ಬ್ರೇಕಿಂಗ್ ನ್ಯೂಸ್
17-02-26 03:03 pm HK News Desk ಕ್ರೈಂ
ಇಂದೋರ್, ಫೆ.17 : ಮಧ್ಯಪ್ರದೇಶದ ಇಂದೋರ್ ನಗರದ ದ್ವಾರಕಾಪುರಿ ಪ್ರದೇಶದಲ್ಲಿ ಎಂಬಿಎ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಪ್ರಿಯಕರನೇ ಹತ್ಯೆಗೈದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆಘಾತಕಾರಿ ಮಾಹಿತಿಗಳನ್ನು ಹೊರಗೆಡವಿದ್ದಾರೆ.
ಆರೋಪಿ ಪಿಯೂಷ್ ಧಮ್ನೋಟಿಯಾ, ಯುವತಿಯನ್ನು ಭೀಕರ ಹತ್ಯೆಗೈದ ಬಳಿಕ ಮಹಾರಾಷ್ಟ್ರದ ಪನ್ವೆಲ್ ತೆರಳಿದ್ದು ಅಲ್ಲಿನ ಏಕಾಂತ ಪ್ರದೇಶದಲ್ಲಿ ಅಗರಬತ್ತಿ ಹಚ್ಚಿ, ಯೂಟ್ಯೂಬ್ ನೋಡಿ ಆಕೆಯ ಆತ್ಮದ ಜೊತೆ ಮಾತನಾಡಲು ಯತ್ನಿಸಿದ್ದಾನೆ. “ಆತ್ಮವನ್ನು ಹೇಗೆ ಕರೆದುಕೊಳ್ಳಬೇಕು” ಎಂಬ ವಿಡಿಯೋಗಳನ್ನು ನೋಡಿ ಮೃತ ಯುವತಿಯ ಆತ್ಮದಲ್ಲಿ ಕ್ಷಮೆ ಯಾಚಿಸಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದ ಯುವತಿ ಫೆಬ್ರವರಿ 10ರಂದು ನಾಪತ್ತೆಯಾಗಿದ್ದಳು. ಅಂದು ಸಂಜೆ ತಾನು ಗೆಳತಿಯ ಬರ್ತ್ ಡೇ ಪಾರ್ಟಿಗೆ ಪಿಯೂಷ್ ಜೊತೆಗೆ ಹೋಗುತ್ತಿದ್ದು ರಾತ್ರಿ 11 ಗಂಟೆ ಮನೆಗೆ ಬರುತ್ತೇನೆ ಎಂದು ತಂಗಿಗೆ ಕರೆ ಮಾಡಿ ತಿಳಿಸಿದ್ದಳು. ಆದರೆ ರಾತ್ರಿ 11 ಗಂಟೆಗೆ ತಂಗಿ ನಂಬರಿಗೆ, ಪಪ್ಪಾನಿಗೆ ಹೇಳು, ಆಕೆ ಇನ್ನು ಮರಳಿ ಮನೆಗೆ ಬರುವುದಿಲ್ಲ ಅಂತ ಮೆಸೇಜ್ ಬಂದಿತ್ತು. ಇದರ ಬೆನ್ನಲ್ಲೇ ಫೋನ್ ಸ್ವಿಚ್ ಆಫ್ ಆಗಿದ್ದು ಮರುದಿನವೂ ಬರದೇ ಇದ್ದ ಕಾರಣ ಹೆತ್ತವರು ನಾಪತ್ತೆ ದೂರು ನೀಡಿದ್ದರು. ಯುವತಿ ಪ್ರಿಯಕರ ಪಿಯೂಷ್ ಆಕೆಯನ್ನು ಬ್ಲಾಕ್ಮೇಲ್ ಮಾಡುತ್ತಿದ್ದ ವಿಚಾರವನ್ನೂ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಕಾಲೇಜಿನಲ್ಲಿ ಚೆಕ್ ಮಾಡಿದಾಗ, ಅವರಿಬ್ಬರ ಸೆಕ್ಸ್ ವಿಡಿಯೋಗಳು ಕಾಲೇಜು ಗ್ರೂಪ್ ಗಳಲ್ಲಿ ಷೇರ್ ಆಗಿರುವುದು ಪತ್ತೆಯಾಗಿತ್ತು.

ಪೊಲೀಸರು ಪಿಯೂಷ್ ನೆಲೆಸಿದ್ದ ಮನೆಯ ಹೊರಗಿದ್ದ ಸಿಸಿಟಿವಿ ಚೆಕ್ ಮಾಡಿದಾಗ, ಫೆ.11 ರಂದು ಆತ ಮತ್ತು ಯುವತಿ ಜೊತೆಯಾಗಿ ಬಂದಿರುವುದು ಮತ್ತು ಸುಮಾರು ಎರಡೂವರೆ ಗಂಟೆ ಬಳಿಕ ಆತನೊಬ್ಬನೇ ಹೊರಗೆ ತೆರಳಿದ್ದು ಪತ್ತೆಯಾಗಿತ್ತು. ಆದರೆ ಪಿಯೂಷ್ ಕೂಡ ನಾಪತ್ತೆಯಾಗಿದ್ದ. ಪೊಲೀಸರು ಯುವಕನ ಬೆನ್ನು ಬಿದ್ದು ತನಿಖೆ ನಡೆಸಿದಾಗ ಮಹಾರಾಷ್ಟ್ರದ ಪನ್ವೆಲ್ ನಲ್ಲಿರುವುದು ತಿಳಿದುಬಂದಿತ್ತು. ಅದರಂತೆ, ಅಲ್ಲಿ ತೆರಳಿದ ಇಂದೋರ್ ಪೊಲೀಸರು ಯುವಕನನ್ನು ಅರೆಸ್ಟ್ ಮಾಡಿ ತನಿಖೆ ನಡೆಸಿದ್ದಾರೆ.
ಪೊಲೀಸರ ತನಿಖೆಯ ಪ್ರಕಾರ, ಆರೋಪಿ ವಿದ್ಯಾರ್ಥಿನಿಯನ್ನು ತನ್ನ ಕೊಠಡಿಗೆ ಕರೆಸಿಕೊಂಡು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ತನಗೆ ಹುಷಾರಿಲ್ಲ ಅಂತ ಹೇಳಿ ನಿರಾಕರಿಸಿದ್ದು, ಬಳಿಕ ಬಲವಂತವಾಗಿ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಈ ವೇಳೆ, ಗಿಫ್ಟ್ ಕೊಡುತ್ತೇನೆ, ಕಣ್ಣು ಮುಚ್ಚಿಕೊಳ್ಳುವಂತೆ ಹೇಳಿ ಆಕೆಯ ಕೈ ಕಾಲುಗಳನ್ನು ಕಟ್ಟಿದ್ದಾನೆ. ಕಣ್ಣಿಗೆ ಬಟ್ಟೆ ಕಟ್ಟಿದ್ದಕ್ಕೆ ಆಕೆ ವಿರೋಧಿಸಿದಾಗ ಬಾಯಿಗೆ ಬಟ್ಟೆ ತುರುಕಿ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಯುವತಿ ಮೃತಪಟ್ಟ ಬಳಿಕವೂ ಆಕೆಯ ಎದೆಯಲ್ಲಿ ಕುಳಿತು ಎದೆಗೆ ಭಾಗಕ್ಕೆ ಚಾಕುವಿನಿಂದ ತಿವಿದು ಹಿಂಸಾತ್ಮಕವಾಗಿ ದಾಳಿ ನಡೆಸಿದ್ದಾನೆ. ಹತ್ಯೆಯ ನಂತರ ಆರೋಪಿ ಹೊರಗಿನಿಂದ ಬಿಯರ್ ತಂದು ಮೃತದೇಹದ ಪಕ್ಕದಲ್ಲೇ ಕುಳಿತು ಕುಡಿದಿದ್ದಾನೆ. ವಿಚಾರಣೆಯಲ್ಲಿ ಶವದ ಮೇಲೆಯೂ ಲೈಂಗಿಕ ದೌರ್ಜನ್ಯ ನಡೆಸಿದ್ದನ್ನೂ ತಿಳಿಸಿದ್ದಾನೆ. ಬಳಿಕ ಬಟ್ಟೆ ಬದಲಿಸಿ ಯುವತಿಯನ್ನು ನಗ್ನ ಸ್ಥಿತಿಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಆತನ ಮನೆಯನ್ನು ಪರಿಶೀಲಿಸಿದಾಗ, ಯುವತಿ ನಗ್ನವಾಗಿ ಕೊಲೆಯಾಗಿ ಬಿದ್ದಿರುವುದು ಪತ್ತೆಯಾಗಿತ್ತು.
ತನಿಖೆಯಲ್ಲಿ ಇಬ್ಬರ ಅಶ್ಲೀಲ ವಿಡಿಯೋಗಳನ್ನು ಕಾಲೇಜು ಗ್ರೂಪ್ ಹಾಗೂ ವಾಟ್ಸಪ್ ಸ್ಟೇಟಸ್‌ಗೆ ಅಪ್‌ಲೋಡ್ ಮಾಡಿರುವುದು ಪತ್ತೆಯಾಗಿದೆ. ವಿಚಾರಣೆ ವೇಳೆ, ಆಕೆಯನಗಯ ಮದುವೆಯಾಗಲು ಬಯಸಿದ್ದೆ, ಆದರೆ ಯುವತಿ ತನ್ನಿಂದ ದೂರವಾಗುತ್ತಿದ್ದಳು. ಬೇರೆ ಮದುವೆ ಆಗುತ್ತಾಳೆ ಎಂಬ ಅನುಮಾನದಿಂದ ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾನೆ. ಬಳಿಕ ಸಾಕ್ಷ್ಯ ನಾಶಪಡಿಸಲು ಮೊಬೈಲ್ ಒಡೆದು ಮುಂಬೈ ಕಡೆ ಪರಾರಿಯಾಗಿ ಮೆಟ್ರೋ ನಿಲ್ದಾಣಗಳಲ್ಲಿ ಅಲೆದಾಡಿದ್ದಾಗಿ ತಿಳಿಸಿದ್ದಾನೆ. ಕೊಲೆ ಮಾಡಿದ ಬಳಿಕ ಆರೋಪಿಗೆ ಮಾನಸಿಕ ಅಶಾಂತಿ ಉಂಟಾಗಿ ಯುವತಿಯ ಆತ್ಮದ ಜೊತೆ ಮಾತನಾಡಲು ಪ್ರಯತ್ನಿಸಿದ್ದ ಎಂದು ಇಂದೋರ್ ಡಿಸಿಪಿ ಕೃಷ್ಣಲಾಲ್ ಚಾಂದಿನಿ ಹೇಳಿದ್ದಾರೆ.
In a horrifying case from the Dwarkapuri area of Indore, police have uncovered chilling details in the murder of a second-year MBA student allegedly killed by her boyfriend.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm