ಬ್ರೇಕಿಂಗ್ ನ್ಯೂಸ್
22-12-25 04:00 pm Mangalore Correspondent ಕ್ರೈಂ
ಮಂಗಳೂರು, ಡಿ.22 : ನೀವು ಫೇಸ್ಬುಕ್, ಇನ್ ಸ್ಟಾ ಗ್ರಾಮ್ ತೆರೆದೊಡನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡುವ ವಿಡಿಯೋ ತೆರೆದುಕೊಳ್ಳುತ್ತದೆ. ಇವತ್ತು ಡಿಸೆಂಬರ್ 22, ಕೇಂದ್ರ ಸರಕಾರದ ಸ್ಕೀಮ್ ಇದಾಗಿದ್ದು, ನಾನೇ ಗ್ಯಾರಂಟಿ ಕೊಡುತ್ತೇನೆ. ಒಮ್ಮೆಗೆ 23 ಸಾವಿರ ಹಣ ಕಟ್ಟಿದರೆ ತಿಂಗಳಿಗೆ 20 ಲಕ್ಷ ಸಿಗುತ್ತದೆ, ನೋಂದಣಿಗೆ ಇವತ್ತೇ ಕೊನೆ ದಿನ ಎಂದು ಅವರದೇ ಇಂಗ್ಲಿಷ್ ಭಾಷೆಯಲ್ಲಿ ಹೇಳುತ್ತಾರೆ..!
ಈ ರೀತಿಯ ಜಾಹೀರಾತು ಕಳೆದೊಂದು ವರ್ಷದಿಂದಲೂ ಜಾಲತಾಣದಲ್ಲಿ ಬರ್ತಾನೇ ಇದೆ. ಈಗಂತೂ ಜಾಲತಾಣಗಳಲ್ಲಿಯೇ ಜಾಹೀರಾತು ರೂಪದಲ್ಲಿ ಅಧಿಕೃತ ಎನ್ನುವಂತೆ ವಿಡಿಯೋ ಬರ್ತಾ ಇದೆ. ದೇಶದಲ್ಲಿ ಹಲವಾರು ಕಡೆ ಜನರು ಕೇಂದ್ರ ಸಚಿವೆಯೇ ಹೇಳುತ್ತಿದ್ದಾರೆಂದು ಹಣ ಕಟ್ಟಿ ಸೈಬರ್ ವಂಚಕರ ಬಲೆಗೆ ಬಿದ್ದು ಮೋಸ ಹೋಗಿದ್ದೂ ಆಗಿದೆ. ಆದರೆ ದಿನದಿಂದ ದಿನಕ್ಕೆ ಈ ರೀತಿಯ ವಿಡಿಯೋಗಳು ಹೆಚ್ಚುತ್ತಿದ್ದು ಲಂಗು ಲಗಾಮಿಲ್ಲದಂತೆ ಜನರನ್ನು ಯಾಮಾರಿಸುತ್ತಿವೆ. ಇವತ್ತು ಡಿಸೆಂಬರ್ 22 ಎಂದೇ ಮಾತು ಆರಂಭಿಸುವ ಈ ವಿಡಿಯೋಗಳು ದಿನದಿಂದ ದಿನಕ್ಕೆ ಅಪ್ಡೇಟ್ ಆಗುತ್ತಿರುವುದು ಇದರಲ್ಲಿ ಜಾಲತಾಣ ಸಂಸ್ಥೆಗಳ ಪಾತ್ರದ ಬಗ್ಗೆಯೂ ಸಂಶಯ ಬರುವಂತಿದೆ.





ಇನ್ ಸ್ಟಾ ಗ್ರಾಮ್ ತೆರೆದೊಡನೆ ಸಚಿವೆ ನಿರ್ಮಲಾ ಸೀತಾರಾಮನ್, ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ, ವಿದೇಶಾಂಗ ಸಚಿವ ಜೈಶಂಕರ್ ಇದೇ ಮಾತು ಹೇಳುವ ಸ್ಪಾನ್ಸರ್ ವಿಡಿಯೋಗಳೇ ಮೇಲಿನಿಂದ ಮೇಲೆ ಬರುತ್ತಿವೆ. ಪ್ರತಿ ವಿಡಿಯೋದಲ್ಲೂ ಆಯಾ ದಿನದ ತಾರೀಕು ಅಂದ್ರೆ, ಇವತ್ತು ಡಿಸೆಂಬರ್ 22 ಎಂದೇ ಮಾತು ಆರಂಭಿಸುತ್ತಿದ್ದು, ನೀವು 23 ಸಾವಿರ ಕಟ್ಟಿದರೆ ಇವತ್ತು ಸಂಜೆಯೇ 60 ಸಾವಿರ ನಿಮ್ಮ ಖಾತೆಗೆ ಬೀಳುತ್ತದೆ. ವಾರದಲ್ಲಿ 5 ಲಕ್ಷ ಅಮೌಂಟ್ ನಿಮ್ಮ ಖಾತೆ ಸೇರುತ್ತದೆ. ಒಂದು ತಿಂಗಳಲ್ಲಿ ಖಚಿತವಾಗಿ 20 ಲಕ್ಷ ಹಣ ನಿಮ್ಮ ಖಾತೆ ಸೇರುತ್ತದೆ. ನೀವು ಯಾವುದೇ ದುಡಿಮೆ ಮಾಡುವುದೇ ಬೇಡ. ಇದನ್ನು ಕೇಂದ್ರ ಸರ್ಕಾರವೇ ಖಾತರಿ ಮಾಡುತ್ತದೆ. ಇದು ಯಾವುದೇ ಸ್ಕ್ಯಾಮ್ ಅಲ್ಲ.. ಸುಳ್ಳು ಹೇಳುವ ಲಕ್ಕಿ ಸ್ಕೀಮ್ ಅಲ್ಲ. ನಾವು ಇದಕ್ಕೆ ಗ್ಯಾರಂಟಿ ಕೊಡುತ್ತೇವೆ, ನಾನು ಎರಡು ತಿಂಗಳು ಹಿಂದೆ ಹಾಕಿದ್ದ 24 ಸಾವಿರ ಹಣ ಈಗ 44 ಲಕ್ಷ ಆಗಿದೆ ಎಂದು ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೇಳುತ್ತಿರುವ ವಿಡಿಯೋಗಳಿವೆ. ಮತ್ತೆ ಮತ್ತೆ ನೋಡಿದರೂ ಇದು ಅವರು ಹೇಳುತ್ತಿರುವ ಮಾತುಗಳಲ್ಲ, ಅವರ ವಾಯ್ಸ್ ಅಲ್ಲ ಅಂತ ನಿರಾಕರಿಸುವುದಕ್ಕೇ ಆಗಲ್ಲ.
ಮುಖದ ಹಾವಭಾವ, ತುಟಿಗಳ ಚಲನೆ, ವಾಯ್ಸ್ ಎಲ್ಲವೂ ಅವರದ್ದೇ ಧಾಟಿಯಲ್ಲಿದ್ದು ಜನಸಾಮಾನ್ಯರನ್ನು ವಂಚಿಸುವುದಕ್ಕಾಗಿಯೇ ಎಐ ತಂತ್ರಜ್ಞಾನ ಮೂಲಕ ಈ ವಿಡಿಯೋ ಮಾಡಲಾಗಿದೆ. ಇದನ್ನು ಸೈಬರ್ ವಂಚಕರು ವಿದೇಶಿಗರ ಹೆಸರಲ್ಲಿ ಸ್ಪಾನ್ಸರ್ ವಿಡಿಯೋ ಎಂದು ಇನ್ ಸ್ಟಾ ಗ್ರಾಮ್ ಮತ್ತು ಫೇಸ್ಬುಕ್ ಪೇಜ್ ಗಳಲ್ಲಿ ಹಾಕುತ್ತಿದ್ದು, ಜನರನ್ನು ಹಣ ಕಟ್ಟುವಂತೆ ಪ್ರೇರಣೆ ನೀಡುತ್ತಿದ್ದಾರೆ. ಮಂಗಳೂರು, ಬೆಂಗಳೂರು ಮಾತ್ರ ಅಲ್ಲ, ಇಡೀ ದೇಶದಲ್ಲಿ ಅತಿ ಹೆಚ್ಚು ಜನರು ವೀಕ್ಷಿಸುವ ಈ ಜಾಲತಾಣಗಳ ಮೂಲಕ ಸೈಬರ್ ವಂಚಕರು ನೇರವಾಗಿಯೇ ಖ್ಯಾತನಾಮರ ಹೆಸರಲ್ಲಿ ವಿಡಿಯೋಗಳನ್ನು ಹಾಕಿ ಯಾಮಾರಿಸುತ್ತಿದ್ದಾರೆ.
ದೇಶದಲ್ಲಿ ಇಷ್ಟೆಲ್ಲ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದರೂ, ನೇರಾನೇರ ದೇಶದ ಹಣಕಾಸು ಸಚಿವರದ್ದೇ ಹೆಸರಿನಲ್ಲಿ ವಿಡಿಯೋಗಳನ್ನು ಹಾಕುತ್ತಿದ್ದಾರಂದ್ರೆ ನಮ್ಮ ತನಿಖಾ ಸಂಸ್ಥೆಗಳು ಏನು ಮಾಡುತ್ತಿವೆ. ಜಾಲತಾಣಗಳ ಮೇಲಿನ ನಿಯಂತ್ರಣ ಕೇಂದ್ರ ಸರ್ಕಾರದ ಅಡಿಯಲ್ಲೇ ಬರುತ್ತಿದ್ದರೂ, ಈ ರೀತಿಯ ಮೋಸಗಳು ನಡೆಯುತ್ತಿದ್ದರೂ ಯಾಕೆ ಮೂಕ ಪ್ರೇಕ್ಷಕರಾಗಿ ಕುಳಿತಿವೆ ಎನ್ನುವ ಪ್ರಶ್ನೆ ಕೇಳಬೇಕಾಗಿದೆ. ಪ್ರಜ್ಞಾವಂತ ಜನರು ಇಂಥ ವಿಡಿಯೋಗಳನ್ನು ನೋಡಿ ಇದು ಸೈಬರ್ ಕಳ್ಳರದ್ದು ಅಂತ ಬಿಟ್ಟರೂ, ಸಾವಿರದಲ್ಲಿ ಒಬ್ಬರಾದ್ರೂ ಇದರ ಹಿಂದೆ ಬಿದ್ದು ಹಣ ಹಾಕಿದರೆ ವಂಚಕ ಕುಳಿತಲ್ಲೇ ಹಣ ಎಣಿಸುತ್ತಾನಲ್ಲ, ಜಾಲತಾಣಗಳು ಕೋಟ್ಯಂತರ ಜನರಿಗೆ ತಲುಪುತ್ತಿದ್ದು, ಇಂಗ್ಲಿಷ್ ಭಾಷೆಯಲ್ಲೇ ವ್ಯವಹರಿಸುವುದರಿಂದ ಹೆಚ್ಚಿನ ಜನರಿಗೂ ರೀಚ್ ಆಗುತ್ತಿವೆ. ದಿನದಲ್ಲಿ ಏನಿಲ್ಲಾಂದ್ರೂ ಒಂದು ಸಾವಿರ ಜನ ಹಣ ಹಾಕಿದ್ರೂ ಆತ ಕೆಲವಾರು ಲಕ್ಷಗಳನ್ನು ಗಳಿಸುತ್ತಾನೆ.
ಮೊನ್ನೆ ಬೆಳಗಾವಿ ಅಧಿವೇಶನದಲ್ಲಿ ಗೃಹ ಸಚಿವರೇ ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಸೈಬರ್ ವಂಚನೆಯಡಿ 5 ಸಾವಿರ ಕೋಟಿಗೂ ಹೆಚ್ಚು ಮೊತ್ತ ವಂಚನೆಯಾಗಿದೆ ಎಂದು ಹೇಳಿಕೆ ನೀಡಿದ್ದರು. ಇದರಲ್ಲಿ ಪತ್ತೆಯಾಗಿದ್ದು ಎರಡು ಶೇಕಡವೂ ಇಲ್ಲ ಎನ್ನುವುದನ್ನೂ ಹೇಳಿದ್ದರು. ಹಾಗಾದ್ರೆ, ಇಡೀ ದೇಶದಲ್ಲಿ ಇಂಥ ಮೋಸಗಳಿಗೆ ಎಷ್ಟು ಲಕ್ಷ ಕೋಟಿ ಬಿಕರಿಯಾಗಿರಲಿಕ್ಕಿಲ್ಲ.. ಜಾಲತಾಣಗಳ ಮೇಲೆ ಕಣ್ಣಿಡಬೇಕಾದ ಸಂಸ್ಥೆಗಳು ಇದನ್ನು ನೋಡಿಯೂ ಕಣ್ಮುಚ್ಚಿಕೊಂಡಿರುವುದಕ್ಕೂ, ಲಕ್ಷ ಕೋಟಿ ವ್ಯವಹಾರಕ್ಕೂ ನಂಟಿದೆಯಾ ಎನ್ನುವ ಪ್ರಶ್ನೆ ಮೂಡುವಂತಾಗಿದೆ.
A dangerous wave of AI-generated scam videos featuring Union Finance Minister Nirmala Sitharaman, author Sudha Murty, and External Affairs Minister S. Jaishankar is sweeping across Facebook and Instagram. The videos, appearing as sponsored ads, falsely claim that the Central Government guarantees massive monthly returns in exchange for a one-time payment of ₹23,000–₹24,000.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
22-12-25 12:26 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕಕ್ಕೆ ಎರಡನೇ ದಿನವೂ ಪೊಲೀಸ್ ದ...
21-12-25 11:04 pm
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
22-12-25 04:00 pm
Mangalore Correspondent
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm