ಬ್ರೇಕಿಂಗ್ ನ್ಯೂಸ್
08-08-25 10:07 pm Bangalore Correspondent ಕ್ರೈಂ
ಬೆಂಗಳೂರು, ಆ 08 : ಬೆಂಗಳೂರಿನಲ್ಲಿ ಹೈಫೈ ಬಡಾವಣೆಯೊಂದರಲ್ಲಿ ವಾಸವಾಗಿರುವ ಯುವತಿಯೊಬ್ಬಳು ತನ್ನ ಪರಿಚಯಸ್ಥ ಹುಡುಗನಿಗೆ ತನ್ನ ಖಾಸಗಿ ವಿಡಿಯೋಗಳನ್ನು ಶೇರ್ ಮಾಡಿದ್ದಳು. ಆದರೆ, ಆ ವಿಡಿಯೋಗಳು ಈಗ ಆನ್ ಲೈನ್ ನಲ್ಲಿ ಲೀಕ್ ಆಗಿವೆ. ಸುಮಾರು 22 ಅಶ್ಲೀಲ ವೆಬ್ ಸೈಟ್ ಗಳಲ್ಲಿ ಆಕೆಯ ಖಾಸಗಿ ಫೋಟೋಗಳು ಕಾಣಿಸಿಕೊಂಡಿವೆ.
ಇದರಿಂದ ಗಾಬರಿಗೊಂಡಿರುವ ಆಕೆ ಪೊಲೀಸರಿಗೆ ದೂರು ಸಲ್ಲಿಸಿ, ಅವುಗಳನ್ನು ಅಲ್ಲಿಂದ ತೆಗೆದುಹಾಕುವಂತೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾಳೆ. ಇದರ ನಡುವೆಯೇ, ಅನಾಮಧೇಯ ವ್ಯಕ್ತಿಯೊಬ್ಬ ಆಕೆಗೆ ಕರೆ ಮಾಡಿ, ಇನ್ ಸ್ಟಾಗ್ರಾಂನಲ್ಲಿರುವ ಆಕೆಯ ವಿಡಿಯೋಗಳನ್ನು ಡಿಲೀಟ್ ಮಾಡಿದರೆ 5 ಸಾವಿರ ರೂ. ಕಳುಹಿಸಬೇಕು. ಇಲ್ಲವಾದರೆ, ಮತ್ತಷ್ಟು ವೆಬ್ ಸೈಟ್ ಗಳಿಗೆ ಆ ವಿಡಿಯೋಗಳನ್ನು ಹರಡುವುದಾಗಿ ಬೆದರಿಸಿರುವ ಘಟನೆ ನಡೆದಿದೆ. ಮುಂದೇನಾಯ್ತು… ?
ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಈಕೆ ತನ್ನ ಕೆಲವು ಖಾಸಗಿ ವಿಡಿಯೋಗಳನ್ನು ಇತ್ತೀಚಿಗೆ ತನ್ನ ಆಪ್ತನಾಗಿರುವ ಅನೂಪ್ (ಹೆಸರು ಬದಲಿಸಲಾಗಿದೆ) ಎಂಬಾತನಿಗೆ ಕಳುಹಿಸಿದ್ದಾಳೆ. ಆತ ದೂರದ ಯುನೈಟೆಡ್ ಕಿಂಗ್ ಡಮ್ ನಲ್ಲಿರುವ ಕೇಂಬ್ರಿಡ್ಜ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದಾನೆ . ಅಂದಹಾಗೆ, ಈಕೆ ಆ ವಿಡಿಯೋಗಳನ್ನು ಕಳುಹಿಸಿದ್ದು ಈಗಲ್ಲ, 2023ರಲ್ಲಿ! ಹೌದು. 2023ರ ಆ. 18ರಂದು ಆಕೆ ಅನೂಪ್ ಗೆ ತನ್ನ ಖಾಸಗಿ ಫೋಟೋ, ವಿಡಿಯೋಗಳನ್ನು ಕಳಿಸಿದ್ದಳು. ಆದರೆ, ಅವು ಈಗ ಆನ್ ಲೈನ್ ನಲ್ಲಿ ಸೋರಿಕೆಯಾಗಿವೆ. ಸೋಷಿಯಲ್ ಮೀಡಿಯಾ ಆಯಪ್ ಮೂಲಕ ಆಕೆ ಕಳುಹಿಸಿದ್ದಾಳೆ. ಆದರೆ, ಆಕೆಯ ಆ ಖಾಸಗಿ ವಿಡಿಯೋಗಳು, ಫೋಟೋಗಳು 22 ಪೋರ್ನ್ ಪೋರ್ಟಲ್ ಗಳಲ್ಲಿ ಅವು ಕಾಣತೊಡಗಿವೆ.
ಇದು ಗೊತ್ತಾಗಿ ಗಲಿಬಿಲಿಯಾದ ಆಕೆ ನೇರವಾಗಿ ಇದೇ ಏಪ್ರಿಲ್ ನಲ್ಲಿ ಬೆಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಿದ್ದಳು. ಅನೂಪ್ ಎಂಬಾತನಿಗೆ ತಾನು ವಿಡಿಯೋ ಕಳಿಸಿದ್ದು, ಅದನ್ನು ಕೇಳಿದ್ದಕ್ಕೆ ಅನೂಪ್ ತನಗೇನೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾನೆ. ಹಾಗಾಗಿ, ನನ್ನ ವಿಡಿಯೋಗಳು ಆನ್ ಲೈನ್ ಜಾಲತಾಣಗಳಿಂದ ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಳು. ಅತ್ತ, ಪೊಲೀಸರು ದೂರು ದಾಖಲಿಸಿಕೊಂಡು ಆಕೆಯ ಪರವಾಗಿ ವೆಬ್ ಸೈಟ್ ಗಳಿಗೆ ಮನವಿ ಮಾಡಿದ್ದರು. ಆದರೆ, ಆ ವಿಡಿಯೋಗಳು ಡಿಲೀಟ್ ಆಗಿಲ್ಲ.
ಇತ್ತೀಚೆಗೆ, ಆಕೆಗೊಮ್ಮ ಅನಾಮಿಕನು ಇನ್ ಸ್ಟಾ ಗ್ರಾಂ ಮೂಲಕ ಮೆಸೇಜ್ ಮಾಡಿ, ತಾನು ಈಗಾಗಲೇ ಇನ್ ಸ್ಟಾ ಗ್ರಾಂನಲ್ಲಿ ಆಕೆಯ ವಿಡಿಯೋಗಳನ್ನು ಹಾಕಿದ್ದು ಅವುಗಳನ್ನು ಡಿಲೀಟ್ ಮಾಡಲು ತನಗೆ 5 ಸಾವಿರ ರೂ. ನೀಡಬೇಕು ಎಂದು ಬೇಡಿಕೆಯಿಟ್ಟಿದ್ದಾನೆ. ಅಲ್ಲದೆ, ಯುಪಿಐ ಮೂಲಕ ಹಣ ಪಾವತಿಸುವಂತೆ ಒಂದು ನಂಬರನ್ನೂ ನೀಡಿದ್ದಾನೆ. ಹಣ ನೀಡದಿದ್ದರೆ, ಆಕೆಯ ಫೋಟೋ, ವಿಡಿಯೋಗಳು ಮತ್ತಷ್ಟು ಪೋರ್ನ್ ವೆಬ್ ಸೈಟ್ ಗಳಿಗೆ ಕಳಿಸುವುದಾಗಿಯೂ ಬೆದರಿಕೆಯೊಡ್ಡಿದ್ದಾನೆ. ಹಣ ಕಳುಹಿಸಲು ಹುಡುಗಿ ಒಪ್ಪಿಲ್ಲ. ಅದರಿಂದಾಗಿ, ಆಕೆಯ ಫೋಟೋ, ವಿಡಿಯೋಗಳು ಮತ್ತಷ್ಟು ವೆಬ್ ಸೈಟ್ ಗಳಲ್ಲಿ ಪ್ರದರ್ಶನವಾಗಲಾರಂಭಿಸಿವೆ.
ಮೊನ್ನೆ ಮಂಗಳವಾರ (ಆ. 5) ಬೆಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ಆಗಮಿಸಿದ್ದ ಆಕೆ, ಆ ಅನಾಮಿಕ ವ್ಯಕ್ತಿಯ ವಿರುದ್ಧ ದೂರು ಸಲ್ಲಿಸಿದ್ದಾಳೆ. ವಿಷಯ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸರು ಹುಡುಗಿಯ ಗೆಳೆಯ ಅನೂಪ್, ಅನಾಮಿಕ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.
A young woman from an upscale Bengaluru neighbourhood has lodged a police complaint after her private videos, initially shared with a close male friend, surfaced on 22 pornographic websites. The case has taken a serious turn with the woman also receiving blackmail threats from an anonymous individual.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
27-07-26 09:48 pm
HK News Staffer
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
27-07-26 11:07 pm
Mangaluru Staffer
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm
ಸಚಿವ ಸ್ಥಾನ ಕೊಡಿಸಲು ಮೂರು ಕೋಟಿ ಬೇಡಿಕೆ ; ಕೇರಳದ ಶ...
27-07-26 09:04 pm
ಬೆಂಗಳೂರು ಗ್ಯಾರೇಜ್ ನಲ್ಲಿ ಅಗ್ನಿ ಅವಘಡ ; ಜಾಗ್ವಾರ...
27-07-26 07:35 pm
ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಲೈಂಗಿಕ ಕಿರುಕುಳ ಆರೋ...
27-07-26 01:09 pm