ಬ್ರೇಕಿಂಗ್ ನ್ಯೂಸ್
27-03-26 08:37 pm HK News Staffer ಕ್ರೈಂ
ಬೆಂಗಳೂರು, ಮಾ.27 : ಇತ್ತೀಚೆಗೆ ಸಾರ್ವಜನಿಕರು ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ನೀಡುತ್ತಿರುವುದು ನೋಡಿದ್ದೇವೆ. ಆದರೆ ನಗರದ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಭಿನ್ನ ಘಟನೆಯೊಂದು ನಡೆದಿದೆ. ಇನ್‌ಸ್ಪೆಕ್ಟರ್ ರವಿ ಅವರ ಭ್ರಷ್ಟಾಚಾರವನ್ನು ತಾಳಲಾರದೆ, ಠಾಣೆಯ ಸಿಬ್ಬಂದಿಯೇ ನೇರವಾಗಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಇನ್‌ಸ್ಪೆಕ್ಟರ್ ರವಿ ಕಳೆದ ಎರಡೂವರೆ ವರ್ಷಗಳಲ್ಲಿ ಸುಮಾರು 15 ಕೋಟಿ ರೂಪಾಯಿಗೂ ಹೆಚ್ಚು ಲಂಚ ಪಡೆದಿದ್ದು, ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರತಿ FIR ಗೂ 25 ಸಾವಿರ ‘ರೇಟ್ ಫಿಕ್ಸ್’ !
ಸಿಬ್ಬಂದಿ ಆರೋಪದ ಪ್ರಕಾರ, ಪುಟ್ಟೇನಹಳ್ಳಿ ಠಾಣೆಯಲ್ಲಿ ಕಾನೂನು ಪಾಲನೆಗಿಂತ ಹೆಚ್ಚಾಗಿ ಹಣ ವಸೂಲಿಗೆ ಆದ್ಯತೆ ನೀಡಲಾಗುತ್ತಿದೆಯಂತೆ. ಯಾವುದೇ ಎಫ್ಐಆರ್ ದಾಖಲಿಸಬೇಕಾದರೆ ಇನ್‌ಸ್ಪೆಕ್ಟರ್ ರವಿಗೆ ಕನಿಷ್ಠ 25 ಸಾವಿರ ರೂ. ಲಂಚ ನೀಡಲೇಬೇಕು. ಹಣ ನೀಡಿ ಪ್ರಕರಣ ದಾಖಲಿಸದಂತೆ ಒತ್ತಡವನ್ನೂ ಹಾಕಲಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಡಿಸಿಎಂ ಹೆಸರು ದರ್ಬಳಕೆ:
ಕಳೆದ ಎರಡು ವರ್ಷಗಳಿಂದ ಇನ್‌ಸ್ಪೆಕ್ಟರ್ ಹೆಚ್.ಕೆ. ರವಿಕುಮಾರ್ ಪುಟ್ಟೇನಹಳ್ಳಿ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಪೊಲೀಸ್ ಸ್ಟೇಷನ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಸ್ಟೇಷನ್ ಇನ್ಸಪೆಕ್ಟರ್ ನವೀನ್ ಅವರನ್ನು ಪುಟ್ಟೇನ ಹಳ್ಳಿ ಠಾಣೆಗೆ ವರ್ಗಾವಣೆ ಮಾಡಿಕೊಳ್ಳಲು ಇಬ್ಬರು ಸೇರಿಕೊಂಡು ಈಗಾಗಲೆ DCM ಅವರಿಗೆ 1 ಕೋಟಿ ಹಣ ಕೊಟ್ಟಿದಾರಂತೆ. ಇನ್ನೂ ಹಣ ಹೊಂದಿಸಬೇಕು ಎಂದು ಸಿಬ್ಬಂದಿಗೆ ಹೇಳುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವರ್ಗಾವಣೆ ದಂಧೆ, ವಸೂಲಿ:
ಇನ್‌ಸ್ಪೆಕ್ಟರ್ ಮತ್ತು ಪಿಎಸ್ಐ ಸಹ, ಚಿಕ್ಕ ಟೀ ಸ್ಟಾಲ್‌ಗಳಿಂದ ಹಿಡಿದು ದೊಡ್ಡ ಬಾರ್, ಪಬ್‌ಗಳ ವರೆಗೂ ವಸೂಲಿ ಮಾಡುತ್ತಿದ್ದರು. ಕೆಲವು ಪ್ರಕರಣಗಳಲ್ಲಿ ರೌಡಿಶೀಟರ್ ಹೆಸರನ್ನು ಪಟ್ಟಿಯಿಂದ ತೆಗೆಯಲು ಲಕ್ಷಾಂತರ ರೂ. ಮುಂಗಡ ಪಡೆಯುವ ಕೆಲಸ ನಡೆಸುತ್ತಿದ್ದಾರೆ. ಉದಾಹರಣೆಗೆ ಲೇಡಿ ರೌಡಿಶೀಟರ್ ಯಶಸ್ವಿನಿ ಗೌಡಳ ಪತಿ ಮಹೇಶ್ ಅಲಿಯಾಸ್ ದಡಿಯ ಮಹೇಶ್ ಹೆಸರನ್ನು ಪಟ್ಟಿಯಿಂದ ತೆಗೆಯಲು 20 ಲಕ್ಷ ರೂ. ಲಂಚ, 2 ಲಕ್ಷ ಬೆಲೆ ಬಾಳುವ LED TV ಮತ್ತು INNOVA Cresta ಕಾರ್ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ.
ತಿಂಗಳಿಗೆ 25 ಲಕ್ಷ ‘ಮಾಮೂಲಿ’ ವಸೂಲಿ:
ಇನ್‌ಸ್ಪೆಕ್ಟರ್ ನೇರವಾಗಿ ಹಣ ವಸೂಲಿ ಮಾಡದೆ, ತಮ್ಮ SB ಮತ್ತು ಅಧಿಕೃತ ಡ್ರೈವರ್ ಮೂಲಕ ತಿಂಗಳಿಗೆ ಸರಾಸರಿ 25 ಲಕ್ಷ ರೂ. ಸಂಗ್ರಹಿಸುತ್ತಿದ್ದಾರೆ. ಸಬ್ ಇನ್‌ಸ್ಪೆಕ್ಟರ್ ಮಟ್ಟದ ಅಧಿಕಾರಿಗಳು ಅಕ್ರಮ ಪ್ರಕರಣಗಳಿಗೆ ದಾಳಿ ಮಾಡಿದರೆ, ಮಧ್ಯಪ್ರವೇಶಿಸಿ ಹಣ ವಸೂಲಿ ಮಾಡಿ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ. ಪ್ರಾಮಾಣಿಕ ವರದಿಗಳನ್ನು ನೀಡಿದ ಸಿಬ್ಬಂದಿಯನ್ನು ಟಾರ್ಗೆಟ್ ಮಾಡುವುದಕ್ಕೂ ಹೇಸಲ್ಲ. ಇದರ ಬಗ್ಗೆಯೂ ಆರೋಪಗಳಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm