ಬ್ರೇಕಿಂಗ್ ನ್ಯೂಸ್
02-09-25 11:22 am Mangalore Correspondent ಕ್ರೈಂ
ಮಂಗಳೂರು, ಸೆ.2 : ಫಳ್ನೀರ್ ನಲ್ಲಿ ಆಟೋ ಚಾಲಕನೊಬ್ಬ ತನ್ನ ಮೇಲೆ ತಾನೇ ಹಲ್ಲೆ ಮಾಡಿಕೊಂಡು ತಂಡವೊಂದು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾಗಿ ಸುಳ್ಳು ಸುದ್ದಿ ಹಬ್ಬಿಸಿರುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಆಗಸ್ಟ್ 31ರ ಭಾನುವಾರ ರಾತ್ರಿ ಬಶೀರ್ ಎನ್ನುವ ಹೆಸರಿನ ಆಟೋ ಚಾಲಕ ಮೂತ್ರ ಮಾಡಲೆಂದು ಫಳ್ನೀರ್ ನಲ್ಲಿ ಆಟೋ ನಿಲ್ಲಿಸಿದ್ದಾಗ ತನ್ನ ಮೇಲೆ ತಂಡವೊಂದು ಹಲ್ಲೆ ನಡೆಸಿದೆ ಎಂದು ಸುದ್ದಿ ಹಬ್ಬಿಸಿದ್ದರು. ಅಲ್ಲದೆ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದರ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ತೆರಳಿ ಆಟೋ ಚಾಲಕನ ಹೇಳಿಕೆ ಪಡೆದು ಕೇಸು ದಾಖಲಿಸಿದ್ದರು. ಬ್ಯಾರಿ ಭಾಷೆ ಮಾತನಾಡುತ್ತಿದ್ದವರು ನೀನು ಪೊಲೀಸರಿಗೆ ಮಾಹಿತಿ ನೀಡ್ತಿಯಲ್ವಾ ಎಂದು ಹೇಳಿ ಹಲ್ಲೆ ನಡೆಸಿದ್ದಾಗಿ ಬಶೀರ್ ತಿಳಿಸಿದ್ದರು. ಇದರಂತೆ, ಹಲ್ಲೆ ನಡೆಸಿದವರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದರು.
ತನಿಖೆಯ ಸಂದರ್ಭದಲ್ಲಿ ಬಶೀರ್ ಹಲ್ಲೆಯಾದ ಜಾಗವನ್ನು ತೋರಿಸುವಲ್ಲಿ ಎಡವಿದ್ದಾರೆ. ಸಿಸಿಟಿವಿಯಲ್ಲಿ ಪೊಲೀಸರು ಚೆಕ್ ಮಾಡಿದ್ದು ಸ್ಥಳದಲ್ಲಿ ಹಲ್ಲೆ ನಡೆದಿದ್ದು ಕಂಡುಬರಲಿಲ್ಲ. ಹೀಗಾಗಿ ದೂರುದಾರನನ್ನು ಮತ್ತಷ್ಟು ತನಿಖೆ ನಡೆಸಿದಾಗ ಸುಳ್ಳು ದೂರು ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಹಿಂದೆ ಪೊಲೀಸರಿಗೆ ಮಾಹಿತಿ ಕೊಟ್ಟ ವಿಚಾರದಲ್ಲಿ ಕೆಲವರು ಬೆದರಿಕೆ ಹಾಕಿದ್ದರು. ಇದರಿಂದಾಗಿ ಅವರು ದಾಳಿ ಮಾಡುತ್ತಾರೆಂಬ ಭಯ ಇದ್ದುದರಿಂದ ಅದಕ್ಕು ಮೊದಲೇ ದಾಳಿಯ ನಾಟಕ ಮಾಡಿದ್ದೇನೆ ಎಂದು ಹೇಳಿದ್ದಾನೆ.
ತಾನೇ ಹೊಟ್ಟೆಯ ಭಾಗಕ್ಕೆ ಸ್ವಲ್ಪ ತಿವಿದು ಗಾಯ ಮಾಡಿಕೊಂಡಿದ್ದು ಯಾರೋ ಹಲ್ಲೆ ನಡೆಸಿದ್ದಾರೆಂದು ಹೇಳಿದ್ದ. ಪೊಲೀಸ್ ತನಿಖೆಯಲ್ಲಿ ನೈಜ ವಿಷಯ ತಿಳಿಯುತ್ತಲೇ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸ್ಪಷ್ಟನೆ ಹಾಕಿದ್ದಾರೆ. ಸುಳ್ಳು ಭಾರೀ ವೇಗದಲ್ಲಿ ಓಡುತ್ತದೆ, ಸತ್ಯ ಕುಂಟುತ್ತಾ ಬಂದು ಎದುರು ನಿಲ್ಲುತ್ತದೆ. ಈ ವಿಚಾರದಲ್ಲು ಅದೇ ರೀತಿ ಆಗಿದೆ. ಆಟೋ ಚಾಲಕನಿಗೆ ಹಲ್ಲೆಯೆಂದು ಭಾರೀ ವೇಗದಲ್ಲಿ ಸುದ್ದಿ ಓಡಿತ್ತು. ಒಂದ್ವೇಳೆ, ಹಿಂದುಗಳು ಹಲ್ಲೆ ಮಾಡಿದ್ದಾರೆಂದು ಆತ ಹೇಳಿರುತ್ತಿದ್ದರೆ ಪರಿಸ್ಥಿತಿ ಬೇರೆಯೇ ಆಗುತ್ತಿತ್ತು. ಜಾಲತಾಣದಲ್ಲಿ ವಿಭಿನ್ನ ರೀತಿಯಲ್ಲಿ ಸುದ್ದಿ ಓಡುತ್ತಿತ್ತು. ಪೊಲೀಸರ ವಿಚಾರಣೆಯಲ್ಲಿ ಹಲ್ಲೆಯೇ ಆಗಿಲ್ಲ ಎನ್ನುವ ನೈಜ ವಿಷಯ ಗೊತ್ತಾಗಿದೆ. ಸುದ್ದಿ ಹಂಚಿಕೊಳ್ಳುವಾಗ ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ಸುಧೀರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
In a dramatic twist, police investigations have revealed that an auto driver in Falnir faked an assault on himself and spread false claims of being attacked by a group. On the night of August 31, the driver, identified as Basheer, had stopped his auto in Falnir, allegedly to relieve himself. He later told police that a group accosted and assaulted him, claiming he was passing information to the police.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm