ಬ್ರೇಕಿಂಗ್ ನ್ಯೂಸ್
22-05-26 09:21 pm HK News Staffer ಕ್ರೈಂ
ಮುಂಬೈ, ಮೇ 22: ನಾಸಿಕ್ ಟಿಸಿಎಸ್ ಕಂಪನಿಯ ಕಾರ್ಪೊರೇಟ್ ಜಿಹಾದ್ ಪ್ರಕರಣದಲ್ಲಿ ಪ್ರಮುಖ ಆರೋಪಿಯೆಂದು ಗುರುತಿಸಲ್ಪಟ್ಟಿದ್ದ ನಿದಾ ಖಾನ್ ಪೊಲೀಸರಿಂದ ತಪ್ಪಿಸಿಕೊಂಡು ಅಡಗಿದ್ದಳೆಂದು ಹೇಳಲಾಗಿದ್ದ ಕಟ್ಟಡವನ್ನು ಕೆಡವಿದ್ದು ಈಗ ಮುಂಬೈ ಮಹಾನಗರ ಪಾಲಿಕೆಯನ್ನು ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸಿದೆ. ಆರೋಪಿತ ವ್ಯಕ್ತಿಯ ಕಟ್ಟಡವಾಗಿರದೆ, ಬೇರೊಬ್ಬ ವ್ಯಕ್ತಿಗೆ ಸೇರಿದ ಕಟ್ಟಡವನ್ನು ಕೆಡವಿ ಪಾಲಿಕೆ ಪೇಚಿಗೆ ಸಿಲುಕಿದೆ.
ತನ್ನ ಮನೆಯನ್ನು ಕಳಕೊಂಡ ಹನೀಫ್ ಖಾನ್ ಎಂಬವರು ಮುಂಬೈ ಹೈಕೋರ್ಟಿನ ಔರಂಗಾಬಾದ್ ಪೀಠಕ್ಕೆ ದೂರು ಸಲ್ಲಿಸಿದ್ದು, ಮುಂಬೈ ಮಹಾನಗರ ಪಾಲಿಕೆಗೆ ನೋಟೀಸ್ ಜಾರಿಯಾಗಿದೆ. ಸರಿಯಾಗಿ ದಾಖಲೆ ನೋಡಿಕೊಳ್ಳದೆ ಕಟ್ಟಡ ಕೆಡವಿದ ಪಾಲಿಕೆಯ ಬೇಜವಾಬ್ದಾರಿಯನ್ನು ಪೀಠವು ತರಾಟೆಗೆತ್ತಿಕೊಂಡಿದೆ. ಮೇ 13ರಂದು ಛತ್ರಪತಿ ಸಂಭಾಜಿನಗರ್ ಏರಿಯಾದ ಕೌಸರ್ ಬಾಗ್ ನಲ್ಲಿ ಆರೋಪಿ ನಿದಾ ಖಾನ್ ವಾಸವಿದ್ದ ಖಾಸಗಿ ಕಟ್ಟಡವನ್ನು ಕೆಡವಿ ಹಾಕಲಾಗಿತ್ತು.
ಟಿಸಿಎಸ್ ಕಂಪನಿಯಲ್ಲಿ ಎಚ್ ಆರ್ ಆಗಿದ್ದುಕೊಂಡು ಜಿಹಾದ್ ಅಕ್ರಮಕ್ಕೆ ಹಾದಿ ಮಾಡಿಕೊಟ್ಟಿದ್ದಾಳೆಂಬ ಆರೋಪ ಹೊತ್ತಿರುವ ನಿದಾ ಖಾನ್, ಎಐಎಂಎಂ ಪಕ್ಷದ ಕಾರ್ಪೋರೇಟರ್ ಮತೀನ್ ಪಟೇಲ್ ಎಂಬವರಿಗೆ ಸೇರಿದ್ದ ಮನೆಯಲ್ಲಿ ಅಡಗಿಕೊಂಡಿದ್ದಳು ಎನ್ನಲಾಗಿತ್ತು. ಹೀಗಾಗಿ ಮುಂಬೈ ಪಾಲಿಕೆ ಅಧಿಕಾರಿಗಳು ಆ ಕಟ್ಟಡವನ್ನು ಕೆಡವಲು ಮುಂದಾಗಿದ್ದರು. ಆದರೆ ಪಾಲಿಕೆಯ ಸಿಬಂದಿ ಹನೀಫ್ ಖಾನ್ ಎಂಬವರಿಗೆ ಸೇರಿದ ಕಟ್ಟಡವನ್ನು ಕೆಡವಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಕೋರ್ಟಿನಲ್ಲಿ ದೂರು ದಾಖಲಾಗಿದೆ.

ಹನೀಫ್ ಖಾನ್ ಸಣ್ಣ ಮಟ್ಟದ ಕಂಟ್ರಾಕ್ಟರ್ ಆಗಿದ್ದು ತಾನು ದುಡಿದ ಹಣದಲ್ಲಿ 600 ಚದರಡಿಯ ಸಣ್ಣ ಮನೆಯನ್ನು ಖರೀದಿಸಿದ್ದರು. ಎರಡು ತಿಂಗಳ ಹಿಂದೆ ಭಾವನೊಂದಿಗೆ ಸೇರಿ 27 ಲಕ್ಷ ಹಣ ಕೊಟ್ಟು ಮನೆಯನ್ನು ಖರೀದಿಸಿದ್ದು ಇದೇ ಮಾರ್ಚ್ 12ರಂದು ಸೇಲ್ ಡೀಡ್ ಮಾಡಲಾಗಿತ್ತು. ಈಗ ಅದೇ ಮನೆಯನ್ನು ಕೆಡವಿದ್ದು ಆಘಾತವಾಗಿದೆ. ನಮ್ಮ ದುಡಿದ ಹಣವನ್ನೆಲ್ಲ ಅದಕ್ಕೆ ಹಾಕಿದ್ದೆವು. ಬಾಡಿಗೆ ಮನೆಯಲ್ಲಿರುವ ನಾವು ಕಡೆಗೂ ಸ್ವಂತ ಮನೆಗೆ ತೆರಳುವ ಸಿದ್ಧತೆಯಲ್ಲಿದ್ದೆವು. ಸ್ವಲ್ಪ ನವೀಕರಣ ಮಾಡಿದ ನಂತರ ಶಿಫ್ಟ್ ಆಗುವುದರಲ್ಲಿದ್ದೆವು ಎಂದು ಹನೀಫ್ ಖಾನ್, ಕೋರ್ಟಿಗೆ ತಿಳಿಸಿದ್ದಾರೆ.
ಮತೀನ್ ಪಟೇಲ್ ಈ ಭಾಗದ ಕಾರ್ಪೊರೇಟರ್ ಆಗಿದ್ದು ತನಗೂ ಗೆಳೆಯನಾಗಿದ್ದರಿಂದ ಇತ್ತೀಚೆಗೆ ಕೆಲವು ತನ್ನ ಅತಿಥಿಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕೆಂದು ಕೇಳಿಕೊಂಡಿದ್ದ. ಅದಕ್ಕಾಗಿ ತನ್ನ ಈ ಮನೆಯನ್ನು ಅವರಿಗೆ ಉಳಿಯಲು ಕೊಟ್ಟಿದ್ದೆ. ಆದರೆ ಅದೇ ಸ್ಥಳದಿಂದ ನಿದಾ ಖಾನ್ ಳನ್ನು ಪೊಲೀಸರು ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ. ಆಕೆಗೂ ನನಗೂ ಏನೂ ಸಂಬಂಧ ಇಲ್ಲ ಎಂದು ಹನೀಫ್ ಖಾನ್ ಹೇಳಿದ್ದಾರೆ.
ಮೇ 8ರಂದು ನಿದಾ ಖಾನ್ ಬಂಧನ ಆಗಿದ್ದು, ಅದರ ಬೆನ್ನಲ್ಲೇ ಸದ್ರಿ ಕಟ್ಟಡ ಅಕ್ರಮವಾಗಿದ್ದು ಸರಿಯಾದ ದಾಖಲೆಗಳನ್ನು ಹೊಂದಿಲ್ಲ ಎಂದು ಪಾಲಿಕೆಯವರು ನೋಟೀಸ್ ಜಾರಿ ಮಾಡಿದ್ದರು. ಅದರಲ್ಲಿ ಕಟ್ಟಡದ ಮಾಲೀಕ ಮತೀನ್ ಶೇಖ್ ಎಂದು ನಮೂದಿಸಿದ್ದರು. ಕೇವಲ ಮೂರು ದಿನಗಳಲ್ಲಿ ಮನೆಗೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸುವಂತೆ ಕೇಳಿದ್ದರು. ನಾವು ಕನಿಷ್ಠ 15 ದಿನ ಬೇಕು ಎಂದು ಕೇಳಿಕೊಂಡಿದ್ದೆವು ಎಂದು ಹನೀಫ್ ಖಾನ್ ತಿಳಿಸಿದ್ದಾರೆ. ಆದರೆ ಇದೇ ವೇಳೆ, ಹನೀಫ್ ಖಾನ್ ಮತ್ತು ಮತೀನ್ ಪಟೇಲ್ ಹೈಕೋರ್ಟ್ ಕದ ತಟ್ಟಿದ್ದು, ಕಟ್ಟಡ ಕೆಡವುದರ ವಿರುದ್ಧ ತಡೆಯಾಜ್ಞೆ ತಂದಿದ್ದರು. ಅಲ್ಲದೆ, ತಕ್ಷಣವೇ ಕಟ್ಟಡ ತೆರವು ಮಾಡದಂತೆ ಕೋರ್ಟ್ ಹೇಳಿತ್ತು. ಇದರ ನಡುವೆಯೇ ಪಾಲಿಕೆ ಅಧಿಕಾರಿಗಳು ಕೋರ್ಟ್ ಸೂಚನೆ ಅನುಸರಿಸದೆ ಒಂದು ದಿನದ ಗಡುವಿನ ನೋಟೀಸ್ ಕೊಟ್ಟು ಏಕಾಏಕಿ ಕಟ್ಟಡ ಕೆಡವಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm