ಬ್ರೇಕಿಂಗ್ ನ್ಯೂಸ್
18-05-26 04:19 pm HK News Staffer ಕ್ರೈಂ
ಬೆಳಗಾವಿ, ಮೇ 18: ಬೆಳಗಾವಿ ಶಿವಂ ಅಸೋಸಿಯೇಟ್ಸ್ ಹೆಸರಲ್ಲಿ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಒಪ್ಪಿಸಿದ್ದು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಸಲ್ಲಿಸಿದ್ದ 150 ಪುಟಗಳ ವರದಿಯನ್ನಾಧರಿಸಿ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಸಿಐಡಿ ಡಿಐಜಿ ಡಾ.ಭೀಮಾಶಂಕರ ಗುಳೇದ ನೇತೃತ್ವದ ಪೊಲೀಸರು ಬೆಳಗಾವಿಗೆ ಆಗಮಿಸಿದ್ದಾರೆ.
ಶನಿವಾರ ರಾತ್ರಿ ಆರೋಪಿ ಶಿವಾನಂದ ನೀಲಣ್ಣವರನನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಉಪ ವಿಭಾಗಾಧಿಕಾರಿ ಶ್ರವಣ ನಾಯಕ 20 ಗಂಟೆ ಕಾಲ ಪರಿಶೀಲನೆ ನಡೆಸಿ, ಸಿದ್ಧಪಡಿಸಿರುವ 150 ಪುಟಗಳ ವರದಿಯೇ ತನಿಖೆಗೆ ಮುಖ್ಯ ಆಧಾರವಾಗಿದೆ. ಸಂಸ್ಥೆ ಆರಂಭದಿಂದ ಈವರೆಗೆ ಸಂಗ್ರಹವಾಗಿರುವ ಠೇವಣಿ, 35 ಸಾವಿರ ಜನರಿಂದ ಜಮೆ ಮಾಡಿಕೊಂಡಿರುವ ಮೊತ್ತ, ಅವರ ಹೂಡಿಕೆಗೆ ಪ್ರತಿಯಾಗಿ ಪ್ರತಿ ತಿಂಗಳು ನೀಡಿರುವ ಬಡ್ಡಿ, ಇದೇ ಹಣದಿಂದ ಸಂಪಾದಿಸಲಾಗಿರುವ ಚರಾಸ್ತಿ ಮತ್ತು ಸ್ಥಿರಾಸ್ತಿ, ಬ್ಯಾಂಕ್ ವಹಿವಾಟು, ವಿವಿಧೆಡೆ ಮಾಡಿರುವ ಹೂಡಿಕೆ, ಸಿಎಸ್‌ಆರ್ ಅಡಿ ಮಾಡಿರುವ ವೆಚ್ಚಗಳ ಸಮಗ್ರ ಮಾಹಿತಿಯನ್ನು ವರದಿಯಲ್ಲಿ ದಾಖಲಿಸಲಾಗಿದೆ.
ಬಹುಕೋಟಿ ವಂಚನೆ ಪ್ರಕರಣಗಳು ಬೆಳಗಾವಿಗೆ ಹೊಸದೇನಲ್ಲ. 18 ವರ್ಷಗಳ ಹಿಂದೆ ಸಾಯಿ ಮಲ್ಟಿ ಸ್ಕೀಮ್ (ಎಸ್‌ಎಂಎಸ್) ಹೆಸರಿನಲ್ಲಿ ಸಂಜಯ ಟೆಂಗಿನಕಾಯಿ ಎಂಬಾತ, ಠೇವಣಿ ಹಣಕ್ಕೆ ಮೂರು ವರ್ಷದ ವರೆಗೆ ತಿಂಗಳಿಗೆ ಶೇ.10ರ ಬಡ್ಡಿ ಅಮಿಷ ತೋರಿಸಿ ಹಣ ಹೂಡಿಕೆ ಮಾಡಿಸಿ ಮೋಸ ಮಾಡಿದ್ದ. ಮತ್ತೊಂದು ಪ್ರಕರಣದಲ್ಲಿ ಬೆಳಗಾವಿ, ಚಿಕ್ಕೋಡಿ, ಗೋಕಾಕ, ಬೈಲಹೊಂಗಲ ಭಾಗದಲ್ಲಿ ರೈತರಿಗೆ ಎಮು ಪಕ್ಷಿ ಮಾಂಸ, ಮೊಟ್ಟೆ, ಗರಿಗಳನ್ನು ಹೆಚ್ಚಿನ ಬೆಲೆಗೆ ತೆಗೆದುಕೊಳ್ಳುತ್ತೇವೆ ಎಂದು ನಂಬಿಸಿ, ರೈತರಿಗೆ ಮರಿಗಳನ್ನು ಮಾರಲಾಗಿತ್ತು. ಎಮು ಪಕ್ಷಿ ದೊಡ್ಡದಾಗಿ ಮೊಟ್ಟೆಯಿಡುವ ಹೊತ್ತಿಗೆ, ಮರಿ ಕೊಟ್ಟವರು ನಾಪತ್ತೆಯಾಗಿದ್ದರು.
ಬಹುಕೋಟಿ ವಂಚನೆ ಪ್ರಕರಣ ಅಂತಾರಾಜ್ಯ ವ್ಯಾಪ್ತಿ ಹೊಂದಿದ್ದು 50 ಕೋಟಿಗೂ ಹೆಚ್ಚಿನ ಅವ್ಯವಹಾರ ಆಗಿರುವುದರಿಂದ ಸಿಐಡಿಗೆ ನೀಡಲಾಗಿದೆ. ಈವರೆಗಿನ ತನಿಖಾ ಮಾಹಿತಿ ಹಾಗೂ ಜಪ್ತಿ ಮಾಡಿಕೊಂಡ ದಾಖಲೆಗಳನ್ನು ಸಿಐಡಿಗೆ ಹಸ್ತಾಂತರಿಸಿದ್ದೇವೆ ಎಂದು ಬೆಳಗಾವಿ ಎಸ್ಪಿ ಭೂಷಣ ಬೋರಸೆ ತಿಳಿಸಿದ್ದಾರೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm