ಬ್ರೇಕಿಂಗ್ ನ್ಯೂಸ್
20-04-26 11:13 am HK News Staffer ಕ್ರೈಂ
ಮಣಿಪಾಲ, ಎಪ್ರಿಲ್ 20 : ಸಿಂಗಾಪುರ ಮೂಲದ ಕಂಪೆನಿಯ ಹೆಸರಲ್ಲಿ ಮಣಿಪಾಲದ ಸಾಫ್ಟ್‌ವೇರ್ ಕಂಪೆನಿಯೊಂದಕ್ಕೆ ಕೋಟ್ಯಂತರ ರೂ. ಮೌಲ್ಯದ ಷೇರುಗಳನ್ನು ನೀಡುವುದಾಗಿ ಹೇಳಿ 33 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ ಎಂ.ಎನ್. ಶೆಟ್ಟಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ನಡೆಸುತ್ತಿದ್ದ ದೀಲಿಪ್ ಆರ್.ಅಡಿಗ (35) ಎಂಬವರು ತನಗಾದ ವಂಚನೆ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಸಿಂಗಾಪುರ ಮೂಲದ ಇನ್ಫೋಮೋ ಗ್ಲೋಬಲ್ ಪ್ರೈ. ಲಿ. ಕಂಪೆನಿಯ ಸಿಇಓ ಎಂದು ಹೇಳಿಕೊಂಡ ಆನಂದರಾವ್ ಎಂಬವರು ದೀಲಿಪ್ ಗೆ ಕರೆ ಮಾಡಿ ಕಂಪನಿಯಲ್ಲಿ ತಯಾರಾಗುವ ಸಿಎಂಎಸ್ ಪ್ರೊಡಕ್ಟ್ ಗಳನ್ನು ಪಡೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದರು.
ದಿಲೀಪ್ ಹೇಳಿದ ಪ್ರೊಡಕ್ಟ್ ಮೌಲ್ಯದ ಪಟ್ಟಿಯನ್ನು ಇ-ಮೇಲ್ ಮುಖಾಂತರ ನೋಡಿ 2019ರ ಜೂನ್‌ನಲ್ಲಿ 35 ಲಕ್ಷ ರೂ. ನಗದು ಹಾಗೂ ಸಿಂಗಾಪುರ ಕಂಪನಿಯ 17.5 ಲಕ್ಷ ಶೇರ್‌ಗಳನ್ನು ನೀಡುವುದಾಗಿ ಆನಂದ ರಾವ್ ತಿಳಿಸಿದ್ದರು. ಈ ಶೇರ್ ಮೂರು ವರ್ಷದ ಬಳಿಕ 33 ಕೋಟಿ ಆಗಲಿದ್ದು ಕಂಪನಿಯ ಒಟ್ಟು ಶೇರು ಮೌಲ್ಯ 3 ವರ್ಷದಲ್ಲಿ 9 ಸಾವಿರ ಕೋಟಿ ಆಗುವುದಾಗಿ ನಂಬಿಸಿದ್ದರು. ಇದರಂತೆ, 2020ರ ಎಪ್ರಿಲ್‌ನಲ್ಲಿ ಶೇರ್ ತೆಗೆದುಕೊಳ್ಳುವ ಅಗ್ರಿಮೆಂಟ್ ಆಗಿದ್ದು ವ್ಯವಹಾರ ಮಾಡಿಕೊಂಡಿದ್ದರು. ಇದೇ ವೇಳೆ, ಸಿಂಗಾಪುರದ ಕಂಪನಿಯಲ್ಲಿ ಒಟ್ಟು 35 ಮಿಲಿಯನ್ ಷೇರುಗಳಿವೆ ಎಂಬುದಾಗಿ ಸುಳ್ಳು ಮಾಹಿತಿಯನ್ನು ನಮೂದಿಸಿ ನಂಬಿಸಲಾಗಿತ್ತು. ಅಗ್ರಿಮೆಂಟ್‌ಗೆ ದಿಲೀಪ್ ಹಾಗೂ ಆನಂದ ರಾವ್ ಸಹಿ ಮಾಡಿದ್ದರು. ಒಪ್ಪಂದ ಪ್ರಕಾರ ದಿಲೀಪ್ ತಮ್ಮ ಸಿಎಂಎಸ್ ಸಾಫ್ಟ್‌ವೇರ್ ಉತ್ಪನ್ನವನ್ನು ಸಿಂಗಾಪುರ ಕಂಪನಿಗೆ ಒದಗಿದ್ದರು.
ಮೂರು ವರ್ಷಗಳ ಬಳಿಕ 2023ರ ಎ.6ರಂದು ಅಗ್ರಿಮೆಂಟ್ ಪ್ರಕಾರ ವ್ಯಾಲ್ಯೂಷನ್ ವರದಿ ಮತ್ತು ಹಣದ ಬಗ್ಗೆ ದಿಲೀಪ್ ಇ-ಮೇಲ್ ಮೂಲಕ ಕೇಳಿಕೊಂಡಾಗ ಕಂಪನಿಯವರು ಸಬೂಬು ಹೇಳತೊಡಗಿದ್ದರು.
ಬಳಿಕ ಮಣಿಪಾಲ್ ಕಂಪನಿಯ ಪಾಲುದಾರ ಶ್ಯಾಮದೀಪ್ ಅವರೊಂದಿಗೆ ಮಾತುಕತೆ ನಡೆಸಿದ ಆರೋಪಿಗಳು 6.9 ಕೋಟಿ ರೂ. ನಗದು ಮತ್ತು 20 ಲಕ್ಷ ಷೇರು ನೀಡುವುದಾಗಿ ಹೇಳಿ ಮತ್ತೆ ಕಾಲಹರಣ ಮಾಡಿದ್ದರು. ಆದರೆ ಕಂಪನಿಗೆ ಬರಬೇಕಾದ 33 ಕೋಟಿ ಹಣ ನೀಡದೆ ವಂಚಿಸಿದ್ದು ಕಂಪನಿಯ ಚೇರ್ಮನ್ ಪೀಟರ್ ಜಫ್ರೀ ಜರ್ಮೈನ್, ಸಿ.ಟಿ.ಓ ರಾಘವೇಂದ್ರ ಅಗರವಾಲ, ನಿರ್ದೇಶಕರಾದ ಸ್ಮಿತಾ ಶಾಹು, ಕಂಪನಿ ಬೋರ್ಡ್ ಸದಸ್ಯರಾದ ಅಶುತೋಷ್ ಶ್ರೀವಾತ್ಸವ, ಆನಂದರಾವ್ ವಿರುದ್ಧ ದಿಲೀಪ್ ಮಣಿಪಾಲ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm