ಬ್ರೇಕಿಂಗ್ ನ್ಯೂಸ್
17-04-26 06:48 pm HK News Staffer ಕ್ರೈಂ
ಮುಂಬೈ, ಎಪ್ರಿಲ್ 17: ನಾಸಿಕ್ ಟಿಸಿಎಸ್ ಐಟಿ ಕಂಪನಿಯಲ್ಲಿ ಕಾರ್ಪೊರೇಟ್ ಜಿಹಾದ್, ಮತಾಂತರ ಚಟುವಟಿಕೆ ವಿವಾದ ತೀವ್ರ ಸ್ವರೂಪ ಪಡೆದಿದ್ದು, ವಿಶೇಷ ತನಿಖಾ ತಂಡದ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬೆನ್ನುಬಿದ್ದಿದ್ದಾರೆ. ಇದೇ ವೇಳೆ, ಆರೋಪಿಗಳಲ್ಲಿ ಒಬ್ಬಳಾಗಿರುವ ನಿದಾ ಖಾನ್ ಎಂಬ ಯುವತಿ ತಾನು ಗರ್ಭಿಣಿಯಾಗಿದ್ದು ಬಂಧನ ಕ್ರಮದಿಂದ ವಿನಾಯ್ತಿ ನೀಡಬೇಕೆಂದು ನಿರೀಕ್ಷಣಾ ಜಾಮೀನು ಸಲ್ಲಿಸಿದ್ದಾರೆ.
ನಿದಾ ಖಾನ್ 2021ರಲ್ಲಿ ಟಿಸಿಎಸ್ ಕಂಪನಿ ಸೇರಿದ್ದು, ಈಗ 25ರ ಹರೆಯದ ಯುವತಿ. ಸಹೋದ್ಯೋಗಿ ಹಿಂದು ಯುವತಿಯರನ್ನು ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಳೆಂದು ಹಲವರು ದೂರು ನೀಡಿದ್ದರಿಂದ ಒಂಬತ್ತು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ದೂರಿನಲ್ಲಿ ಲೈಂಗಿಕ ಕಿರುಕುಳ, ಬ್ಲಾಕ್ಮೇಲ್, ಮತಾಂತರಕ್ಕೆ ಒತ್ತಡ ಇತ್ಯಾದಿ ಅಂಶಗಳಿದ್ದು, 2022ರ ಫೆಬ್ರವರಿಯಿಂದ 2026ರ ಮಾರ್ಚ್ ನಡುವೆ ಕೃತ್ಯ ಆಗಿರುವುದಾಗಿ ಹೇಳಿದ್ದಾರೆ.
ಎಚ್ಆರ್ ವಿಭಾಗದ ಹೆಡ್ ಅಶ್ವಿನಿ ಚೈನಾನಿ, ಸೀನಿಯರ್ ಉದ್ಯೋಗಿಗಳಾದ ಡ್ಯಾನಿಶ್ ಶೇಖ್, ತೌಸಿಫ್ ಅತ್ತಾರ್, ರಜಾ ಮೆಮನ್, ಶಾರುಕ್ ಖುರೇಷಿ, ಶಫಿ ಶೇಕ್, ಆಸಿಫ್ ಅಫ್ತಾಬ್ ಅನ್ಸಾರಿ ಎಂಬ ಏಳು ಮಂದಿಯನ್ನು ಬಂಧಿಸಲಾಗಿದ್ದು, ಇತರೇ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಕೆಲವು ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಇರಿಸಿಕೊಂಡು ವಂಚಿಸಿದ್ದರು. ಇನ್ನು ಕೆಲವರನ್ನು ಅಸಭ್ಯವಾಗಿ ಮುಟ್ಟುವುದು, ಅಶ್ಲೀಲವಾಗಿ ನಿಂದಿಸುವುದು ಮಾಡುತ್ತಿದ್ದರು. ಈ ಬಗ್ಗೆ ಎಚ್ಆರ್ ವಿಭಾಗಕ್ಕೆ ದೂರು ನೀಡಿದ್ದರೂ, ಕ್ರಮ ಕೈಗೊಳ್ಳುತ್ತಿರಲಿಲ್ಲ ಎಂದು ದೂರಿನಲ್ಲಿ ಹೇಳಿಕೊಂಡಿದ್ದರು.
ಕೆಲವು ಮುಸ್ಲಿಂ ಸೀನಿಯರ್ ಉದ್ಯೋಗಿಗಳು ತಮ್ಮ ಜೊತೆಗೆ ನಮಾಜ್ ಮಾಡುವಂತೆಯೂ ಒತ್ತಡ ಹೇರುತ್ತಿದ್ದರು ಎಂದೂ ಯುವತಿಯರು ಆರೋಪಿಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಲೇ ಆರೋಪ ಹೊತ್ತ ಉದ್ಯೋಗಿಗಳನ್ನು ಟಿಸಿಎಸ್ ಕಂಪನಿ ಕೆಲಸದಿಂದ ವಜಾ ಮಾಡಿದ್ದು ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದೆ. ಇದಲ್ಲದೆ, ಗಂಭೀರ ಆರೋಪ ಎದುರಾಗಿದ್ದರಿಂದ ನಾಸಿಕ್ ಕಚೇರಿಯ ಎಲ್ಲ ಉದ್ಯೋಗಿಗಳಿಗೂ ವರ್ಕ್ ಫ್ರಂ ಹೋಮ್ ಕೆಲಸ ಮಾಡುವಂತೆ ಸೂಚಿಸಿದೆ.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
27-07-26 08:24 pm
HK News Staffer
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
27-07-26 09:04 pm
HK News Staffer
ಬೆಂಗಳೂರು ಗ್ಯಾರೇಜ್ ನಲ್ಲಿ ಅಗ್ನಿ ಅವಘಡ ; ಜಾಗ್ವಾರ...
27-07-26 07:35 pm
ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಲೈಂಗಿಕ ಕಿರುಕುಳ ಆರೋ...
27-07-26 01:09 pm
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm