ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ; ಕೋಮು ದ್ವೇಷದ ಕೊಲೆಯಲ್ಲ ಎಂದ ಯೂನಸ್ ಸರ್ಕಾರ, ಹಫ್ತಾ ವಸೂಲಿ ವೇಳೆ ಹೊಡೆದು ಸಾಯಿಸಿದ ಶಂಕೆ 

26-12-25 03:31 pm       HK News Desk   ಕ್ರೈಂ

ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಹಿಂಸೆ ಮುಂದುವರಿದಿದ್ದು ಉದ್ರಿಕ್ತರ ಗುಂಪೊಂದು ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಟ್ (26) ಎಂಬಾತನನ್ನು ಹಾಡಹಗಲೇ ಹೊಡೆದು ಸಾಯಿಸಿದೆ. 

ಢಾಕಾ, ಡಿ.26 : ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಹಿಂಸೆ ಮುಂದುವರಿದಿದ್ದು ಉದ್ರಿಕ್ತರ ಗುಂಪೊಂದು ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಟ್ (26) ಎಂಬಾತನನ್ನು ಹಾಡಹಗಲೇ ಹೊಡೆದು ಸಾಯಿಸಿದೆ. 

ರಾಜ್ ಬರಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು 29 ವರ್ಷದ ಅಮೃತ್‌ ಮಂಡಲ್ ನನ್ನು ಮುಸ್ಲಿಮರ ಗುಂಪು ಹೊಡೆದು ಹಾಕಿ ವಿಕೃತಿ ಮೆರೆದಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಅಮೃತ್ ಮಂಡಲ್ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಪೊಲೀಸರ ವಾಂಟೆಡ್ ಲಿಸ್ಟ್ ನಲ್ಲಿದ್ದ‌. ಅಮೃತ್ ಮಂಡಲ್ ಹಫ್ತಾ ವಸೂಲಿಗೆ ತೆರಳಿದ್ದ ಸಂದರ್ಭದಲ್ಲಿ ಸ್ಥಳೀಯರು ಗುಂಪು ಸೇರಿ ಥಳಿಸಿದ್ದಾರೆ. ನಂತರ ಹಿಂಸೆ ನೀಡಿ ಜೀವ ತೆಗೆದಿದ್ದಾರೆ. 

ಪೊಲೀಸರ ಪ್ರಕಾರ, ಅಮೃತ್ ಮಂಡಲ್ "ಸಾಮ್ರಾಟ್ ವಾಹಿನಿ" ಎಂಬ ಹೆಸರಿನಲ್ಲಿ ಸ್ಥಳೀಯವಾಗಿ ಗ್ಯಾಂಗ್‌ ಕಟ್ಟಿಕೊಂಡಿದ್ದ. ಇದರ ಭಾಗವಾಗಿ ಸ್ಥಳೀಯರ ಮನೆಗಳಿಗೆ ಹೋಗಿ ಕಲೆಕ್ಷನ್ ಮಾಡುತ್ತಿದ್ದ. ಶಹೀದುಲ್ ಇಸ್ಲಾಂ ಎಂಬವರ ಮನೆಗೆ ತನ್ನ ತಂಡದೊಂದಿಗೆ ಎಂದಿನ ವಸೂಲಿಗೆ ಬಂದಿದ್ದ. ಈ ವೇಳೆ, ಸ್ಥಳೀಯರು ಒಟ್ಟು ಸೇರಿ ಪ್ರತಿ ದಾಳಿ ನಡೆಸಿ ಹೊಡೆದು ಹಾಕಿದ್ದಾರೆ. ಆತನ ಸಹಚರರು ಸ್ಥಳದಿಂದ ಓಡಿ ಪರಾರಿಯಾಗಿದ್ದರೆ, ಸೆಲೀಂ ಎಂಬ ಒಬ್ಬನನ್ನು ವಿದೇಶಿ ಪಿಸ್ತೂಲ್ ಸಹಿತ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. 

ಹೀಗಾಗಿ ಅಮೃತ್ ಮಂಡಲ್ ಕೊಲೆ ಕೋಮು‌ ದ್ವೇಷದಿಂದ ಆಗಿರುವುದಲ್ಲ. ಆತನ ಮೇಲೆ ಕೊಲೆ, ಸುಲಿಗೆ ಸೇರಿ ಹಲವಾರು ಕೇಸುಗಳಿದ್ದವು. ಡಕಾಯಿತಿ ವೇಳೆ ಕೊಲೆಯಾಗಿದ್ದಾನೆ, ಈ ಕೃತ್ಯವನ್ನು ಕೋಮು ದ್ವೇಷದ ಕೊಲೆಯೆಂದು ಬಿಂಬಿಸಬೇಡಿ ಎಂದು ಹಂಗಾಮಿ ಸರ್ಕಾರದ ನಾಯಕ ಮಹಮ್ಮದ್ ಯೂನುಸ್ ಹೇಳಿದ್ದಾರೆ. ಆದಾಗ್ಯೂ ಈ ರೀತಿಯ ಕೊಲೆಯನ್ನು ಅವರು ಖಂಡಿಸಿದ್ದು ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. 

ಇದರ ನಡುವೆಯೇ ಚಿತ್ತಗಾಂಗ್ ಬಳಿಯ ರಯೋಜನ್ ಪ್ರದೇಶದಲ್ಲಿ ಹಿಂದೂ ಕುಟುಂಬದ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಐದು ದಿನಗಳಲ್ಲಿ ರಯೋಜನ್ ಪ್ರದೇಶದಲ್ಲಿ ಏಳು ಹಿಂದೂ ಕುಟುಂಬಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸರು ಇಲ್ಲಿಯವರೆಗೆ ಐವರು ಶಂಕಿತರನ್ನು ಬಂಧಿಸಿದ್ದಾರೆ.

ಕಳೆದ ವಾರ ಮೈಮೆನ್ಸಿಂಗ್ ನಗರದಲ್ಲಿ 28 ವರ್ಷದ ಹಿಂದು ಯುವಕ ದೀಪು ಚಂದ್ರ ದಾಸ್ ನನ್ನು ನಡು ರಸ್ತೆಯಲ್ಲೇ ಹೊಡೆದು ಸಾಯಿಸಲಾಗಿತ್ತು.‌ ಇದರ ಬೆನ್ನಲ್ಲೇ ಬಾಂಗ್ಲಾ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.‌ ಭಾರೀ ಪ್ರತಿಭಟನೆಗಳಿಗೂ ಕಾರಣವಾಗಿತ್ತು. ಘಟನೆ ಸಂಬಂಧಿಸಿ ಪೊಲೀಸರು 12 ಜನರನ್ನು ಬಂಧಿಸಿದ್ದಾರೆ.

Tension continues to rise in Bangladesh as another Hindu youth, Amrit Mandal alias Samrat (26), was brutally beaten to death in Rajbari district. Though the incident sparked allegations of a communal attack, the interim government led by Muhammad Yunus has clarified that the killing was not communal, but linked to criminal activities and extortion.