ಬ್ರೇಕಿಂಗ್ ನ್ಯೂಸ್
02-09-25 07:09 pm Mangalore Correspondent ಕ್ರೈಂ
ಮಂಗಳೂರು, ಸೆ.2 : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಲಗೇಜ್ ಬ್ಯಾಗ್ ನಲ್ಲಿದ್ದ 5 ಲಕ್ಷ ಮೌಲ್ಯದ 56 ಗ್ರಾಂ ಚಿನ್ನವನ್ನು ಕಳವುಗೈದ ಘಟನೆ ಬೆನ್ನತ್ತಿದ ಬಜ್ಪೆ ಪೊಲೀಸರು ಏರ್ಪೋರ್ಟ್ ನಲ್ಲಿ ಲೋಡಿಂಗ್ ಕೆಲಸ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ.
ಮಹಿಳೆ ಆ.30ರಂದು ಬೆಳಗ್ಗೆ ಬೆಂಗಳೂರಿನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬಜ್ಪೆ ನಿಲ್ದಾಣಕ್ಕೆ ಬಂದಿದ್ದು ಬ್ಯಾಗೆಜ್ ಬೆಲ್ಟ್ ನಿಂದ ತಮ್ಮ ಲಗೇಜ್ ಪಡೆದು ಚೆಕ್ ಮಾಡಿದಾಗ 56 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದ್ದು, ಈ ಬಗ್ಗೆ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆಯ ವೇಳೆ ವಿಮಾನ ನಿಲ್ದಾಣದ AIR INDIA SATS ಕಂಪೆನಿಯಲ್ಲಿ ಲೋಡರ್, ಅನ್ ಲೋಡರ್ ಆಗಿ ಕೆಲಸ ಮಾಡಿಕೊಂಡಿರುವ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದು ಕಳವು ವಿಚಾರ ಬೆಳಕಿಗೆ ಬಂದಿತ್ತು.



ಕಂದಾವರ ನಿವಾಸಿ ನಿತಿನ್, ಮೂಡುಪೆರಾರದ ನಿವಾಸಿಗಳಾದ ಸದಾನಂದ, ರಾಜೇಶ್ ಮತ್ತು ಬಜಪೆ ನಿವಾಸಿ ಪ್ರವೀಣ್ ಫೆರ್ನಾಂಡಿಸ್ ಎಂಬವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಲಗೇಜ್ ನಿಂದ ಚಿನ್ನಾಭರಣ ಕಳವು ಮಾಡಿರುವುದನ್ನು ಒಪ್ಪಿದ್ದಾರೆ. ಅಲ್ಲದೆ, ಕಳವುಗೈದ ಚಿನ್ನವನ್ನು ಆರೋಪಿಗಳು ಮೂಡುಪೆರಾರದ ನಿವಾಸಿ ರವಿರಾಜ್ ಎಂಬಾತನಿಗೆ ಮಾರಿದ್ದು, ಆತನನ್ನೂ ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ 50 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಲಾಗಿದೆ. ರವಿರಾಜ್ ಎಂಬವನನ್ನು ಕಳವು ಮಾಲನ್ನು ಸ್ವೀಕರಿಸಿದ ಬಗ್ಗೆ 317(2) ಬಿ.ಎನ್.ಎಸ್ ಆರೋಪದಲ್ಲಿ ಬಂಧಿಸಲಾಗಿದೆ.
ಇವರ ವಿಚಾರಣೆಯಲ್ಲಿ ಈ ಹಿಂದೆ 2025ರ ಜನವರಿ ತಿಂಗಳಲ್ಲಿ ಇದೇ ರೀತಿ ವಿಮಾನ ಪ್ರಯಾಣಿಕ ಮನೋಹರ್ ಶೆಟ್ಟಿ ಎಂಬವರ ಬ್ಯಾಗಿನಿಂದ ಕಳವು ಮಾಡಿದ್ದ 2 ಲಕ್ಷ ರೂ. ನಗದು ಹಣವನ್ನು ಇವರಿಂದ ವಶಪಡಿಸಲಾಗಿದೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 27/2025 ಪ್ರಕರಣ ದಾಖಲಾಗಿ ತನಿಖೆ ಹಂತದಲ್ಲಿತ್ತು. ಆರೋಪಿಗಳು ಸುಮಾರು 9 ವರ್ಷಗಳಿಂದ AIR INDIA SATS ರಲ್ಲಿ ಕೆಲಸ ಮಾಡಿಕೊಂಡಿದ್ದು ಇದೇ ರೀತಿ ಪ್ರಯಾಣಿಕರ ಲಗೇಜ್ ನಿಂದ ಹಣ ಕದಿಯುತ್ತಿದ್ದರೆಂಬುದು ಪತ್ತೆಯಾಗಿದೆ. ಸದ್ರಿ ಎಲ್ಲಾ 5 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದು, ಹೆಚ್ಚಿನ ತನಿಖೆ ಬಗ್ಗೆ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ವಿಮಾನದ ಪ್ರಯಾಣಿಕರು ಬೆಲೆಬಾಳುವ ವಸ್ತುಗಳಾದ ಚಿನ್ನ, ನಗದನ್ನು ಬ್ಯಾಗೇಜ್ ನಲ್ಲಿ ಕಳುಹಿಸುವಾಗ ಸದ್ರಿ ಆರೋಪಿಗಳು ಬ್ಯಾಗ್ ತೆರೆದಿದ್ದಲ್ಲಿ ಹುಡುಕುವುದು. ಕೆಲವೊಮ್ಮೆ ಬ್ಯಾಗ್ ಲಾಕ್ ನ್ನು ಸುಲಭ ಪಾಸ್ ವಾರ್ಡ್ ಸಂಖ್ಯೆಗಳಿದ್ದಲ್ಲಿ ಪ್ರಯತ್ನಿಸಿ ಕಳವು ಮಾಡುತ್ತಿರುವುದು ಕಂಡು ಬಂದಿರುತ್ತದೆ. ಪ್ರಯಾಣಿಕರು ಈ ರೀತಿ ನಿರ್ಲಕ್ಷ್ಯತೋರದೇ, ಜಾಗ್ರತೆಯಿಂದ ಇರಬೇಕಾಗಿ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
In a major theft case at Mangaluru International Airport, Bajpe police have arrested four baggage handlers employed at the airport for allegedly stealing gold ornaments worth ₹5 lakh from a woman passenger’s luggage. During investigation, the police also recovered ₹2 lakh cash linked to an earlier theft case.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm