ಬ್ರೇಕಿಂಗ್ ನ್ಯೂಸ್
13-05-26 12:39 pm HK News Staffer ಕ್ರೈಂ
ಉಳ್ಳಾಲ, ಮೇ 13: ಕುತ್ತಾರು ಜಂಕ್ಷನ್ ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣದ ವಿಚಾರದಲ್ಲಿ ಭದ್ರತಾ ಸಿಬ್ಬಂದಿಯನ್ನ ತಳ್ಳಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಘೇರಾವ್ ಹಾಕಿ ತರಾಟೆಗೈದ ಮದನಿ ನಗರದ ಜುನೈದ್ ಮತ್ತು ಆತನ ಹತ್ತು ಜನ ಸಹಚರರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಸ್ಪೀಕರ್ ಯು.ಟಿ.ಖಾದರ್ ಅವರ ಅಂಗ ರಕ್ಷಕ ಸಿಎಸ್ ಆರ್ ಘಟಕದ ಸಿಬ್ಬಂದಿ ಮೊಹಮ್ಮದ್ ಯಾಸೀನ್ ಇನಾಮದಾರ ನೀಡಿರುವ ದೂರಿನ ಆಧಾರದಡಿ ಉಳ್ಳಾಲ ಠಾಣೆಯಲ್ಲಿ ಹನ್ನೊಂದು ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ಮೇ 7 ರ ಗುರುವಾರ ರಾತ್ರಿ 10 ಗಂಟೆ ವೇಳೆ ಸ್ಪೀಕರ್ ಯು.ಟಿ.ಖಾದರ್ ಅವರು ಉಳ್ಳಾಲ ಮಾಸ್ತಿಕಟ್ಟೆಯ ರೆಸಾರ್ಟ್ ಒಂದರಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುವ ವೇಳೆ ಮದನಿ ನಗರದ ಜುನೈದ್ ಹಾಗೂ ಇತರ ಹತ್ತು ಮಂದಿ ಏಕಾಏಕಿ ಸ್ಪೀಕರ್ ಬಳಿ ಹೋಗುವಾಗ ಅಂಗರಕ್ಷಕರಾದ ಮೊಹಮ್ಮದ್ ಯಾಸೀನ ಅವರನ್ನು ತಡೆದಿದ್ದು , ಈಗಾಗಲೇ ಬಹಳ ತಡವಾಗಿದೆ ಎಂದು ಹೇಳಿ ಸ್ಪೀಕರ್ ಭೇಟಿಗೆ ಅವಕಾಶ ನಿರಾಕರಿಸಿದ್ದರು. ಈ ವೇಳೆ ಜುನೈದ್ ಹಾಗೂ ಸಹಚರರು ಅಂಗರಕ್ಷಕ ಯಾಸೀನ್ ಅವರನ್ನ ತಳ್ಳಿ ಮುನ್ನುಗ್ಗಿದ್ದು, ಸ್ಪೀಕರ್ ಖಾದರ್ ಅವರನ್ನ ಘೇರಾವ್ ಹಾಕಿ ಏರು ಧ್ವನಿಯಲ್ಲಿ ಕುತ್ತಾರು ಕೊರಗಜ್ಜನ ವೃತ್ತದ ವಿಚಾರದಲ್ಲಿ ತರಾಟೆಗೈದಿದ್ದಲ್ಲದೆ, ಅದರ ವೀಡಿಯೋವನ್ನು ಆಕ್ಷೇಪಾರ್ಹ ಬರಹಗಳೊಂದಿಗೆ ಜಾಲತಾಣಗಳಲ್ಲಿ ಹರಿಯಬಿಟ್ಟಿರುವುದಾಗಿ ಗನ್ ಮ್ಯಾನ್ ಮೊಹಮ್ಮದ್ ಯಾಸೀನ ಅವರು ತನ್ನ ಮೇಲಾಧಿಕಾರಿಗಳ ಸೂಚನೆಯಂತೆ ಮೇ 9 ರಂದು ತಡವಾಗಿ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ರಾಜ್ಯದ ವಿವಿಧ ಕಡೆಗಳಿಂದ ಬರುವ ಭಕ್ತಾಧಿಗಳಿಗೆ ಮಾಹಿತಿ ನೀಡುವುದಕ್ಕಾಗಿ ವರ್ಷಗಳ ಹಿಂದೆ ಕುತ್ತಾರು ಜಂಕ್ಷನ್ ನಲ್ಲಿ ಸ್ಥಳೀಯ ಬಜರಂಗದಳ ಸಂಘಟನೆಯು ಕೊರಗಜ್ಜನ ಮುಟ್ಟಾಳೆ ಹಾಗೂ ದಂಟೆಯ ಪ್ರತಿಕೃತಿಯುಳ್ಳ ಸಣ್ಣ ವೃತ್ತವೊಂದನ್ನ ನಿರ್ಮಿಸಿತ್ತು. ಇದೀಗ ಆ ಸಣ್ಣ ವೃತ್ತವನ್ನ ತೆರವುಗೊಳಿಸಿ ನಿಟ್ಟೆ ಪರಿಗಣಿತ ವಿವಿಯು ನೂತನ ವೃತ್ತವೊಂದನ್ನು ನಿರ್ಮಿಸುತ್ತಿದೆ. ಈ ಮಧ್ಯೆ ಕುತ್ತಾರಿನಲ್ಲಿ ಕೊರಗಜ್ಜನ ಹೆಸರಲ್ಲಿ ವೃತ್ತ ನಿರ್ಮಾಣವಾಗಬಾರದೆಂದು ಕುತ್ತಾರು ಮದನಿನಗರದ ಮುಸ್ಲಿಮರ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿ ಸ್ಪೀಕರ್ ಖಾದರ್ ಅವರನ್ನ ಘೇರಾವ್ ಮಾಡಿ ತರಾಟೆಗೈದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಸಂಚಲನ ಉಂಟು ಮಾಡಿದ್ದಲ್ಲದೆ, ಸ್ಪೀಕರ್ ಅವರ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆ ಹುಟ್ಟು ಹಾಕಿತ್ತು.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm