ಬ್ರೇಕಿಂಗ್ ನ್ಯೂಸ್
25-09-26 04:49 pm HK News Staffer ಕರ್ನಾಟಕ
ಬೆಂಗಳೂರು, ಸೆ.25: ವಿಧಾನಸಭೆಯ ಕಲಾಪದಲ್ಲಿ ರಾಜ್ಯದ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ, ಬೆಂಗಳೂರು ನಗರದ ಬೆಳವಣಿಗೆ, ಜನಸಂಖ್ಯೆ ಬಗ್ಗೆ ಮಾತನಾಡುವ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಾಸಕರ ವೈಯಕ್ತಿಕ ಬದುಕಿನ ಕುರಿತು ನೀಡಿರುವ ಸ್ಫೋಟಕ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿಗೆ ಬಂದವರು, ಇಲ್ಲಿ ನೆಲೆ ನಿಂತವರು ಇಲ್ಲಿನ ಜನಸಂಖ್ಯೆ, ಟ್ರಾಫಿಕ್ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ, ಆದರೆ ಬೆಂಗಳೂರು ಬಿಟ್ಟು ಹೋಗುವುದಿಲ್ಲ, ಅಷ್ಟೇ ಏಕೆ ಬೆಂಗಳೂರಿಗೆ ಬಂದು ನೆಲೆಸಿದ ಬೇರೆ ಜಿಲ್ಲೆಗಳ ಹಲವು ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಗಮನ ಸೆಳೆದರು. ಬೆಂಗಳೂರು ನಗರ ಬೆಳೆಯುತ್ತಿರುವ ವೇಗ ಹಾಗೂ ಇಲ್ಲಿನ ಜಲ ಮತ್ತು ವಾತಾವರಣದ ಪ್ರಭಾವದ ಕುರಿತು ಮಾತನಾಡುತ್ತ ಶಿವಕುಮಾರ್ ಈ ವಿಚಾರವನ್ನು ವಿಧಾನಸಭೆಯಲ್ಲಿ ಹೇಳಿದರು.
ವಿಧಾನಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, 'ಒಮ್ಮೆ ಬೆಂಗಳೂರಿಗೆ ಬಂದವರು ಯಾರೂ ವಾಪಸ್ ತಮ್ಮ ಊರುಗಳಿಗೆ ಹೋಗುವುದೇ ಇಲ್ಲ. ಲಾಯರ್ ಗಳಂತೂ ವಾಪಸ್ ಹೋಗಲ್ಲ, ಇಲ್ಲಿನ ಕಾವೇರಿ ನೀರು ಹಾಗೂ ಇಲ್ಲಿನ ಹವಾಮಾನವೇ ಹಾಗಿದೆ. ಬೆಂಗಳೂರಿನ ಜನಸಂಖ್ಯೆ ಹಿಂದೆ ಶೇ. 35 ರಷ್ಟಿತ್ತು, ಈಗ ಶೇ. 47 ಕ್ಕೆ ಏರಿಕೆಯಾಗಿದೆ.
ರಾಜಕೀಯಕ್ಕಾಗಿ ಬೆಂಗಳೂರಿಗೆ ಬಂದ ಶಾಸಕರು ಕೂಡ ಆಮೇಲೆ ಈ ನಗರವನ್ನು ಬಿಟ್ಟು ಎಲ್ಲೂ ಹೋಗುತ್ತಿಲ್ಲ. ಬೆಂಗಳೂರಿಗೆ ಬಂದ ಶಾಸಕರೆಲ್ಲರೂ ಎರಡೆರಡು ಮದುವೆಯಾಗಿದ್ದಾರೆ! ನನ್ನ ಬಳಿ ಅಂತಹ ಡಜನ್‌ಗಟ್ಟಲೆ ಶಾಸಕರ ಸಂಪೂರ್ಣ ಲಿಸ್ಟ್ ಇದೆ. ಅದನ್ನೆಲ್ಲ ಇಲ್ಲಿ ಹೇಳೋಕೆ ಹೋಗಲ್ಲ, ಧಾರವಾಡ, ಕಾರವಾರ, ದಕ್ಷಿಣ ಕನ್ನಡ ಸೇರಿದಂತೆ ಎಲ್ಲಾ ಜಿಲ್ಲೆಗಳಿಂದ ಬಂದವರ ಹಿಸ್ಟರಿಯನ್ನೂ ನಾನು ಹೇಳಬಲ್ಲೆ. ಆದರೆ ಈಗ ಆ ಇತಿಹಾಸವನ್ನೆಲ್ಲಾ ಬಿಚ್ಚಿಡುವುದು ಬೇಡ ಎಂದರು.
ಡಿ.ಕೆ. ಶಿವಕುಮಾರ್ ಅವರ ಈ 'ಎರಡು ಮದುವೆ' ಹೇಳಿಕೆ ಬರುತ್ತಿದ್ದಂತೆ ಶಾಸಕ ಬಿ.ಪಿ. ಹರೀಶ್ ತಕ್ಷಣವೇ ಮಧ್ಯಪ್ರವೇಶಿಸಿ ಕಾಲೆಳೆದರು. "ಸರ್ ಅದೇನೋ ಎರಡು- ಮೂರು ಮದುವೆ ಅಂತ ಹೇಳ್ತಿದ್ದೀರಲ್ಲ, ಯಾರದ್ದು ಸರ್ ಅದು? ಅವರ ಎರಡು-ಮೂರು ಮದುವೆಯ ಕಥೆ ನಿಮಗೆ ಹೇಗೆ ಗೊತ್ತು ಸರ್? ಅದನ್ನು ಹುಡುಕಿಕೊಂಡು ಹೊರಟಿದ್ದೀರಲ್ಲ, ಅದನ್ನು ನೋಡಿದರೆ ನೀವು ಎಂತಾ ಮಹಾನ್ ಕಲಾವಿದ ಇರಬೇಕು ಸರ್!" ಎಂದು ತಮಾಷೆಯಾಗಿ ಹೇಳಿದರು.
ಶಾಸಕ ಹರೀಶ್ ಅವರ ಈ ಹಾಸ್ಯದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, "ಅದೆಲ್ಲಾ ಈಗ ಬೇಡ ಬಿಡಿ, ವೈಯಕ್ತಿಕ ವಿಷಯಗಳನ್ನು ಸದನದಲ್ಲಿ ಚರ್ಚಿಸುವುದು ಬೇಡ. ಅದನ್ನೆಲ್ಲಾ ಆಮೇಲೆ ಪರ್ಸನಲ್ ಆಗಿ ಕುಳಿತು ಮಾತನಾಡೋಣ," ಎಂದು ನಗುತ್ತಾ ವಿಷಯಕ್ಕೆ ತೆರೆ ಎಳೆದರು.
Karnataka Deputy Chief Minister D.K. Shivakumar's remarks about the personal lives of some MLAs during a discussion on Bengaluru's growth and population in the Legislative Assembly have triggered discussion.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm