ಬ್ರೇಕಿಂಗ್ ನ್ಯೂಸ್
11-08-25 12:37 pm Mangalore Correspondent ಕ್ರೈಂ
ಮಂಗಳೂರು, ಆ.11 : ತಮ್ಮನ್ನು ಅಂಚೆ ಕಚೇರಿಯ ಉದ್ಯೋಗಿ ಎಂದು ಬಿಂಬಿಸಿ ಎಂಡಿಎಂಎ ಡ್ರಗ್ಸ್ ಪಾರ್ಸೆಲ್ ಕಳುಹಿಸಿದ್ದಕ್ಕೆ ಡಿಜಿಟಲ್ ಅರೆಸ್ಟ್ ಆಗಿದ್ದೀರಿ ಎಂದು ಹೇಳಿ ವೃದ್ಧ ಮಹಿಳೆಯೊಬ್ಬರನ್ನು ಸೈಬರ್ ವಂಚಕರು ವಂಚಿಸಿದ ಘಟನೆ ನಡೆದಿದ್ದು ಮಹಿಳೆಯಿಂದ ಬರೋಬ್ಬರಿ 3.9 ಕೋಟಿ ರೂ ಪೀಕಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಸಂತ್ರಸ್ತೆಯ ಹೆಸರನ್ನು ತೆರವುಗೊಳಿಸಲು ಹಣ ನೀಡುವಂತೆ 7 ತಿಂಗಳಿಗೂ ಹೆಚ್ಚು ಕಾಲ ನಿರಂತರ ಪೀಡಿಸಿದ್ದು ಕೊನೆಗೆ ಮೋಸದ ಅರಿವಾದ ಮಹಿಳೆ ಪೊಲೀಸ್ ದೂರು ನೀಡಿದ್ದಾರೆ.
ಕಳೆದ ಜನವರಿ 15 ರಂದು ಕೆಲಸದಿಂದ ನಿವೃತ್ತಿ ಹೊಂದಿದ ಲೆನಿ ಪ್ರಭು ಎಂಬ ಮಹಿಳೆಗೆ ಅಪರಿಚಿತ ಸಂಖ್ಯೆಯಿಂದ ಮಿಸ್ಡ್ ಕಾಲ್ ಬಂದಿತ್ತು. ಮತ್ತೆ ಕರೆ ಮಾಡಿದಾಗ, ಪೋಸ್ಟ್ ಆಫೀಸ್ನಲ್ಲಿ ಉದ್ಯೋಗಿ ಎಂದು ಹೇಳಿಕೊಂಡ ಮಹಿಳೆ ಸ್ವೀಕರಿಸಿದ್ದು, ನೀವು ಚೀನಾಕ್ಕೆ ಕಳುಹಿಸಿದ್ದ ಪಾರ್ಸೆಲ್ ನಲ್ಲಿ 150 ಗ್ರಾಂ ಎಂಡಿಎಂಎ ಮಾದಕ ದ್ರವ್ಯ ಪತ್ತೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಾದಲ್ಲಿ 75 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ಮಾತುಗಳನ್ನ ಹೇಳುತ್ತಾರೆ. ಸಂತ್ರಸ್ತ ಮಹಿಳೆ ತಾನು ಯಾವುದೇ ಪಾರ್ಸೆಲ್ ಕಳುಹಿಸಿಲ್ಲ ಎಂದು ಹೇಳಿದಾಗ, ಇವರದೇ ಹೆಸರಿನ ಗುರುತಿನ ಚೀಟಿ ತೋರಿಸಿ ಪಾರ್ಸೆಲ್ ನಿಮ್ಮ ಹೆಸರಿನಲ್ಲಿ ಕಳುಹಿಸಲಾಗಿದೆ ಎಂದು ನಂಬಿಸಿದ್ದರು.
ಆಬಳಿಕ ಸಂತ್ರಸ್ತ ಮಹಿಳೆಗೆ ಸಹಾಯ ಮಾಡುವುದಾಗಿ ಮತ್ತೊಬ್ಬ ಕರೆ ಮಾಡಿದ್ದು, ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿದ್ದಾನೆ. ನಂತರ ವಂಚಕ, ಪ್ರಕರಣದಿಂದ ನಿಮ್ಮ ಹೆಸರನ್ನು ಕೈಬಿಡಲು ಆಕ್ಷೇಪಣಾ ರಹಿತ ಪ್ರಮಾಣಪತ್ರವನ್ನು ಪಡೆಯಲು ಪಿಂಚಣಿಯ ಶೇಕಡಾ 93 ಭಾಗ ಪಾವತಿಸುವಂತೆ ಕೇಳಿದ್ದ. ಆನಂತರ ವಂಚಕರು ಮಹಿಳೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಡಿಜಿಟಲ್ ಅರೆಸ್ಟ್ ಆಗಿದ್ದೀರಿ ಎಂದು ಹೇಳಿ ಯಾರೊಂದಿಗೂ ಮಾಹಿತಿ ಹಂಚಿಕೊಳ್ಳದಂತೆ ತಡೆದಿದ್ದರು.
ಎರಡು ದಿನಗಳ ನಂತರ ಮಹಿಳೆಯಿಂದ ಆರ್ಟಿಜಿಎಸ್ ಮೂಲಕ 55 ಲಕ್ಷ ರೂ.ಗಳನ್ನು ವಂಚಕರ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು. ಜನವರಿ 17 ರಿಂದ ಜುಲೈ 4ರ ವರೆಗೆ, ಮಹಿಳೆಯಿಂದ ಹಂತ ಹಂತವಾಗಿ ಬರೋಬ್ಬರಿ 3.9 ಕೋಟಿ ರೂ. ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಹಣವನ್ನು ಹಿಂತಿರುಗಿಸುವುದಾಗಿ ಹೇಳಿ ವಿವಿಧ ಖಾತೆಗಳಿಗೆ ಹಣ ಹಾಕಿಸಿಕೊಂಡಿದ್ದರು. ಆದರೆ ಹಲವು ತಿಂಗಳು ಕಳೆದರೂ ಆ ಕಡೆಯಿಂದ ಮಹಿಳೆಗೆ ಪ್ರತಿಕ್ರಿಯೆ ಬಾರದ್ದರಿಂದ ತಾನು ಮೋಸ ಹೋಗಿದ್ದು ಮಹಿಳೆಗೆ ಅರಿವಾಗಿದೆ. ಇದರಂತೆ ಸಂತ್ರಸ್ತ ಮಹಿಳೆ ಮಂಗಳೂರು ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾರೆ.
In a shocking case of cybercrime, fraudsters posing as postal officials tricked an elderly woman into believing she had been “digitally arrested” over a parcel containing drugs allegedly sent to China — and swindled her out of a staggering ₹3.9 crore over a period of seven months.
09-11-25 03:47 pm
Bangalore Correspondent
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm