ಬ್ರೇಕಿಂಗ್ ನ್ಯೂಸ್
07-04-26 10:08 am HK News Staffer ಕ್ರೈಂ
ಮಧುರೈ, ಏ.07: ದೇಶವನ್ನೇ ಬೆಚ್ಚಿಬೀಳಿಸಿದ್ದ 2020ರ ತಮಿಳುನಾಡಿನ ಸಾತಂಕುಲಂನ ತಂದೆ-ಮಗನ ಕಸ್ಟಡಿ ಸಾವಿನ ಪ್ರಕರಣದಲ್ಲಿ ಮಧುರೈ ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಒಂಬತ್ತು ಮಂದಿ ಪೊಲೀಸ್ ಸಿಬ್ಬಂದಿಗೆ ಮರಣದಂಡನೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ನ್ಯಾಯಾಧೀಶರು ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪ ಎಂದು ಉಲ್ಲೇಖಿಸಿದ್ದಾರೆ.
ನ್ಯಾಯಾಧೀಶ ಮುತ್ತುಕುಮಾರನ್ ತೀರ್ಪು ನೀಡುತ್ತಾ, “ಈ ತಪ್ಪನ್ನು ಸಾಮಾನ್ಯ ನಾಗರಿಕರು ಮಾಡಿದ್ದರೆ ಸಾಮಾನ್ಯ ಶಿಕ್ಷೆ ವಿಧಿಸಬಹುದಿತ್ತು. ಆದರೆ ಈ ಅಪರಾಧವನ್ನು ಪೊಲೀಸರೇ ಮಾಡಿದ ಕಾರಣ ಕಠಿಣ ಶಿಕ್ಷೆ ಅನಿವಾರ್ಯ” ಎಂದು ಹೇಳಿದ್ದಾರೆ.
ದೃಢಪಟ್ಟಿತು ಕ್ರೂರ ಕಸ್ಟಡಿ ಹಿಂಸೆ ;
ನ್ಯಾಯಾಲಯವು ಈ ಪ್ರಕರಣವನ್ನು ಕಸ್ಟಡಿ ಹಿಂಸಾಚಾರದ ಸ್ಪಷ್ಟ ಉದಾಹರಣೆ ಎಂದು ಪರಿಗಣಿಸಿದೆ. ತನಿಖೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ತಂದೆ-ಮಗನ ಮೇಲೆ ನಿರಂತರ ಹಾಗೂ ಕ್ರೂರ ಹಲ್ಲೆ ನಡೆದಿರುವುದು ಸಾಬೀತಾಗಿದೆ. ವಾರದ ಹಿಂದೆ ಮಧುರೈನ ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೂನ್ 2020 ರಲ್ಲಿ ಪಿ ಜಯರಾಜ್ ಮತ್ತು ಅವರ ಮಗ ಜೆ ಬೆನ್ನಿಕ್ ಅವರ ಕಸ್ಟಡಿ ಚಿತ್ರಹಿಂಸೆ ಮತ್ತು ಅವರ ಸಾವಿನಲ್ಲಿ ಎಲ್ಲಾ ಒಂಬತ್ತು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಇದೀಗ ಏಪ್ರಿಲ್ 6ರ ಸೋಮವಾರದಂದು ಶಿಕ್ಷೆ ವಿಧಿಸಲಾಗಿದೆ.
ತಂದೆ, ಮಗನ ಸಾವಿನ ಪ್ರಕರಣದಲ್ಲಿ ಇನ್ಸ್ಪೆಕ್ಟರ್ ಎಸ್. ಶ್ರೀಧರ್ ಹಲ್ಲೆಗೆ ಪ್ರಚೋದನೆ ನೀಡಿದ್ದು, ಇತರ ಸಿಬ್ಬಂದಿಯೂ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಸುಳ್ಳು ಸಾಕ್ಷ್ಯ ಸೃಷ್ಟಿಸುವ ಪ್ರಯತ್ನವೂ ನಡೆದಿತ್ತು ಎಂದು ಕೋರ್ಟ್ ಹೇಳಿದೆ. ಗಮನಾರ್ಹವಾಗಿ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಸ್ಪೆಷಲ್ ಸಬ್-ಇನ್ಸ್ಪೆಕ್ಟರ್ ಪೌಲ್ದುರೈ, ವಿಚಾರಣೆಯ ವೇಳೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು.


ಪ್ರಕರಣದ ಹಿನ್ನಲೆ;
2020ರ ಜೂನ್ 19ರಂದು ಕೋವಿಡ್-19 ಲಾಕ್ಡೌನ್ ನಿಯಮ ಉಲ್ಲಂಘನೆ ಆರೋಪದಡಿ ಪಿ. ಜಯರಾಜ್ (58) ಮತ್ತು ಅವರ ಪುತ್ರ ಜೆ. ಬೆನ್ನಿಕ್ (31) ಅವರನ್ನು ಪೊಲೀಸರು ಬಂಧಿಸಿದ್ದರು. ಕೆಲವು ದಿನಗಳ ಬಳಿಕ ಅವರು ಕೋವಿಲ್ಪಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ತನಿಖೆಯಲ್ಲಿ ಇಬ್ಬರಿಗೂ ಕಸ್ಟಡಿಯಲ್ಲಿ ತೀವ್ರ ಚಿತ್ರಹಿಂಸೆ ನೀಡಲಾಗಿದೆ ಎಂಬುದು ಬಹಿರಂಗಗೊಂಡಿತ್ತು. ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸ್ ಹೊಣೆಗಾರಿಕೆ ಮತ್ತು ಮಾನವ ಹಕ್ಕುಗಳ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿತ್ತು.
ಸಿಬಿಐ ತನಿಖೆಯ ಪ್ರಮುಖ ಸಾಕ್ಷ್ಯಗಳು
ಪ್ರಕರಣದ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ವಿಧಿವಿಜ್ಞಾನ ಸಾಕ್ಷ್ಯಗಳು, ವೈದ್ಯಕೀಯ ವರದಿಗಳು ಹಾಗೂ ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಠಾಣೆಯೊಳಗಿನ ಹಿಂಸೆ ನಿರಂತರ ಮತ್ತು ಕ್ರೂರವಾಗಿತ್ತು ಎಂದು ಸಾಬೀತುಪಡಿಸಿದರು. ಠಾಣೆಯೊಳಗಿನ ರಕ್ತದ ಗುರುತುಗಳು ಮತ್ತು ಮರಣೋತ್ತರ ವರದಿಗಳಲ್ಲಿನ ಗಾಯಗಳ ವಿವರಗಳು ಪ್ರಮುಖ ಪುರಾವೆಗಳಾಗಿವೆ ಎಂದು ವರದಿ ತಿಳಿಸಿದೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm