ಬ್ರೇಕಿಂಗ್ ನ್ಯೂಸ್
04-06-26 09:41 pm HK News Staffer ಕ್ರೈಂ
ಮಂಗಳೂರು, ಜೂ.4 : ಅಕ್ರಮ ಗೋಹತ್ಯೆ ವಿಚಾರದಲ್ಲಿ ಹಿಂದು ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಮತ್ತು ಮಂಗಳೂರಿನ ಫರಂಗಿಪೇಟೆಯ ವ್ಯಕ್ತಿಯೊಬ್ಬನ ನಡುವೆ ಪರಸ್ಪರ ಬೈಗುಳ, ಬೆದರಿಕೆಯ ವಾಗ್ವಾದ ನಡೆದಿದ್ದು ಇದರ ಆಡಿಯೋ ಸಂಭಾಷಣೆ ವೈರಲ್ ಆಗಿ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪುನೀತ್ ಕೆರೆಹಳ್ಳಿ ಹಾಗೂ ಪರಂಗಿಪೇಟೆ ಮೂಲದ ಮುಸ್ಲಿಂ ಯುವಕನ ನಡುವೆ ತೀವ್ರ ವಾಗ್ವಾದ ನಡೆದಿದ್ದು ಇಬ್ಬರೂ ಪರಸ್ಪರ ಸವಾಲು ಹಾಕುತ್ತಾ ಪ್ರಚೋದನಾತ್ಮಕ ಹಾಗೂ ಬೆದರಿಕೆ ಮಾತುಗಳನ್ನು ಆಡಿದ್ದಾರೆ.
ಆಡಿಯೋದಲ್ಲಿ ಫರಂಗಿಪೇಟೆಯ ವ್ಯಕ್ತಿ, "50 ಲಕ್ಷ ರೂಪಾಯಿಗೆ ನಿನ್ನ ಮರ್ಡರ್ ಮಾಡ್ತೀನಿ", "ನಿನಗೆ ತುಂಬಾ ದಿನ ಆಯಸ್ಸಿಲ್ಲ", "ಬೆಂಗಳೂರಿನಲ್ಲೇ ನಿನ್ನನ್ನು ಕೊಲೆ ಮಾಡುತ್ತೇನೆ", "ಓಪನ್ ಚಾಲೆಂಜ್ ಮಾಡ್ತೀನಿ" ಎಂದು ಪುನೀತ್ ಕೆರೆಹಳ್ಳಿಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ, "ನಿನ್ನನ್ನು ಯಾರೂ ಗುರುತಿಸಲಾಗದ ರೀತಿಯಲ್ಲಿ ಕೊಲೆ ಮಾಡಿ ಮುಗಿಸ್ತೀವಿ" ಎಂಬ ಗಂಭೀರ ಬೆದರಿಕೆಯನ್ನೂ ಹಾಕಿರುವುದು ಆಡಿಯೋದಲ್ಲಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಪುನೀತ್, "ಎಷ್ಟು ಲಕ್ಷಕ್ಕೆ ಬೇಕಾದರೂ ಕೊಲೆ ಮಾಡು", "ಗಂಡಸಾಗಿದ್ರೆ ಬೆಂಗಳೂರಿಗೆ ಬಾ", "ನಿಮ್ಮ ತಾಕತ್ತು ಸೋಶಿಯಲ್ ಮೀಡಿಯಾ ಮತ್ತು ಮೊಬೈಲ್ನಲ್ಲಿ ಬೇಡ" ಎಂದು ಸವಾಲು ಹಾಕಿರುವುದು ಆಡಿಯೋದಲ್ಲಿ ಇದೆ. ಸಂಭಾಷಣೆಯ ವೇಳೆ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಉಲ್ಲೇಖಗಳೂ ಕೇಳಿಬಂದಿದ್ದು, " ಮುಸ್ಲಿಮರ ಜೊತೆ ಆಟವಾಡಿದ್ದೀಯಾ? ನಿಂಗೆ ಬೀಫ್ ಸುಕ್ಕ ಬೇಕಾ? ಎಂಬ ಪ್ರಶ್ನೆಗೆ "ಹಂದಿ ಕಬಾಬ್ ಮಾಡಿಕೊಡ್ತೀನಿ ತಿನ್ನುತ್ತೀಯಾ", "ಹಂದಿ ಪಾರ್ಸೆಲ್ ಕಳಿಸ್ತೀನಿ ಬೇಕಾ? ಎಂದು ಇಬ್ಬರ ಪ್ರಚೋದನಾತ್ಮಕ ಮಾತುಗಳು ವಿವಾದಕ್ಕೆ ಕಾರಣವಾಗಿವೆ.
ಮಂಗಳೂರಿಗೆ ಬಂದು ಒಂದೇ ಒಂದು ದನ ಸಾಗಿಸುವ ಗಾಡಿ ಮುಟ್ಟಿ ನೋಡು ಎಂದು ಹೇಳಿದ್ದಕ್ಕೆ, ಹೇಯ್, ಕೇರಳದ ಲಾಡ್ಜ್ನಲ್ಲಿ ಕುಳಿತು ಮಾತನಾಡಬೇಡ, ಮುಂದೆ ಬಾ, ತಾಕತ್ತಿದ್ದರೆ ಎದುರಿಗೆ ಬಾ" ಎಂಬ ನೇರಾನೇರ ಸವಾಲುಗಳು ಆಡಿಯೋದಲ್ಲಿ ಕೇಳಿಬಂದಿವೆ.
ಇತ್ತೀಚೆಗೆ ಪುನೀತ್ ಕೆರೆಹಳ್ಳಿ ಹಾಗೂ ಕಾರ್ಯಕರ್ತರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಎಂಬಲ್ಲಿ ಅಕ್ರಮ ಗೋಹತ್ಯೆ ನಡೆಯುತ್ತಿದ್ದ ಕೇಂದ್ರವೊಂದನ್ನು ಪತ್ತೆಹಚ್ಚಿ ದಾಳಿ ಮಾಡಿದ್ದರು. ಇದರ ಬಳಿಕ ಪುನೀತ್ ಗೆ ನಿರಂತ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗಿದೆ. ಪುನೀತ್ ವಿರುದ್ಧ ಕೊಲೆ ಸಂಚು ರೂಪಿಸಲಾಗುತ್ತಿದೆ ಎಂಬ ಆರೋಪಗಳೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm