ಬ್ರೇಕಿಂಗ್ ನ್ಯೂಸ್
01-05-26 09:24 pm HK News Staffer ಕ್ರೈಂ
ಮಂಗಳೂರು, ಮೇ 1: ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯಲ್ಲಿ ಉಂಟಾಗಿದ್ದ ಗೊಂದಲಕ್ಕೆ ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಅಂತಿಮ ಪರಿಹಾರ ದೊರೆತಿದೆ. ಇದೀಗ ಅಖಿಲ ಭಾರತ ಬಿಲ್ಲವರ ಯೂನಿಯನ್ ಸಭೆ ನಡೆಸಿ ಕುದ್ರೋಳಿ ದೇವಸ್ಥಾನಕ್ಕೆ ಹೊಸ ಆಡಳಿತ ಕಮಿಟಿಯನ್ನು ನೇಮಕ ಮಾಡಿದೆ.
ಅಧ್ಯಕ್ಷರ ಅನುಮತಿ ಇಲ್ಲದೆ ಕೆಲವು ಆಡಳಿತ ಸಮಿತಿ ಸದಸ್ಯರು ಸಭೆ ನಡೆಸಿ, ನಿಯಮಬಾಹಿರ ರೀತಿಯಲ್ಲಿ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಿದ್ದರು. ಒಟ್ಟು 8 ಸದಸ್ಯರ ಸಮಿತಿಯಲ್ಲಿ 5 ಮಂದಿ ಗೈರಾಗಿದ್ದ ವೇಳೆ ನಡೆದ ಈ ಸಭೆಯೇ ಅಸಂವಿಧಾನಿಕ ಎಂದು ಹಿಂದಿನ ಪದಾಧಿಕಾರಿಗಳ ಸಮಿತಿ ಕೋರ್ಟ್ ಮೊರೆ ಹೋಗಿತ್ತು. ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ನ್ಯಾಯಾಲಯ, ಹಿಂದಿನ ಸಮಿತಿಯ ಪರವಾಗಿ ಆದೇಶ ನೀಡಿದೆ ಎಂದು ರವಿಶಂಕರ್ ಮಿಜಾರ್ ತಿಳಿಸಿದ್ದಾರೆ.

ಈ ಕುರಿತು ನೀಡಿರುವ ಹೇಳಿಕೆಯಲ್ಲಿ, 20-06-2025 ರಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಕಾರ್ಯದರ್ಶಿಗಳಾಗಿದ್ದ ಮಾಧವ ಸುವರ್ಣ ಅವರು ವಾಟ್ಸಾಪ್ ಮುಖಾಂತರ ಸಮಿತಿಯ ಸದಸ್ಯರು ಸೇರಿದಂತೆ ಕೆಲವರನ್ನು ಸಭೆಗೆ ಆಹ್ವಾನಿಸಿ ಇದರಲ್ಲಿ ಜನಾರ್ದನ ಪೂಜಾರಿಯವರು ಸಹ ಉಪಸ್ಥಿತಿಯಿರಲಿದ್ದಾರೆ ಎಂದು ಹೇಳಿ ಅಕ್ರಮವಾಗಿ ಸಭೆ ನಡೆಸಿದ್ದರು. ಆದರೆ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕರೆಯಲಾಗಿದ್ದ ಈ ಸಭೆಯು ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರ ಅನುಮತಿ ಇಲ್ಲದೇ ನಡೆದಿರುವುದರಿಂದ ಇಲ್ಲಿನ ಯಾವುದೇ ಚರ್ಚೆಯೂ ಸಹ ಅಸಂವಿಧಾನಿಕ ಆಗಿರುತ್ತದೆ. ಅಲ್ಲದೇ ಈ ಸಭೆಯಲ್ಲಿ ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಎಂಟು ಜನ ಸದಸ್ಯರುಗಳಲ್ಲಿ ಐದು ಜನ ಸದಸ್ಯರು ಗೈರು ಹಾಜರಾಗಿದ್ದರಿಂದ ಇದಕ್ಕೆ ಅಗತ್ಯ ಬಹುಮತವೂ ಇರಲಿಲ್ಲ. ಇಂತಹ ಅನಧಿಕೃತ ಗುಂಪು ಚರ್ಚೆಯಲ್ಲಿ ಕ್ಷೇತ್ರದ ಆಡಳಿತ ಸಮಿತಿಗೆ ಬದಲಾಗಿ ಏಕಪಕ್ಷೀಯವಾಗಿ ನೂತನ ಸಮಿತಿಯ ಘೋಷಣೆ ಮಾಡಿರುವುದು ಕ್ಷೇತ್ರದ ಘನತೆಗೆ ಧಕ್ಕೆ ತರುವಂತಾಗಿತ್ತು.
ಆನಂತರ, ಆಡಳಿತ ಸಮಿತಿಯಲ್ಲಿದ್ದ ನಾವು ಐದು ಜನರು, ಕ್ಷೇತ್ರದಲ್ಲಿ ಅನಧಿಕೃತವಾಗಿ ಆಡಳಿತ ನಡೆಸುತ್ತಿದ್ದ ಸಮಿತಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದೆವು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಅಂತಿಮವಾಗಿ ನಮ್ಮ ಪರವಾಗಿ ಆದೇಶ ಬಂದಿರುವುದು ನ್ಯಾಯಕ್ಕೆ ದೊರೆತ ಮನ್ನಣೆಯಾಗಿದೆ. ಇದೀಗ 16.2.2026 ರಂದು ಶ್ರೀ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದ ವಠಾರದಲ್ಲಿರುವ ನಾರಾಯಣ ಗುರು ಕಾಲೇಜಿನ ಸಭಾಂಗಣದಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.) ವಾರ್ಷಿಕ ಪ್ರತಿನಿಧಿ ಸಭೆ ಜರುಗಿದ್ದು, ಆ ಸಭೆಯ ನಿರ್ಣಯದಂತೆ 50 ಜನ ಸದಸ್ಯರ ಎಕ್ಸಿಕ್ಯೂಟಿವ್ ಸಮಿತಿಯನ್ನು ರಚಿಸಿ ಅದರಲ್ಲಿ, ಎಚ್.ಎಸ್ ಸಾಯಿರಾಮ್, ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್, ಕೆ.ಟಿ ಸುವರ್ಣ, ಜಗದೀಪ್ ಸುವರ್ಣ, ರವಿಶಂಕರ್ ಮಿಜಾರ್, ಶೇಖರ್ ಪೂಜಾರಿ, ಎಚ್.ರತಿಂದ್ರನಾಥ, ಸದಾನಂದ ಪೂಜಾರಿ, ಮತ್ತು ಶರತ್ ಸುವರ್ಣ ಬಜ್ಪೆ ಎಂಬ ಒಟ್ಟು 9 ಜನರನ್ನು ಶ್ರೀ ಗೋಕರ್ಣನಾಥ ಕ್ಷೇತ್ರದ 2026-27 ನೇ ಸಾಲಿನ ಆಡಳಿತ ಸಮಿತಿಗೆ ಅಧಿಕೃತವಾಗಿ ಘೋಷಿಸಲಾಯಿತು.
ಇದರಂತೆ, ಅಧ್ಯಕ್ಷರಾಗಿ ಎಚ್.ಎಸ್ ಸಾಯಿರಾಮ್, ಉಪಾಧ್ಯಕ್ಷರಾಗಿ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್, ಕಾರ್ಯದರ್ಶಿಯಾಗಿ ರವಿಶಂಕರ್ ಮಿಜಾರ್, ಖಜಾಂಚಿ- ಶೇಖರ್ ಪೂಜಾರಿ, ಸದಸ್ಯರಾಗಿ ಜಗದೀಪ್ ಸುವರ್ಣ, ಕೆ.ಟಿ ಸುವರ್ಣ, ಎಚ್. ಎಚ್.ರತಿಂದ್ರನಾಥ, ಸದಾನಂದ ಪೂಜಾರಿ, ಮತ್ತು ಶರತ್ ಸುವರ್ಣ ಬಜ್ಪೆ ಅವರನ್ನು ಆಯ್ಕೆ ಮಾಡಲಾಗಿದೆ. ಅಖಿಲ ಭಾರತ ಬಿಲ್ಲವ ಯೂನಿಯನ್ ಮುಖಾಂತರ ಕ್ಷೇತ್ರದ ಆಡಳಿತಕ್ಕೆ ಹೊಸ ಸಮಿತಿ ಘೋಷಣೆಯಾಗಿದ್ದು, ಇದರ ಬೈಲಾ ಪ್ರಕಾರವೇ ಕ್ಷೇತ್ರವನ್ನು ಮುನ್ನಡೆಸಲು ಈ ಸಮಿತಿಯು ಅಧಿಕೃತವಾಗಿದೆ ಎಂದು ಈ ಮೂಲಕ ಸಮಾಜಕ್ಕೆ, ಶ್ರೀ ಕ್ಷೇತ್ರದ ಸರ್ವ ಭಕ್ತರಿಗೆ ಮನವರಿಕೆ ಮಾಡಲು ಬಯಸುತ್ತೇವೆ ಎಂದು ರವಿಶಂಕರ್ ಮಿಜಾರ್ ಮತ್ತು ಎಚ್.ಎಸ್ ಸಾಯಿರಾಂ ಮತ್ತಿತರರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm