ಬ್ರೇಕಿಂಗ್ ನ್ಯೂಸ್
09-04-26 09:16 pm HK News Staffer ಕ್ರೈಂ
ಮಂಗಳೂರು, ಎಪ್ರಿಲ್ 9: 2013ರ ದೇರಳಕಟ್ಟೆ ಮೆಡಿಕಲ್ ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಲ್ಲದೆ, ಉರ್ವಾ ಎಎಸ್ಐ ಐತಪ್ಪ ಕೊಲೆಯತ್ನ ಪ್ರಕರಣ ಸೇರಿ ಮಂಗಳೂರಿನಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವ ಕುಶಾಲನಗರ ಮೂಲದ ಸುಲೈಮಾನ್ ಅಲಿಯಾಸ್ ಸಮೀರ್ (37) ಮತ್ತು ಮುಲ್ಕಿಯಲ್ಲಿ ಪ್ರವೀಣ್ ಎಂಬ ವ್ಯಕ್ತಿಯನ್ನು ಹಣಕ್ಕಾಗಿ ಅಪಹರಿಸಿ ಕ್ವಾರಿಗೆ ಕೊಂಡೊಯ್ದು ಕೊಲೆಗೈದ ಪ್ರಕರಣ ಸೇರಿ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಾಂಟೆಡ್ ಆಗಿದ್ದು ವಿದೇಶದಲ್ಲಿ ಅಡಗಿರುವ ಶಂಸುದ್ದೀನ್(35) ಎಂಬಿಬ್ಬರ ಪತ್ತೆಗಾಗಿ ಮಂಗಳೂರು ಪೊಲೀಸರು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದಾರೆ.
ಸಮೀರ್ ಮತ್ತು ಶಂಸುದ್ದೀನ್ ನಕಲಿ ಪಾಸ್ ಪೋರ್ಟ್ ಮೂಲಕ ಸೌದಿ ಅರೇಬಿಯಾಕ್ಕೆ ಎಸ್ಕೇಪ್ ಆಗಿ ಅಲ್ಲಿಯೇ ತಲೆಮರೆಸಿಕೊಂಡಿದ್ದಾರೆಂಬ ಮಾಹಿತಿ ಮೇರೆಗೆ ಕಮಿಷನರ್ ಸುಧೀರ್ ರೆಡ್ಡಿ ಸೂಚನೆಯಂತೆ, ಅವರ ಪತ್ತೆಗಾಗಿ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡಿದ್ದು, ವಿದೇಶದಲ್ಲಿ ಅಡಗಿದ್ದರೂ ಅವರನ್ನು ಸಿಬಿಐ ಮೂಲಕ ಬಂಧಿಸಿ ಕರೆತರಲು ಪೊಲೀಸ್ ಇಲಾಖೆ ಮುಂದಾಗಿದೆ.

ನಟೋರಿಯಸ್ ಕ್ರಿಮಿನಲ್ ಸಮೀರ್
ಕುಶಾಲನಗರ ಮೂಲದ ಸಮೀರ್ ಅಲಿಯಾಸ್ ಸುಲೈಮಾನ್ ಕಾಟಿಪಳ್ಳದ ನಿವಾಸಿಯಾಗಿದ್ದು, 2013ರ ಡಿಸೆಂಬರ್ 13ರಂದು ಮೆಡಿಕಲ್ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಜೊತೆಗಿದ್ದಾಗ ಅವರನ್ನು ಏಳು ಮಂದಿ ಸಹಚರರು ಸೇರಿ ಕಿಡ್ನಾಪ್ ಮಾಡಿದ್ದರು. ಯುವ ಜೋಡಿಯನ್ನು ಇರಾ ಬಳಿಯ ನಿರ್ಜನ ಜಾಗಕ್ಕೆ ಕರೆದೊಯ್ದು ಯುವಕನಿಗೆ ಹಲ್ಲೆಗೈದು ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದರು. ಪ್ರಕರಣದಲ್ಲಿ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದ್ದರೆ, ಸಮೀರ್ ಮತ್ತು ಸಫ್ವಾನ್ ಹುಸೇನ್ ನಕಲಿ ಪಾಸ್ಪೋರ್ಟ್ ಮೂಲಕ 2017ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದರು.
2026ರ ಫೆಬ್ರವರಿ ತಿಂಗಳಲ್ಲಿ ವಿದೇಶದಿಂದ ಬಂದು ಆಂಧ್ರಪ್ರದೇಶದ ರಾಯಚೋಟಿ ಎಂಬಲ್ಲಿ ಅಡಗಿಕೊಂಡಿದ್ದ ಸಫ್ವಾನ್ ನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸಫ್ವಾನ್ ಆಂಧ್ರಪ್ರದೇಶದ ಮುಸ್ಲಿಂ ಏರಿಯಾದಲ್ಲಿದ್ದು ನಕಲಿ ಪಾಸ್ಪೋರ್ಟ್ ಮೂಲಕ ವಿದೇಶಕ್ಕೆ ಹೋಗಿ ಬರುತ್ತಿದ್ದಾನೆಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ವೇಷ ಮರೆಸಿಕೊಂಡು ಬೆನ್ನುಬಿದ್ದು ಅರೆಸ್ಟ್ ಮಾಡಿದ್ದರು. ಈತನ ಬಂಧನವಾಗುತ್ತಲೇ ಸೌದಿ ಅರೇಬಿಯಾದಲ್ಲಿ ಸಮೀರ್ ಮತ್ತು ಶಂಸುದ್ದೀನ್ ಕೂಡ ಅಡಗಿದ್ದಾರೆಂಬ ಮಾಹಿತಿ ಲಭಿಸಿತ್ತು. ಇದೀಗ ಅವರ ಬಂಧನಕ್ಕಾಗಿ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.

ಇದಲ್ಲದೆ, 2017ರ ಎಪ್ರಿಲ್ 5ರಂದು ನಸುಕಿನಲ್ಲಿ ಉರ್ವಾ ಠಾಣೆ ಎಎಸ್ಐ ಐತಪ್ಪ ಅವರು ಮಂಗಳೂರಿನ ಲೇಡಿಹಿಲ್ ವೃತ್ತದಲ್ಲಿ ಗಸ್ತಿನಲ್ಲಿದ್ದಾಗ ಇದೇ ಸಮೀರ್ ಮತ್ತು ನಿಯಾಜ್ ಎಂಬವರು ತಲೆಗೆ ರಾಡ್ ನಲ್ಲಿ ಹೊಡೆದು ಹಲ್ಲೆಗೆ ಪ್ರಯತ್ನಿಸಿದ್ದರು. ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನೂ ಅರೆಸ್ಟ್ ಮಾಡಿ ಚಾರ್ಜ್ ಶೀಟ್ ಹಾಕಿದ್ದರು. ಆದರೆ ಸಮೀರ್ ಇದರ ಬೆನ್ನಲ್ಲೇ ಜಾಮೀನಿನಲ್ಲಿ ಹೊರಬಂದು ನಕಲಿ ಪಾಸ್ಪೋರ್ಟ್ ಮೂಲಕ ಬೆಂಗಳೂರಿನಿಂದ ವಿದೇಶಕ್ಕೆ ಪರಾರಿಯಾಗಿದ್ದ.

ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟರೂ ಪತ್ತೆಯಿಲ್ಲ !
ಇನ್ನೊಬ್ಬ ಆರೋಪಿ ಶಂಸುದ್ದೀನ್ ಮೂಲತಃ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ರಾಯಚೋಟಿ ಮೂಲದವನಾಗಿದ್ದು ಸುರತ್ಕಲ್ ಬಳಿ ನೆಲೆಸಿದ್ದ. ಮಂಗಳೂರಿನಲ್ಲಿ ಅಲ್ತಾಫ್, ಇಮ್ರಾನ್ ಹೆಸರಲ್ಲಿ ಗುರುತಿಸಿಕೊಂಡು ಅಪರಾಧ ಚಟುವಟಿಕೆ ನಡೆಸುತ್ತಿದ್ದ. 2008ರಲ್ಲಿ ನವೆಂಬರ್ 9ರಂದು ಮುಲ್ಕಿಯ ಕಾರು ಚಾಲಕ ಪ್ರವೀಣ್ ಎಂಬವರನ್ನು ಪಾವಂಜೆ ಸೇತುವೆ ಬಳಿ ತನ್ನ ಸಹಚರರೊಂದಿಗೆ ಸೇರಿ ಕಿಡ್ನಾಪ್ ಮಾಡಿದ್ದ ಶಂಸುದ್ದೀನ್, ಹಣ, ಒಡವೆಯನ್ನು ಕಿತ್ತುಕೊಂಡು ಮತ್ತಷ್ಟು ಹಣ ನೀಡುವಂತೆ ಪೀಡಿಸಿ ಬಜ್ಪೆ ಬಳಿಯ ಕಳವಾರು ಎಂಬಲ್ಲಿನ ಕಲ್ಲಿನ ಕ್ವಾರಿಗೆ ಒಯ್ದು ಅಲ್ಲಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು. ಬಳಿಕ ಸಾಕ್ಷ್ಯ ಮುಚ್ಚಿ ಹಾಕುವುದಕ್ಕಾಗಿ ದೇಹಕ್ಕೆ ಕಲ್ಲು ಕಟ್ಟಿ ಕ್ವಾರಿಯಲ್ಲಿದ್ದ ನೀರಿನಲ್ಲಿ ಮುಳುಗಿಸಿದ್ದರು. ಪ್ರಕರಣದ ಬೆನ್ನತ್ತಿದ ಮುಲ್ಕಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಬಳಿಕ ಜಾಮೀನಿನಲ್ಲಿ ಹೊರಬಂದಿದ್ದ ಶಂಸುದ್ದೀನ್ ದರೋಡೆ, ಸುಲಿಗೆ ಹಲವು ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿದ್ದಲ್ಲದೆ, 2018ರಲ್ಲಿ ಮರಳಿ ಆಂಧ್ರಕ್ಕೆ ತೆರಳಿ ಶೇಕ್ ಮೊಹಮ್ಮದ್ ಸಾದಿಕ್ ಹೆಸರಲ್ಲಿ ನಕಲಿ ಪಾಸ್ಪೋರ್ಟ್ ಮಾಡಿಸಿ ವಿದೇಶಕ್ಕೆ ಪರಾರಿಯಾಗಿದ್ದ. ಈ ನಡುವೆ, 2020ರಲ್ಲಿ ಪ್ರವೀಣ್ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ಶಂಸುದ್ದೀನ್ ಸೇರಿ ಎಲ್ಲ ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೈಲು ಶಿಕ್ಷೆಯಾದರೂ ಶಂಸುದ್ದೀನ್ ಪೊಲೀಸರ ಕೈಗೆ ಸಿಗದೆ ಸೌದಿ ಅರೇಬಿಯಾದಲ್ಲೇ ತಲೆಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದ್ದು, ಇದೀಗ ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದಾರೆ.
Mangaluru police have issued a Red Corner Notice against two absconding accused involved in multiple serious criminal cases. The accused have been identified as Sulaiman alias Sameer (37), a native of Kushalnagar, and Shamsuddin (35), who is currently believed to be hiding abroad.
09-04-26 09:30 pm
HK News Staffer
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
09-04-26 07:43 pm
HK News Staffer
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm