ಬ್ರೇಕಿಂಗ್ ನ್ಯೂಸ್
09-07-26 07:52 pm HK News Staffer ಕ್ರೈಂ
ಶಿವಮೊಗ್ಗ, ಜುಲೈ 09: ದಟ್ಟ ಕಾಡಿನಲ್ಲಿ ಸೂಟ್ಕೇಸಿನಲ್ಲೇ ಮಣ್ಣಾಗಿದ್ಲು ಯುವತಿ. ರಹಸ್ಯವಾಗೇ ಉಳಿದಿದ್ದ ಕತೆ ವರ್ಷದ ಬಳಿಕ ತೆರೆದುಕೊಂಡಿದೆ. ಇದಕ್ಕೆ ಕಾರಣವಾಗಿದ್ದು ಸ್ನೇಹಿತರ ನಡುವಿನ ಒಂದು ಸಣ್ಣ ಜಗಳ. ಹೌದು, ವರ್ಷ ಕಳೆದರೂ ಹುದುಗಿ ಹೋಗಿದ್ದ ಕರಾಳ ಸತ್ಯವನ್ನು ಶಿವಮೊಗ್ಗ ಪೊಲೀಸರು ಕಡೆಗೂ ಬಯಲಿಗೆಳೆದಿದ್ದು ಪಿಜಿಯಲ್ಲಿದ್ದ ನಾಲ್ವರನ್ನು ಬಲೆಗೆ ಕೆಡವಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿದ್ದ 16 ವರ್ಷದ ಬಾಲಕಿಯ ಶವವನ್ನು ಹೂತು ಹಾಕಿದ್ದ ಪ್ರಕರಣದಲ್ಲಿ ಶಿಕಾರಿಪುರ ಟೌನ್ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ, ಪಿಜಿ ನಡೆಸುತ್ತಿದ್ದ ಸೌಭಾಗ್ಯ, ಆಕೆಯ ಪತಿ ಗಂಗಾನಾಯ್ಕ್ , ರಂಜಿತಾ ಹಾಗೂ ಆಕೆಯ ಸ್ನೇಹಿತ ಪಿರ್ಯಾನಾಯ್ಕ್ ಎಂಬವರನ್ನು ಬಂಧಿಸಿದ್ದಾರೆ.
ಜುಲೈ 3 ರಂದು ಶಿಕಾರಿಪುರ ತಾಲೂಕು ತರಲಘಟ್ಟದ ನಿವಾಸಿ ಪರಮೇಶ್ ಎಂಬವರು ತನ್ನ ಮಗಳು ಸಂಗೀತಾ 2025ರ ಜೂನ್ 18ರಿಂದ ಕಾಣೆಯಾಗಿದ್ದಾಳೆ ಎಂದು ಶಿಕಾರಿಪುರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಮುಚ್ಚಿ ಹೋಗಿದ್ದ ಸಾವಿನ ಕತೆ ತೆರೆದುಕೊಂಡಿದೆ. ಶಿಕಾರಿಪುರದಲ್ಲಿ ಸೌಭಾಗ್ಯ ಎಂಬಾಕೆ ಪಿಜಿ ಮತ್ತು ಅದೇ ಕಟ್ಟಡದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ಪರಮೇಶ್ವರ್ ಪುತ್ರಿ ಸಂಗೀತಾ ಅದೇ ಪಿಜಿಯಲ್ಲಿದ್ದು, ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡಿಕೊಂಡಿದ್ದಳು. ರಂಜಿತಾ ಎಂಬ ಮಹಿಳೆ ಸಂಗೀತಾಳನ್ನು ಈ ಪಿಜಿಗೆ ತಂದು ಸೇರಿಸಿದ್ದಳು.
ಈ ನಡುವೆ ಸಂಗೀತಾ, ರಂಜಿತಾ ಹಾಗೂ ಸೌಭಾಗ್ಯ ಬಗ್ಗೆ ಚಾಡಿ ಹೇಳಿದ್ದರಿಂದ ಇಬ್ಬರ ನಡುವೆ ಜಗಳ ಉಂಟಾಗಿತ್ತು. ನಂತರ ಸೌಭಾಗ್ಯ, ಗಂಗಾ ನಾಯ್ಕ್, ರಂಜಿತಾ ಹಾಗೂ ಪಿರ್ಯಾನಾಯ್ಕ್ ಸೇರಿ ಸಂಗೀತಾಳನ್ನು ಕರೆದು ಬೈಯ್ದು ಬುದ್ಧಿ ಹೇಳಿದ್ದರು. ಇದರಿಂದ ಬೇಸರಗೊಂಡ ಸಂಗೀತಾ ತಾನಿದ್ದ ಪಿಜಿಯ ರೂಂನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದರಿಂದ ನಾಲ್ವರು ಭಯಗೊಂಡು ಆಕೆಯ ಶವವನ್ನು ಸೂಟ್ಕೇಸ್ನಲ್ಲಿ ಮುಚ್ಚಿಕೊಂಡು ಶಿರಸಿಯ ಸಿದ್ದಾಪುರ ಠಾಣೆ ವ್ಯಾಪ್ತಿಯ ಕಾಡಿಗೆ ಒಯ್ದು ಹೂತು ಹಾಕಿದ್ದರು.
ಇದನ್ನು ನಾಲ್ವರು ಯಾರಿಗೂ ಹೇಳದೆ ಮುಚ್ಚಿಟ್ಟಿದ್ದರು. ಒಂದು ವರ್ಷದ ಬಳಿಕ, ಕಳೆದ ಜೂನ್ ತಿಂಗಳಲ್ಲಿ ರಂಜಿತಾ ಹಾಗೂ ಪಿರ್ಯಾನಾಯ್ಕ್ ನಡುವೆ ಜಗಳ ನಡೆದಿತ್ತು. ಇದರಿಂದ ಕೋಪಗೊಂಡ ರಂಜಿತಾ, ಸಂಗೀತಾ ಸಾವಿನ ಕತೆಯನ್ನು ಆಕೆಯ ತಂದೆ ಪರಮೇಶ್ವರ ಬಳಿ ಹೇಳಿದ್ದಳು. ಇದರಿಂದ ಪರಮೇಶ್ವರ ನಾಯ್ಕ್ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ತನಿಖೆ ನಡೆಸಿದಾಗ ನಾಲ್ವರ ಕೃತ್ಯ ಬಯಲಿಗೆ ಬಂದಿದೆ.
ಈ ಬಗ್ಗೆ ಶಿವಮೊಗ್ಗ ಎಸ್ಪಿ ನಿಖಿಲ್ ಪ್ರತಿಕ್ರಿಯಿಸಿ, ಶಿಕಾರಿಪುರ ನಗರ ಪೊಲೀಸ್ ಠಾಣೆಯಲ್ಲಿ 2026ರ ಜುಲೈ 3 ರಂದು ಸಂಗೀತಾ ಎಂಬ 16 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ ಎಂದು ಬಾಲಕಿಯ ತಂದೆ ದೂರು ನೀಡಿದ್ದರು. ಈಕೆ 2025ರ ಜೂನ್ 18 ರಿಂದ ಕಾಣೆಯಾಗಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಾಲಕಿ 2025ರ ಜೂನ್ 18 ರಂದು ತಾನು ಇದ್ದ ಪಿಜಿಯಲ್ಲೇ ನೇಣಿಗೆ ಶರಣಾಗಿದ್ದಳು ಎಂಬ ವಿಚಾರ ತನಿಖೆಯಿಂದ ತಿಳಿದುಬಂದಿದೆ. ಆದರೆ, ಈ ವಿಚಾರವನ್ನು ಯಾರಿಗೂ ತಿಳಿಸದೇ ಪಿಜಿ ಮಾಲಕಿ ಸೌಭಾಗ್ಯ ಆಕೆಯ ಪತಿ ಗಂಗಾನಾಯ್ಕ್, ರಂಜಿತಾ ಹಾಗೂ ಪಿರ್ಯಾನಾಯ್ಕ್ ಸೇರಿ ಬಾಲಕಿ ಶವವನ್ನು ಸೂಟ್ಕೇಸ್ನಲ್ಲಿ ತೆಗೆದುಕೊಂಡು ಹೋಗಿ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಾವಿನ ಗುಂಡಿಯಲ್ಲಿ ಹೂತು ಹಾಕಿದ್ದರು ಎಂದು ತಿಳಿಸಿದ್ದಾರೆ.
ಆಗಿರುವ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಅವರೇ ಮಾತನಾಡಿಕೊಂಡು ಒಂದು ವರ್ಷದ ತನಕ ಬಾಯಿ ಬಿಟ್ಟಿರಲಿಲ್ಲ. ತನಿಖೆ ಮುಂದುವರೆಸಿದಾಗ ಆಕೆ ಫೋನ್ನಲ್ಲಿ ಕಳೆದ 1 ವರ್ಷದಿಂದ ಮಾತನಾಡಿರುವುದಿಲ್ಲ. ಕೊನೆಯದಾಗಿ ರಂಜಿತಾ ಜೊತೆ ಮಾತನಾಡಿರುವುದು ಕಂಡುಬಂದಿದೆ. ತನಿಖೆ ಮುಂದುವರಿಸಿದಾಗ, ರಂಜಿತಾ, ಸೌಭಾಗ್ಯ, ಗಂಗನಾಯ್ಕ್ ಹಾಗೂ ಪಿರ್ಯಾ ನಾಯ್ಕ್ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಸಾವನ್ನಪ್ಪಿರುವ ಬಾಲಕಿಯು ಸೌಭಾಗ್ಯ ಹಾಗೂ ರಂಜಿತಾ ನಡುವೆ ಚಾಡಿ ಹೇಳಿದ್ದಳು. ಇದರಿಂದ ಬಾಲಕಿಯನ್ನು ಪಿಜಿ ಕೆಳಗೆ ಬ್ಯೂಟಿ ಪಾರ್ಲರ್ಗೆ ಕರೆದು ಸೌಭಾಗ್ಯ, ರಂಜಿತಾ ಹಾಗೂ ಪಿರ್ಯಾನಾಯ್ಕ್ ಮಾತನಾಡಿದಾಗ ಮಾತಿನ ಚಕಮಕಿ ನಡೆದಿದೆ. ಇದರಿಂದ ಆಕೆ ಬೇಸರಗೊಂಡು ನೇಣಿಗೆ ಶರಣಾಗಿದ್ದಾಳೆ. ಆಕೆಯ ಶವವನ್ನು ನಾಲ್ವರು ಸೇರಿ ಸೂಟ್ಕೇಸ್ನಲ್ಲಿ ಹಾಕಿ ಕಾರಿನಲ್ಲಿ ತೆಗೆದುಕೊಂಡು ಹೋಗಿ ಮಾವಿನ ಗುಂಡಿಯ ಅರಣ್ಯದಲ್ಲಿ ಹೂತು ಹಾಕಿದ್ದಾರೆ. ವಿಚಾರಣೆಯಲ್ಲಿ ಎಲ್ಲರೂ ಸತ್ಯ ಬಾಯ್ಬಿಟ್ಟಿದ್ದಾರೆ. ಶವ ಹೂತ ಜಾಗವನ್ನು ತೋರಿಸಿದ್ದು, ಶವವನ್ನು ಹೊರ ತೆಗೆದಾಗ ಆಕೆಯ ತಲೆ ಬುರುಡೆ ಹಾಗೂ ಮೂಳೆಗಳು ಸೂಟ್ಕೇಸ್ನಲ್ಲಿ ಪತ್ತೆಯಾಗಿದೆ ಎಂದರು.
ಮೃತ ಬಾಲಕಿಯ ತಂದೆ ಪರಮೇಶ್ ಮಾತನಾಡಿ, ನಮ್ಮ ಮನೆ ಬಿದ್ದಿದ್ದ ಕಾರಣಕ್ಕೆ ನಾನು ಹಾಗೂ ಮಗಳು ನಮ್ಮ ತಂಗಿ ಮನೆಯಲ್ಲಿದ್ದೆವು. ಆಗ ನಾಗರಾಜ್, ಉಮ್ಮಕ್ಕ, ಪರಮೇಶ್ ರವರು ನನ್ನ ಬಳಿ ಬಂದು ನಮ್ಮ ಅಕ್ಕನ ಪಿಜಿ ಶಿಕಾರಿಪುರದಲ್ಲಿದೆ. ಅಲ್ಲಿ ಇರ್ತಾಳೆ ಎಂದು ಕರೆದುಕೊಂಡು ಹೋದರು. ಅವರು ನನ್ನ ಆರೋಗ್ಯ, ಮನೆ ಖರ್ಚು ಎಲ್ಲವನ್ನು ನೋಡಿಕೊಳ್ಳುತ್ತೇವೆ ಎಂದು ಕರೆದುಕೊಂಡು ಹೋಗಿದ್ದರು. ನಂತರ ನನ್ನ ಮಗಳು ಎಲ್ಲಿ ಎಂದು ಪಿಜಿ ಬಳಿ ಹೋಗಿ ಕೇಳಿದಾಗ ಅವರು ನಿನ್ನ ಮಗಳು ಯಾರೊಂದಿಗೋ ಓಡಿ ಹೋಗಿದ್ದಾಳೆ ಎಂದಿದ್ದರು. ಇದನ್ನು ನನಗೆ ಯಾಕೆ ತಿಳಿಸಲಿಲ್ಲ ಎಂದು ಕೇಳಿದೆ. ಅವರಿಗೆ ಪೋನ್ ಮಾಡಿದಾಗಲೆಲ್ಲಾ ಬೆಂಗಳೂರಿನಲ್ಲಿರುವುದಾಗಿ ಎಂದು ಹೇಳಿ ಮುಚ್ಚಿಡುತ್ತಿದ್ದರು. ನನ್ನ ಮಗಳ ಸಾವಿಗೆ ನ್ಯಾಯಬೇಕು ಎಂದು ಮನವಿ ಮಾಡಿದರು.
25-09-26 04:49 pm
HK News Staffer
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
26-09-26 08:05 pm
HK News Staffer
ಸೌಜನ್ಯ ಪ್ರಕರಣದ ಮರು ತನಿಖೆ ; ಹಿಂದಿನ ತನಿಖಾ ಲೋಪಗಳ...
26-09-26 03:35 pm
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ವಿಚಾರಣೆ ; ಪ...
26-09-26 11:04 am
ಮೈಸೂರು ದಸರಾಕ್ಕೆ ಕರಾವಳಿಯ ಕಂಬಳದ ಮೆರುಗು ; ಅ.18-1...
25-09-26 07:31 pm
ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಬಿಗ್...
25-09-26 07:05 pm
25-09-26 04:53 pm
HK News Staffer
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am
ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್ ; ಸೀನಿಯರ್ ಗುಂ...
25-09-26 08:57 am
ಪ್ರೀತಿ ನೆಪದಲ್ಲಿ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌ...
24-09-26 05:10 pm