Dharmasthala Mask Man Arrest, SIT: ಧರ್ಮಸ್ಥಳ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ; ದೂರುದಾರನೇ ಅರೆಸ್ಟ್ ! ಎಸ್ಐಟಿ ಮುಖ್ಯಸ್ಥರ ಸುದೀರ್ಘ ಡ್ರಿಲ್ ಬೆನ್ನಲ್ಲೇ ಬಂಧನ 

23-08-25 11:11 am       Mangaluru Correspondent   ಕ್ರೈಂ

ಮಹತ್ವದ ಬೆಳವಣಿಗೆಯಲ್ಲಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದು ಹೇಳಿ ದೇಶಾದ್ಯಂತ ಸಂಚಲನ ಎಬ್ಬಿಸಿದ್ದ ದೂರುದಾರನನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ.

ಮಂಗಳೂರು, ಆ.22: ಮಹತ್ವದ ಬೆಳವಣಿಗೆಯಲ್ಲಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದು ಹೇಳಿ ದೇಶಾದ್ಯಂತ ಸಂಚಲನ ಎಬ್ಬಿಸಿದ್ದ ದೂರುದಾರನನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣ ಸಂಬಂಧಿಸಿ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರೇ ಖುದ್ದಾಗಿ ಅನಾಮಿಕ ದೂರುದಾರನನ್ನು ಎರಡು ದಿನಗಳಿಂದ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದು ಇದರ ಬೆನ್ನಲ್ಲೇ ಬಂಧನಕ್ಕೆ ಸೂಚನೆ ನೀಡಿದ್ದಾರೆ. 

ಈಗಾಗಲೇ ಶವ ಶೋಧಕ್ಕಾಗಿ ಅಗೆದಿರುವ 17 ಜಾಗದ ಬಗ್ಗೆ ಮತ್ತು ಅಲ್ಲಿ ಶವ ಹೂತಿರುವ ವಿಚಾರದಲ್ಲಿ ಪ್ರಶ್ನೆಗಳನ್ನು ಮಾಡಿ ವಿಚಾರಣೆ ನಡೆಸಿದ್ದರು.‌ ಶವ ಹೂತಿದ್ದೇನೆ ಎನ್ನಲಾದ ಜಾಗದಲ್ಲಿ ಶವದ ಕುರುಹುಗಳು ಸಿಗದೇ ಇದ್ದುದರಿಂದ ದೂರುದಾರನ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಯಾರದ್ದೋ ಸಂಚಿನ ಭಾಗವಾಗಿ ಈ ದೂರು ನೀಡಿದ್ದಾನೆಯೇ ಎಂಬ ಪ್ರಶ್ನೆ ಮೂಡಿತ್ತು. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ತನಿಖೆಗೆ ಒತ್ತಾಯ ಕೇಳಿಬರುತ್ತಿದ್ದಂತೆ ಎಸ್ಐಟಿ ತನಿಖೆಯೂ ಹೊಸ ಆಯಾಮಗಳನ್ನು ಪಡೆದುಕೊಂಡಿತ್ತು. ಧರ್ಮಸ್ಥಳ ವಿರುದ್ಧ ನಿಂತಿರುವ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಿದ್ದರು.‌

ಇದೀಗ ಇಡೀ ತನಿಖೆಗೆ ಮುಖ್ಯ ಸಾಕ್ಷಿಗಾರ ಮತ್ತು ಪಾತ್ರಧಾರಿ ಎಂದು ಹೇಳಲಾಗಿದ್ದ ದೂರುದಾರ ವ್ಯಕ್ತಿಯನ್ನು ಸುದೀರ್ಘ ವಿಚಾರಣೆ ಬಳಿಕ ಎಸ್ಐಟಿ ಮುಖ್ಯಸ್ಥರೇ ಬಂಧನಕ್ಕೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ದೂರುದಾರ ಗುರುತಿಸಿದ್ದ 17 ಕಡೆಗಳಲ್ಲಿ ಅಗೆದಿರುವ ಎಸ್ಐಟಿ ಅಧಿಕಾರಿಗಳಿಗೆ ಹೆಚ್ಚಿನ ಸಾಕ್ಷ್ಯ ಲಭಿಸಿರಲಿಲ್ಲ. 

ಈ ನಡುವೆ, ಬೇರೆ ಬೇರೆ ಆಯಾಮಗಳಲ್ಲಿ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ನೇತ್ರಾವತಿ ಸ್ನಾನಘಟ್ಟದ ಬಳಿ ಸಾಕಷ್ಟು ಅನಾಥ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೇನೆ ಎಂದಿರುವ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ ಅವರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ. ಮಾಧ್ಯಮ ಸಂದರ್ಶನದಲ್ಲಿ 70ಕ್ಕೂ ಹೆಚ್ಚು ಶವಗಳನ್ನು ಮರಣೋತ್ತರ ಪರೀಕ್ಷೆ ಮಾಡಿದ್ದಾಗಿ ಮಹಾಬಲ ಶೆಟ್ಟಿ ಹೇಳಿಕೊಂಡಿದ್ದರಿಂದ ಅವರಿಂದಲೇ ಮಾಹಿತಿಗಳನ್ನು ಪಡೆದಿದ್ದಾರೆ.‌

ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿಯಿಂದಲೂ ಮಾಹಿತಿ ಸಂಗ್ರಹಿಸಿದ್ದು ತಾಲೂಕು ಆಸ್ಪತ್ರೆಯಲ್ಲಿ ಆಗಿರುವ ಅನಾಥ ಶವಗಳ ಮರಣೋತ್ತರ ಪರೀಕ್ಷೆ ಕುರಿಯ ವರದಿಯನ್ನು ಕೇಳಿ ಪಡೆದಿದ್ದಾರೆ. ಬಹು ಆಯಾಮಗಳಿಂದ ಎಸ್ಐಟಿ ಅಧಿಕಾರಿಗಳು ತ‌ನಿಖೆ ಕೈಗೊಂಡಿದ್ದಾರೆ. ಇದರ ನಡುವೆಯೇ 1995ರಿಂದ 2014 ರ ವರೆಗೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿದ್ದೆ ಎಂದು ಹೇಳಿಕೊಂಡಿದ್ದ ದೂರುದಾರ ವ್ಯಕ್ತಿಯ ಬಗ್ಗೆಯೇ ಅಪಸ್ವರ ಎದ್ದಿತ್ತು. ಆತನ ಊರು ಮಂಡ್ಯದಲ್ಲಿಯೂ ಜನರು ಆತನ ಚಾರಿತ್ರ್ಯ ಮತ್ತು ನಡತೆ ಸರಿಯಾಗಿಲ್ಲ ಎಂದೂ ಹೇಳತೊಡಗಿದ್ದರು. ಮೊದಲ ಪತ್ನಿಯೂ ವ್ಯಕ್ತಿ ಹಣಕ್ಕಾಗಿ ಏನೂ ಮಾಡಿಯಾನು ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದ ಬಳಿಕ ದೂರುದಾರನನ್ನು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಆತನ ಹಿಂದೆ ಯಾರಿದ್ದರು, ಇದೆಲ್ಲವೂ ಸಂಚಿನ ಭಾಗವೇ ಎನ್ನುವ ಜಿಜ್ಞಾಸೆ ಉಂಟಾಗಿದೆ.

In a major development in the Dharmasthala case—where sensational allegations were made about multiple bodies being buried—the Special Investigation Team (SIT) has arrested the complainant, popularly known as ‘Maskman’, for providing false information.SIT officials confirmed that the accused will be produced before the Beltangady court at 11 am on Saturday, August 23. According to sources, SIT chief Pranav Mohanty personally led a marathon interrogation session of the complainant, beginning at 10 am on August 22 and continuing until 5 am on August 23. Following the intense questioning, investigators concluded that the allegations were fabricated, leading to his immediate arrest.