ಬ್ರೇಕಿಂಗ್ ನ್ಯೂಸ್
23-08-25 06:21 pm Mangaluru Correspondent ಕ್ರೈಂ
ಬೆಂಗಳೂರು, ಆ.23: ಮೆಡಿಕಲ್ ಓದುತ್ತಿದ್ದ ತನ್ನ ಮಗಳು ಧರ್ಮಸ್ಥಳಕ್ಕೆ ತೆರಳಿದ್ದವಳು 2003ರಲ್ಲಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿ, ಸಂಚಲನ ಸೃಷ್ಟಿಸಿದ್ದ ಸುಜಾತಾ ಭಟ್ ಉಲ್ಟಾ ಹೊಡೆದಿದ್ದು ತನಗೆ ಅನನ್ಯಾ ಭಟ್ ಎಂಬ ಮಗಳೇ ಇರಲಿಲ್ಲ ಎಂದು ಹೇಳಿ ಆಘಾತ ಮೂಡಿಸಿದ್ದಾರೆ. ಯೂಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಆಸ್ತಿ ವಿವಾದದ ಕಾರಣಕ್ಕಾಗಿ ಕೆಲವರ ಪ್ರಚೋದನೆಯಿಂದ ಈ ಕಟ್ಟುಕಥೆ ಸೃಷ್ಟಿಸಿದ್ದಾಗಿ ಅವರು ಹೇಳಿಕೆ ನೀಡಿದ್ದಾರೆ.
"ಅನನ್ಯಾ ಭಟ್ ನನ್ನ ಮಗಳು ಅಲ್ಲ. ಅರವಿಂದ್ -ವಿಮಲಾ ಎಂಬ ದಂಪತಿಯ ಮಗಳು. ಅವರು ನನ್ನ ಊರಿನವರೇ ಆಗಿದ್ದು ಮಂಗಳೂರಿನ ಸುರತ್ಕಲ್ ನಲ್ಲಿ ನೆಲೆಸಿದ್ದರು. ಅವರ ಮಗಳೇ ಅನನ್ಯಾ ಭಟ್. ಆಕೆಯನ್ನು ಸಾಕುವುದಕ್ಕಾಗಿ ನನಗೆ ಕೊಟ್ಟಿದ್ದರು ಎಂದು ಹೇಳಿದ್ದಾರೆ. ಉಡುಪಿ ಜಿಲ್ಲೆಯ ಪರ್ಕಳದ ಊರಿನ ನಮ್ಮ ಪೂರ್ವಜರ ಆಸ್ತಿ ಮತ್ತು ಮನೆ ದೇವರನ್ನು ಬೇರೆಯವರಿಗೆ ನೀಡಿದ್ದರು. ಇದನ್ನು ಪ್ರಶ್ನಿಸುವುದಕ್ಕಾಗಿ ಈ ನಾಟಕವನ್ನು ರೂಪಿಸಿದ್ದಾಗಿ ಅವರು ಹೇಳಿದ್ದಾರೆ.


ಈ ರೀತಿ ಕಥೆ ಕಟ್ಟುವಂತೆ ಗಿರೀಶ್ ಮಟ್ಟಣ್ಣನವರ್ ಹಾಗೂ ಜಯಂತ್ ಟಿ ಎಂಬವರು ಹೇಳಿಕೊಟ್ಟಿದ್ದರು. ನೂರಾರು ಹೆಣಗಳನ್ನು ಹೂತ ಬಗ್ಗೆ ವ್ಯಕ್ತಿಯೊಬ್ಬ ದೂರು ನೀಡಿದ್ದರಿಂದ ನಾನು ಕೂಡ ದೂರು ನೀಡಿದ್ದೆ ಎಂದು ಸುಜಾತಾ ಭಟ್ ಆರೋಪಿಸಿದ್ದಾರೆ. ನನ್ನ ಸಹಿ ಇಲ್ಲದೆ ನನ್ನ ತಾತನ ಆಸ್ತಿಯನ್ನು ಹೇಗೆ ವರ್ಗಾಯಿಸಿದರು ಎಂದು ಪ್ರಶ್ನೆ ಮಾಡಬೇಕಾಗಿತ್ತು. ಅದಕ್ಕಾಗಿ ಮಗಳ ಪಾತ್ರವನ್ನು ಸೃಷ್ಟಿಸಬೇಕಾಯಿತು. ನೀಡಿರುವ ಫೋಟೋ ಸೇರಿದಂತೆ ಎಲ್ಲವೂ ನಕಲಿ ಎಂದು ಅವರು ಒಪ್ಪಿಕೊಂಡಿದ್ದಾರೆ.
ನನ್ನ ಕುಟುಂಬದ ದೇವರನ್ನು ಬೇರೊಂದು ಸಮುದಾಯಕ್ಕೆ ನೀಡಿದ್ದು ನೋವು ಉಂಟು ಮಾಡಿತ್ತು. ಈ ವಿಚಾರ ಇಷ್ಟೊಂದು ದೊಡ್ಡದಾಗುತ್ತದೆ ಮತ್ತು ನನ್ನ ತೇಜೋವಧೆಗೆ ಕಾರಣವಾಗುತ್ತದೆ ಎಂದು ಊಹಿಸಿರಲಿಲ್ಲ. ನನ್ನಿಂದ ತಪ್ಪಾಗಿದೆ. ನಾನು ರಾಜ್ಯದ ಸಮಸ್ತ ಜನತೆಯಲ್ಲಿ ಮತ್ತು ಧರ್ಮಸ್ಥಳದ ಭಕ್ತರಲ್ಲಿ ಕ್ಷಮೆ ಕೋರುತ್ತೇನೆ. ಕೆಲವರ ಪ್ರಚೋದನೆಗೆ ಒಳಗಾಗಿ ನಾನು ಈ ತಪ್ಪು ಮಾಡಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ, ಇಲ್ಲಿಗೆ ಈ ವಿಚಾರವನ್ನು ಮುಗಿಸಿ ಎಂದು ಮನವಿ ಮಾಡಿದ್ದಾರೆ. ಈ ಹೇಳಿಕೆ ಎಲ್ಲ ಟಿವಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಸುಜಾತಾ ಭಟ್ ಮತ್ತೆ ಉಲ್ಟಾ ಹೊಡೆದಿದ್ದು ನನ್ನನ್ನು ಬಲವಂತದಿಂದ ಈ ರೀತಿ ಹೇಳಿಕೆ ನೀಡುವಂತೆ ಮಾಡಿದರು ಎಂದೂ ಹೇಳಿ ದಿನಕ್ಕೊಂದು ಸುಳ್ಳು ಹೆಣೆಯುವಂತೆ ಸುದ್ದಿಯಾಗಿದ್ದಾರೆ.
In yet another twist to the much-debated case, “Sullajji from Su” (Sujatha Bhatt) has released a statement declaring that she has no daughter and that the entire story was fabricated due to a long-standing property dispute. She alleged that Mattannanavar and Jayanth were behind the creation and circulation of the false narrative. “Please forgive me for all this confusion. I was misled, and my words were twisted in the backdrop of property rivalry,” Sujatha Bhatt said in her statement.
22-01-26 10:27 pm
Bangalore Correspondent
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
ಬಾರ್ ಲೈಸನ್ಸ್ ನೀಡಲು 1.5 ಕೋಟಿ ಲಂಚ ; 25 ಲಕ್ಷ ರೂ....
20-01-26 02:15 pm
22-01-26 10:16 pm
HK News Desk
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೇರಳ, ಕರ್ನಾಟಕ, ತಮ...
21-01-26 11:10 am
22-01-26 02:55 pm
Mangalore Correspondent
ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮ...
21-01-26 10:55 pm
ಸ್ವಚ್ಛತೆ, ತ್ಯಾಜ್ಯಮುಕ್ತ ಗ್ರಾಮ, ಪರಿಸರ ಸ್ನೇಹಿ ಆಡ...
21-01-26 06:18 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸಿಕ್ಕಿದ ಏಳು ಅಸ್ಥಿಪಂಜರಗ...
21-01-26 11:53 am
158 ವರ್ಷಗಳ ಇತಿಹಾಸವುಳ್ಳ ದೇಶದ ಮೊದಲ ಮಂಗಳೂರು ಟೈಲ್...
20-01-26 10:59 pm
22-01-26 10:12 pm
Mangalore Correspondent
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm
Actor Kicha Sudeep, Fraud: ನಟ ಕಿಚ್ಚ ಸುದೀಪ್, ಮ...
20-01-26 07:51 pm
ಸಿಎಂ ಕ್ಲಾಸ್ ಬೆನ್ನಲ್ಲೇ ಅಲರ್ಟ್ ಆದ ಬೆಂಗಳೂರು ಖಾಕಿ...
20-01-26 05:01 pm