ ನಂಬಿಸಿ 1.5 ಕೋಟಿ ವಂಚನೆಗೆ ಒಳಗಾಗಿದ್ದರು. ಈ ಹಣವನ್ನ ಮರಳಿ ಪಡೆಯಲು ಆನ್ ಲೈನ್ ನಲ್ಲಿ ಶೋಧ ನಡೆಸುವಾಗ ಆರೋಪಿ ಒಡೆತನದ ಕ್ವಿಕ್ ಮೊಟೊ ಲೀಗಲ್ ಸರ್ವಿಸ್ ವೆಬ್ ಸೈಟ್ ಕಂಡು ಸಂಪರ್ಕಿಸಿದ್ದಾರೆ. ವಂಚನೆ ವಿವರ ತಿಳಿದುಕೊಂಡು ಆರೋಪಿಯು ಕಾನೂನುಸೇವೆ ಒದಗಿಸುವುದಾಗಿ ದೂರುದಾರರಿಂದ 12.5 ಲಕ್ಷ ಹಣ ಶುಲ್ಕ ವರ್ಗಾಯಿಸಿಕೊಂಡು ವಂಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕಾನೂನು ಸೇವೆ ಸೋಗಿನಲ್ಲಿ 12.5 ಲಕ್ಷ ಹಣ ವಂಚಿಸಿದ ಕಂಪನಿ ಬಗ್ಗೆ ಶೋಧಿಸಿದಾಗ ಬೆಂಗಳೂರಿನ ರಾಮೂರ್ತಿ ನಗರದಲ್ಲಿರುವುದಾಗಿ ಹೇಳಿ ಮಧ್ಯಪ್ರದೇಶ ಪೊಲೀಸರು ದೂರುದಾರರಿಗೆ ತಿಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪ್ರಕರಣ ವರ್ಗಾಯಿಸಿದ್ದರು.
ಈ ಪ್ರಕರಣದ ತನಿಖೆ ಕೈಗೊಂಡ ಸೈಬರ್ ಕ್ರೈಂ ಪೊಲೀಸರು ವೆಬ್ ಸೈಟ್ ನಲ್ಲಿನ ವಿಳಾಸ ಅಧರಿಸಿ ಕಸ್ತೂರಿನಗರಕ್ಕೆ ತೆರಳಿ ಪರಿಶೀಲಿಸಿದಾಗ ಕ್ವಿಕ್ ಮೊಟೊ ಲೀಗಲ್ ಸರ್ವಿಸ್ ಕಂಪನಿಯೇ ಇಲ್ಲದಿರುವುದು ತಿಳಿದು ಬಂದಿತ್ತು. ಇದರ ಬದಲಾಗಿ ಇಂಡಿಯಾ ಲೀಗಲ್ ಹೆಸರಿನಲ್ಲಿ ಕಾಲ್ ಸೆಂಟರ್ ನಡೆಸುತ್ತಿರುವುದು ಪೊಲೀಸರಿಗೆ ಗೊತ್ತಾಯ್ತು.
ಆರೋಪಿ ವಂಚಿಸುವುದನ್ನ ಕಾಯಕ ಮಾಡಿಕೊಂಡಿದ್ದ. ಕಳೆದ ಒಂದು ವರ್ಷದಿಂದ ನಗರದಲ್ಲಿ ಕಾಲ್ ಸೆಂಟರ್ ನಡೆಸುತ್ತಿದ್ದ. ಇದಕ್ಕಾಗಿ 12 ಮಂದಿ ಟೆಲಿಕಾಲರ್ ಗಳನ್ನ ನೇಮಿಸಿಕೊಂಡಿದ್ದ. ಕಾನೂನು ಸೇವೆ ಸೋಗಿನಲ್ಲಿ ಸಾರ್ವಜನಿಕರಿಗೆ ಹಣ ವಂಚಿಸುತ್ತಿದ್ದ. ಹಣ ವಂಚಿಸಿದ ಬಳಿಕ ಎಸ್ಐಪಿ ತಂತ್ರಜ್ಞಾನದಿಂದ ಮೊಬೈಲ್ ನಂಬರ್ ಗಳನ್ನ ಬ್ಲಾಕ್ ಮಾಡುತ್ತಿದ್ದ. ಆರೋಪಿ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈತನ ಸಹೋದರ ದುಬೈನಲ್ಲಿದ್ದು, ಈತನ ಸೂಚನೆ ಮೇರೆಗೆ ಕಂಪನಿ ನಡೆಸುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾನೆ.
ಈತನನ್ನ ಈ ಹಿಂದೆ ವಂಚನೆ ಪ್ರಕರಣದಲ್ಲಿ ಪಾಂಡಿಚೇರಿ ಪೊಲೀಸರು ಬಂಧಿಸಿದ್ದರು. ಆರೋಪಿ ವಿರುದ್ಧ ರಾಷ್ಟ್ರೀಯ ಸೈಬರ್ ಕ್ರೈಂ ಪೋರ್ಟಲ್ ನಲ್ಲಿ 29ಕ್ಕೂ ಹೆಚ್ಚು ಅಧಿಕ ದೂರುಗಳು ದಾಖಲಾಗಿದ್ದು ಕೋಟ್ಯಂತರ ರೂಪಾಯಿ ವಂಚಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
A businessman who earlier lost ₹1.5 crore in a cyber fraud has now fallen victim to a second scam, this time by a fraudster posing as a legal service provider. The accused has been arrested by the Bengaluru Cyber Crime Police.
09-11-25 03:47 pm
Bangalore Correspondent
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm