ಬ್ರೇಕಿಂಗ್ ನ್ಯೂಸ್
17-12-25 11:14 am Bangalore Correspondent ಕ್ರೈಂ
ಬೆಂಗಳೂರು, ಡಿ.17 : ಡಿಜಿಟಲ್ ಅರೆಸ್ಟ್ ಬಲೆಗೆ ಸಿಲುಕಿದ ಬೆಂಗಳೂರಿನ ಮಹಿಳೆಯೊಬ್ಬರು ಪೊಲೀಸರು ತಮ್ಮನ್ನು ಅರೆಸ್ಟ್ ಮಾಡುತ್ತಾರೆಂಬ ಭೀತಿಯಲ್ಲಿ ತನ್ನ ಹೆಸರಲ್ಲಿದ್ದ ಎರಡು ಫ್ಲಾಟ್ ಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಿ ಬರೋಬ್ಬರಿ 2 ಕೋಟಿ ರೂಪಾಯಿ ಹಣವನ್ನು ಸೈಬರ್ ವಂಚಕರಿಗೆ ಹಸ್ತಾಂತರಿಸಿದ ಘಟನೆ ಬೆಳಕಿಗೆ ಬಂದಿದೆ.
ಸಂತ್ರಸ್ತ ಮಹಿಳೆ ಬೆಂಗಳೂರು ನಗರದ ತಿಪ್ಪಸಂದ್ರ ಎಂಬಲ್ಲಿ ತನ್ನ 10 ವರ್ಷದ ಮಗನೊಂದಿಗೆ ವಾಸವಿದ್ದಾರೆ. ಜೂನ್ 19ರಂದು ತಾನು ಬ್ಲೂ ಡಾರ್ಟ್ ಕೊರಿಯರ್ ನಿಂದ ಕರೆ ಮಾಡುತ್ತಿದ್ದೇನೆಂದು ಹೇಳಿ ಒಬ್ಬಾತ ಕರೆ ಮಾಡಿದ್ದು, ನಿಮ್ಮ ಹೆಸರಲ್ಲಿನ ಪಾರ್ಸೆಲ್ ನಲ್ಲಿ ಡ್ರಗ್ಸ್ ಇದ್ದು, ನಿಮ್ಮ ಆಧಾರ್ ನಂಬರ್ ಇದರಲ್ಲಿ ಲಿಂಕ್ ಆಗಿದ್ದಾಗಿ ಹೇಳಿದ್ದು ಮುಂಬೈ ಪೊಲೀಸರು ನಿಮಗೆ ಕರೆ ಮಾಡಲಿದ್ದಾರೆಂದು ಹೇಳಿದ್ದ.
ಆನಂತರ, ಮುಂಬೈ ಪೊಲೀಸರು ಎಂದು ಹೇಳಿ ಮಹಿಳೆಗೆ ಕರೆ ಮಾಡಿದ್ದು, ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದೀವಿ, ಹೊರಗೆ ಹೋಗಬಾರದು, ಒಳಗಡೆಯೇ ಇರಬೇಕು, ನಾವು ಹೇಳಿದಂತೆ ಕೇಳಬೇಕು ಎಂದು ತಾಕೀತು ಮಾಡಿದ್ದಾರೆ. ನಾವು ತನಿಖೆ ಮಾಡುತ್ತಿದ್ದೇವೆ ಎಂದು ಹೇಳುತ್ತ, ನಿಮ್ಮ ಮಗನನ್ನೂ ಜೊತೆಗೆ ಅರೆಸ್ಟ್ ಮಾಡಬೇಕಾಗುತ್ತದೆ ಎಂದು ಬೆದರಿಸಿದ್ದಾರೆ. ಅವರು ಹೇಳಿದಂತೆ, ಎಲ್ಲ ಬ್ಯಾಂಕ್ ಖಾತೆಗಳ ವಿವರಗಳನ್ನೂ ಆಕೆ ವಂಚಕರಿಗೆ ನೀಡಿದ್ದು ಅವರು ಹೇಳಿದಂತೆ ಹಂತ ಹಂತವಾಗಿ ಹಣವನ್ನೂ ಹಾಕಿದ್ದಾರೆ.
ಜೂನ್ ನಿಂದ ತೊಡಗಿ ನವೆಂಬರ್ ಕೊನೆಯ ವರೆಗೂ ಒಟ್ಟು 2.05 ಕೋಟಿ ಮೊತ್ತವನ್ನು ವಂಚಕರಿಗೆ ನೀಡಿದ್ದಾರೆ. ವಿಚಿತ್ರ ಅಂದರೆ, ವಿಜ್ಞಾನ ನಗರದಲ್ಲಿದ್ದ ಫ್ಲಾಟ್ ಮತ್ತು ಮಾಲೂರಿನಲ್ಲಿದ್ದ ಜಾಗವನ್ನು ಅತಿ ಕಡಿಮೆ ದರಕ್ಕೆ ಮಾರಾಟ ಮಾಡಿ, ಅದರ ಹಣವನ್ನೂ ವಂಚಕರಿಗೆ ರವಾನಿಸಿದ್ದಾರೆ.
ಇದಲ್ಲದೆ, ಬ್ಯಾಂಕ್ ಸಾಲವನ್ನೂ ಮಾಡಿದ್ದು ಆ ಹಣವನ್ನೂ ವಂಚಕರಿಗೆ ನೀಡಿದ್ದಾರೆ. ಒಟ್ಟು 22 ಬ್ಯಾಂಕ್ ವರ್ಗಾವಣೆ ಮಾಡಿದ್ದು, ಇದರಲ್ಲಿ ಒಂದು ಬಾರಿಗೆ 70 ಲಕ್ಷ ಹಣವನ್ನು ವರ್ಗಾಯಿಸಲಾಗಿದೆ.
ಜಾಗದ ವಿಚಾರದಲ್ಲಿ ಎನ್ ಓಸಿ ಸರ್ಟಿಫಿಕೇಟ್ ನೀಡಬೇಕಿದ್ದು, ಅದನ್ನು ತರುವುದಕ್ಕಾಗಿ ಪೊಲೀಸ್ ಠಾಣೆಗೆ ಹೋಗುವಂತೆ ವಂಚಕರು ಸಲಹೆ ನೀಡಿದ್ದರು. ಇದರಂತೆ ಮಹಿಳೆ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ತೆರಳಿದಾಗ ತಾನು ಮೋಸ ಹೋಗಿರುವುದು ತಿಳಿದುಬಂದಿದೆ. ಪೊಲೀಸರು ವಂಚಕರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮೂರೇ ವರ್ಷದಲ್ಲಿ 5473 ಕೋಟಿ ವಂಚನೆ
ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಅತಿ ಹೆಚ್ಚು ಸೈಬರ್ ವಂಚನೆ ಪ್ರಕರಣ ದಾಖಲಾಗಿದ್ದು, ಸಾರ್ವನಿಕರು 5473 ಕೋಟಿ ಹಣವನ್ನು ಸೈಬರ್ ವಂಚನೆಯಲ್ಲಿ ಕಳೆದುಕೊಂಡಿದ್ದಾರೆ. 57,733 ಪ್ರಕರಣ ದಾಖಲಾಗಿದ್ದು, ಇದರಲ್ಲಿ ಪತ್ತೆಯಾಗಿದ್ದು ಕೇವಲ 11 ಪರ್ಸೆಂಟ್ ಮಾತ್ರ. ಸರಾಸರಿ ಪ್ರತಿ ದಿನ 6.05 ಕೋಟಿಯಷ್ಟು ಹಣವನ್ನು ಸೈಬರ್ ವಂಚನೆಯಲ್ಲಿ ಕಳೆದುಕೊಳ್ಳುತ್ತಿದ್ದಾರೆ. ಇದರಲ್ಲಿ ರಿಕವರಿ ಕೇವಲ 60 ಲಕ್ಷ ಮಾತ್ರ ಇದೆ. ಅದರಲ್ಲು ಪತ್ತೆ ಸಾಧ್ಯತೆ 2023ಕ್ಕೆ ಹೋಲಿಸಿದರೆ 2025ರಲ್ಲಿ ಮತ್ತಷ್ಟು ಕುಸಿತವಾಗಿದೆ. ಎರಡು ವರ್ಷಗಳ ಹಿಂದೆ 5ರಲ್ಲಿ ಒಂದು ಪತ್ತೆ ಇರುತ್ತಿದ್ದರೆ ಈಗ 16 ಪ್ರಕರಣದಲ್ಲಿ ಒಂದು ಮಾತ್ರ ಪತ್ತೆಯಾಗುತ್ತಿದೆ.
A shocking case of “digital arrest” cyber fraud has come to light in Bengaluru, where a woman sold two flats and a piece of land at throwaway prices and transferred over ₹2 crore to cyber fraudsters, fearing arrest by the police.
17-12-25 12:45 pm
Bangalore Correspondent
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
16-12-25 06:33 pm
HK News Desk
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
16-12-25 10:25 pm
Mangalore Correspondent
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm