ಬ್ರೇಕಿಂಗ್ ನ್ಯೂಸ್
07-04-26 06:18 pm HK News Staffer ಕ್ರೈಂ
ಉಳ್ಳಾಲ, ಎ.7: ರೌಡಿಶೀಟರ್ ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ ಸಂಬಂಧಿಸಿ ಸಿಸಿಬಿ ಪೊಲೀಸರು ಕೃತ್ಯದಲ್ಲಿ ನೇರ ಪಾಲ್ಗೊಂಡ ಮೂವರು ಆರೋಪಿಗಳನ್ನ ವಶಕ್ಕೆ ಪಡೆದಿರುವ ಮಾಹಿತಿ ತಿಳಿದುಬಂದಿದೆ. ಆರೀಫ್ ಕೊಲೆ ಪ್ರಕಣರಣವನ್ನ ಭೇದಿಸುವ ಟಾಸ್ಕ್ ಉದ್ದೇಶದಿಂದ ಹದಿನೈದು ವರ್ಷಗಳಿಂದ ಉಳ್ಳಾಲ ಠಾಣೆಯಲ್ಲಿದ್ದು ಕೆಲವು ತಿಂಗಳ ಹಿಂದಷ್ಟೆ ನಗರ ಪೊಲೀಸ್ ಕಮೀಷನರ್ ಕಚೇರಿಗೆ ವರ್ಗಾವಣೆಗೊಂಡಿದ್ದ ಹೆಡ್ ಕಾನ್ಸ್ ಟೇಬಲ್ ಓರ್ವರನ್ನ ಮತ್ತೆ ಉಳ್ಳಾಲ ಠಾಣೆಗೆ ಕರೆಸಲಾಗಿದೆ.
ತೊಕ್ಕೊಟ್ಟು ಫ್ಲೈ ಓವರ್ ನಲ್ಲಿ ಕೊಲೆಯಾಗಿದ್ದ ಹಳೆಯ ರೌಡಿಶೀಟರ್ ಟ್ಯಾಬ್ಲೆಟ್ ಆರಿಫ್ ಕೊಲೆ ಕೃತ್ಯದಲ್ಲಿ ನೇರ ಭಾಗಿಯಾಗಿದ್ದರೆನ್ನಲಾದ ಮೂಡುಶೆಡ್ಡೆಯ ರಿಝ್ವಾನ್ ಮತ್ತು ಫೈಸಲ್ ನಗರದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರು ಮಂದಿ ಹಂತಕರು ಕೊಲೆಯಲ್ಲಿ ನೇರ ಪಾಲ್ಗೊಂಡಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ಇನೋವಾ ಕಾರನ್ನ ವಿಟ್ಲದ ಬುಡೋಳಿ ಎಂಬಲ್ಲಿ ಬಿಟ್ಟು ಆರೋಪಿಗಳು ಮೈಸೂರು ಮತ್ತು ಬೆಂಗಳೂರಿನ ಕಡೆಗೆ ಪರಾರಿಯಾಗಿದ್ದರೆನ್ನಲಾಗಿದೆ. ಕಠಿಣ ಸವಾಲನ್ನು ಸ್ವೀಕರಿಸಿದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇದೀಗ ಮೂವರನ್ನ ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.


ಇತ್ತ ಆರೀಫ್ ಕೊಲೆ ಪ್ರಕರಣದಲ್ಲಿ ಸುಳಿವೇ ಇಲ್ಲದಂತೆ ಎಸ್ಕೇಪ್ ಆಗಿದ್ದ ಹಂತಕರನ್ನು ಪತ್ತೆಹಚ್ಚಲು ಉಳ್ಳಾಲ ಪೊಲೀಸ್ ಠಾಣೆಯಿಂದ ಕೆಲ ತಿಂಗಳ ಹಿಂದೆ ವರ್ಗಾವಣೆಗೊಂಡಿದ್ದ ಹೆಡ್ ಕಾನ್ ಸ್ಟೇಬಲ್ ಓರ್ವರನ್ನ ಮತ್ತೆ ಅದೇ ಠಾಣೆಗೆ ಕರೆಸಲಾಗಿದೆ. ಇವರು ಕಳೆದ ಹದಿನೈದು ವರುಷಗಳಿಂದಲೂ ಉಳ್ಳಾಲ ಠಾಣೆಯೊಂದರಲ್ಲೇ ಸ್ಪೆಷಲ್ ಬ್ರಾಂಚ್ ಸಿಬ್ಬಂದಿಯಾಗಿದ್ದು ಠಾಣೆಗೆ ಬಂದು ಹೋದ ಅನೇಕ ಇನ್ಸ್ ಪೆಕ್ಟರ್ ಗಳ ಸಹಾಯಕನಾಗಿ ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಒಂದೇ ಠಾಣೆಯಲ್ಲಿ ಸುದೀರ್ಘ ಕರ್ತವ್ಯ ನಿರ್ವಹಿಸಿದ ಪರಿಣಾಮ ಉಳ್ಳಾಲ ವ್ಯಾಪ್ತಿಯಲ್ಲಿ ವಿಶೇಷ ಸಂಪರ್ಕವನ್ನೂ ಇಟ್ಟುಕೊಂಡಿದ್ದರು. ಉಳ್ಳಾಲ ಠಾಣೆಯಲ್ಲಿ ಇವರ ದೀರ್ಘ ಸೇವೆಯನ್ನು ತಿಳಿದು ಕಳೆದ ವರುಷ ಮಂಗಳೂರಿಗೆ ಬರುತ್ತಲೇ ಕಮೀಷನರ್ ಸುಧೀರ್ ರೆಡ್ಡಿ ಸದ್ರಿ ಪೇದೆಯನ್ನು ಉಳ್ಳಾಲದಿಂದ ಕಮಿಷನರ್ ಕಚೇರಿಗೆ ಕರ್ತವ್ಯಕ್ಕೆ ನಿಯೋಜಿಸಿದ್ದರು.
ಮೂಲಗಳ ಪ್ರಕಾರ, ಆರೀಫ್ ಕೊಲೆ ಪ್ರಕರಣದಲ್ಲಿ ಸುಳಿವು ತಿಳಿಯಲು ಉಳ್ಳಾಲ ಠಾಣೆಯ ನಿರೀಕ್ಷಕರ ಕೋರಿಕೆ ಮೇರೆಗೆ ಮತ್ತೆ ಆ ಪೇದೆಯನ್ನ ಕೆಲವು ದಿನಗಳ ಮಟ್ಟಿಗೆ ಉಳ್ಳಾಲಕ್ಕೆ ಕರೆಸಲಾಗಿದೆ ಎನ್ನುವ ಮಾಹಿತಿಯೂ ಇದೆ. ಆದರೆ, ಸಿಸಿಬಿಯವರೇ ಹೆಣಗಾಡುತ್ತಿರುವ ಕೊಲೆ ಪ್ರಕರಣವನ್ನು ಭೇದಿಸಲು ವರ್ಗಾವಣೆಗೊಂಡ ಹಳೆ ಪೇದೆಯನ್ನ ಮತ್ತೆ ಉಳ್ಳಾಲ ಠಾಣೆಗೆ ಕರೆಸಿರುವುದು ಇಲಾಖೆಯ ಒಳಗಡೆ ಚರ್ಚೆಗೆ ಕಾರಣವಾಗಿದೆ.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm