Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತರಿಸಿಕೊಂಡು ಮಾರಾಟ ; ಬಜಪೆಯಲ್ಲಿ ಇಬ್ಬರ ಸೆರೆ 

04-01-26 06:15 pm       Mangalore Correspondent   ಕ್ರೈಂ

ಮಾದಕ ವಸ್ತು ಗಾಂಜಾವನ್ನು ಬಿಹಾರ ರಾಜ್ಯದಿಂದ ರೈಲು ಮೂಲಕ ಮಂಗಳೂರಿಗೆ ತಂದು ಮಾರಾಟ ಮಾಡಲು ಯತ್ನಿಸಿದ ಅಂತಾರಾಜ್ಯ ಆರೋಪಿತರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಜ.4: ಮಾದಕ ವಸ್ತು ಗಾಂಜಾವನ್ನು ಬಿಹಾರ ರಾಜ್ಯದಿಂದ ರೈಲು ಮೂಲಕ ಮಂಗಳೂರಿಗೆ ತಂದು ಮಾರಾಟ ಮಾಡಲು ಯತ್ನಿಸಿದ ಅಂತಾರಾಜ್ಯ ಆರೋಪಿತರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. 

ಜ.3ರಂದು ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಶಾಂತಿಗುಡ್ಡೆ ಕ್ರಾಸ್ ಬಳಿ ರಸ್ತೆ ಬದಿಯಲ್ಲಿ ಸುಮಾರು 1 Kg ತೂಕದ ಮಾದಕ ವಸ್ತು ಗಾಂಜಾವನ್ನು ಇರಿಸಿಕೊಂಡು ಅಕ್ರಮವಾಗಿ ಮಾರಾಟ ಮಾಡಲೆತ್ನಿಸಿದ ಬಿಹಾರ ಮೂಲದ ಹಾಲಿ ಕೃಷ್ಣಾಪುರ ಕಾಟಿಪಳ್ಳದಲ್ಲಿ ವಾಸವಿದ್ದ ಸುನಿಲ್ ಕುಮಾರ್ (40) ಮತ್ತು ಬ್ರಿಜೇಶ್ ಶ್ರೀವಾಸ್ತವ (42) ಎಂಬವರನ್ನು ಖಚಿತ ಮಾಹಿತಿ ಮೇರೆಗೆ ಬಜಪೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. 

ಆರೋಪಿತರಿಂದ ಸುಮಾರು 1 ಕೆ.ಜಿ ಮಾದಕ ವಸ್ತು ಗಾಂಜಾ ಸ್ವಾಧೀನಪಡಿಸಿದ್ದಾರೆ. ಆರೋಪಿತರನ್ನು ವಿಚಾರಣೆ ನಡೆಸಿದಾಗ ಗಾಂಜಾವನ್ನು ಬಿಹಾರ ರಾಜ್ಯದಲ್ಲಿ ಖರೀದಿಸಿ ರೈಲಿನಲ್ಲಿ ಮಂಗಳೂರಿಗೆ ತಂದು ಉತ್ತರ ಭಾರತದ ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಜಪೆ ಪೊಲೀಸರು ಮೊ.ನಂ 08-2026 ಕಲಂ (c), 20(b)(ii)(a) NDPS ಏಕ್ಟ್ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿರುತ್ತಾರೆ.

Bajpe Police have arrested two inter-state drug peddlers who allegedly brought ganja from Bihar to Mangaluru by train and attempted to sell it locally.