ಬ್ರೇಕಿಂಗ್ ನ್ಯೂಸ್
12-08-25 12:36 pm Bangalore Correspondent ಕ್ರೈಂ
ಬೆಂಗಳೂರು, ಆ.12 : ತುಮಕೂರು ತಾಲೂಕಿನ ಕೊರಟಗೆರೆಯಲ್ಲಿ ಅತ್ತೆಯನ್ನು ಅಳಿಯನೇ ಕೊಲೆಗೈದು ಶವ ಕತ್ತರಿಸಿ 19 ಕಡೆಗಳಲ್ಲಿ ಎಸೆದಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ದಂತ ವೈದ್ಯ ಡಾ.ರಾಮಚಂದ್ರ ಸೇರಿ ಮೂವರನ್ನು ಬಂಧಿಸಿದ್ದಾರೆ. ಡಾ.ರಾಮಚಂದ್ರನೇ ತನ್ನ ಅತ್ತೆ ಲಕ್ಷ್ಮೀದೇವಮ್ಮ ಅವರನ್ನು ಹತ್ಯೆಗೈದು 19 ತುಂಡುಗಳನ್ನಾಗಿಸಿ ಎಸೆದಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಮುಖ ಆರೋಪಿ ಡಾ.ರಾಮಚಂದ್ರನಿಗೆ ಸಹಕರಿಸಿದ್ದ ಕಲ್ಲಹಳ್ಳಿಯ ಸತೀಶ್ ಕೆ.ಎನ್. ಮತ್ತು ಕಿರಣ್ ಕೆ.ಎಸ್. ಎಂಬವರನ್ನು ಬಂಧಿಸಲಾಗಿದೆ ಎಂದು ತುಮಕೂರು ಜಿಲ್ಲೆಯ ಎಸ್ಪಿ ಅಶೋಕ್ ಕೆ.ವಿ. ಮಾಹಿತಿ ನೀಡಿದರು. ''ಬೆಳ್ಳಾವಿಯ ಲಕ್ಷ್ಮೀದೇವಮ್ಮ ಆಗಸ್ಟ್ 3ರಂದು ತುಮಕೂರಿನ ಕುವೆಂಪುನಗರದ ತನ್ನ ಮಗಳ ಮನೆಗೆ ಬಂದಿದ್ದರು. ವಾಪಸ್ ಹೊರಟಾಗ ಅಳಿಯ ಡಾ.ರಾಮಚಂದ್ರ ತಾನೇ ಬಿಟ್ಟು ಬರುವುದಾಗಿ ಹೇಳಿ ಕಾರಿನಲ್ಲಿ ಕರೆದೊಯ್ದಿದ್ದ. ಮಾರ್ಗಮಧ್ಯೆ ಅತ್ತೆಯನ್ನು ಬಟ್ಟೆಯಿಂದ ಉರುಳು ಬಿಗಿದು ಕೊಲೆ ಮಾಡಿ ಊರ್ಡಿಗೆರೆ ಹೋಬಳಿ ಹೊಸಪಾಳ್ಯದ ಬಳಿಯ ಸ್ನೇಹಿತ ಸತೀಶ್ನ ತೋಟಕ್ಕೆ ಶವ ಸಹಿತ ಕಾರಿನಲ್ಲಿ ತೆರಳಿದ್ದ. ಶವವನ್ನು ಎಲ್ಲಿಯಾದರೂ ಎಸೆದರೆ ಅಥವಾ ಕೆರೆಗೆ ಹಾಕಿದರೆ ತೇಲುವುದರಿಂದ ಪೊಲೀಸರಿಗೆ ಸುಲಭದಲ್ಲಿ ಪತ್ತೆಯಾಗುತ್ತದೆಂದು ದೇಹವನ್ನು ತುಂಡರಿಸಲು ಪ್ಲಾನ್ ಮಾಡಿದ್ದಾರೆ.
ಶವ ಕೊಳೆಯುವ ಸ್ಥಿತಿ ತಲುಪಿದಾಗ ಆ.6ರಂದು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ನಲ್ಲಿ ಕಟ್ಟಿ ಕೊರಟಗೆರೆಯ 19 ಕಡೆಗಳಲ್ಲಿ ಎಸೆದಿದ್ದಾರೆ. ಕೃತ್ಯಕ್ಕೆ ಇನ್ನೊಬ್ಬ ಸ್ನೇಹಿತ ಕಿರಣ್ ಕೂಡ ಸಾಥ್ ನೀಡಿದ್ದ. ಕೆರೆಗೆ ಬಿಸಾಕಿದರೆ ಶವದ ತುಂಡುಗಳು ತೇಲುತ್ತವೆಂದು ಪೀಸ್ಗಳನ್ನು ಕಟ್ಟಿ ಕರೆಗೆ ಹಾಕಿದ್ದರು.
ಅನೈತಿಕ ಸಂಬಂಧ ಶಂಕೆಯಿಂದ ಹತ್ಯೆ
ಲಕ್ಷ್ಮೀದೇವಮ್ಮ ಆಗಾಗ್ಗೆ ಅಳಿಯ ಡಾ.ರಾಮಚಂದ್ರನ ಮನೆಗೆ ಬರುತ್ತಿದ್ದರು. ಅಲ್ಲದೆ ಪದೇ ಪದೇ ಮಗಳನ್ನು ತನ್ನೂರು ಬೆಳ್ಳಾವಿಗೆ ಕರೆದುಕೊಂಡು ಹೋಗುತ್ತಿದ್ದರು. ಅತ್ತೆ ಅನೈತಿಕ ಚಟುವಟಿಕೆಗಾಗಿಯೇ ತನ್ನ ಪತ್ನಿಯನ್ನು ಕರೆದುಕೊಂಡು ಹೋಗುತ್ತಿದ್ದಾರೆಂದು ಶಂಕಿಸಿದ್ದ ರಾಮಚಂದ್ರ, ಅತ್ತೆಯ ಕೊಲೆಗೆ 6 ತಿಂಗಳ ಹಿಂದೆಯೇ ನಿರ್ಧರಿಸಿದ್ದ. ಅಲ್ಲದೆ, ಇದಕ್ಕಾಗಿ ಹೊಸ ಕಾರನ್ನು ಖರೀದಿಸಿದ್ದ.
ಆ.3ರಂದು ಲಕ್ಷ್ಮೀದೇವಮ್ಮ ಮಗಳ ಮನೆಗೆ ಹೋಗಿ ಬರುವುದಾಗಿ ಹೇಳಿದ್ದವರು ವಾಪಸ್ ಬಂದಿಲ್ಲವೆಂದು ಇತ್ತ ಪತಿ ಬಸವರಾಜು ಬೆಳ್ಳಾವಿ ಠಾಣೆಗೆ ದೂರು ನೀಡಿದ್ದರು. ಇದೇ ವೇಳೆ, ಲಕ್ಷ್ಮೀದೇವಮ್ಮನ ತಲೆಯ ಭಾಗ ಪತ್ತೆಯಾದಾಗ ಕೊಲೆಯಾಗಿರುವುದು ಆಕೆಯೇ ಎಂಬುದು ಖಚಿತವಾಗಿತ್ತು. ಶವದ ಭಾಗಗಳು ಪತ್ತೆಯಾದ ಸ್ಥಳದ ಸಿಸಿಟಿವಿ ಪರಿಶೀಲಿಸಿದಾಗ ಒಂದೇ ಕಾರು ಅಲ್ಲಿ ಸಂಚರಿಸಿದ್ದು ಪತ್ತೆಯಾಗಿದೆ. ಆ ಕಾರು ಸತೀಶನ ಹೆಸರಲ್ಲಿದ್ದುದರಿಂದ ತನಿಖೆಗಾಗಿ ಪೊಲೀಸರು ಆತನ ಮೊಬೈಲ್ ನಂಬರ್ ಟ್ರೇಸ್ ಮಾಡಿದ್ದಾರೆ. ಸತೀಶ್ ಮತ್ತು ಕಿರಣ್ ಹೊರನಾಡಲ್ಲಿರುವುದು ತಿಳಿದು ಅಲ್ಲಿಂದ ಅವರನ್ನು ಕರೆ ತಂದಿದ್ದಾರೆ. ಈ ವೇಳೆ ಡಾ.ರಾಮಚಂದ್ರ ಕೊಲೆ ಮಾಡಿರುವುದು ತಿಳಿದು ಆತನನನ್ನು ಬಂಧಿಸಿ ವಿಚಾರಿಸಿದಾಗ ಸತ್ಯ ಬಯಲಾಗಿದೆ.
Tumakuru police have cracked a gruesome murder case in Koratagere, where a dentist allegedly killed his mother-in-law, dismembered her body into 19 pieces, and scattered them across different locations. Three people, including the prime accused Dr. Ramachandra, have been arrested.
10-12-25 09:40 pm
HK News Desk
ಬೆಂಗಳೂರಿನಲ್ಲಿ ರಸ್ತೆ ಅಪಘಾತ ; ಆರು ತಿಂಗಳ ಹಿಂದಷ್ಟ...
10-12-25 05:37 pm
ಅಧಿಕಾರ ಹಂಚಿಕೆ ಬಗ್ಗೆ ಗೊಂದಲ ; ಯಾರೂ ಆ ಬಗ್ಗೆ ಮಾತನ...
10-12-25 12:58 pm
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ; ಹೊಟೇಲುಗಳ ಸಂಘ...
09-12-25 08:56 pm
ಶಾಲಾ ಬಸ್ಸಿನಡಿಗೆ ಬಿದ್ದು ಎಂಟು ವರ್ಷದ ಬಾಲಕಿ ದುರಂತ...
09-12-25 08:53 pm
10-12-25 01:17 pm
HK News Desk
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
Goa Fire Accident, 23 dead: ಗೋವಾದ ನೈಟ್ಕ್ಲಬ್...
07-12-25 02:04 pm
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
10-12-25 08:45 pm
Mangalore Correspondent
“Board Exams Made Easier: AI Shikshak Breaks...
10-12-25 06:01 pm
Mangalore Accident, Gowjee Events owner Death...
10-12-25 04:00 pm
Mangalore, Builder Encroaches Bejai Canal: ಬಿ...
09-12-25 07:30 pm
ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ ದೈವ ! ಹರಕೆ ನೇಮದ...
09-12-25 05:21 pm
10-12-25 10:14 pm
Udupi Correspondent
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm