ಬ್ರೇಕಿಂಗ್ ನ್ಯೂಸ್
15-07-26 07:02 pm HK News Staffer ಕ್ರೈಂ
ಉಡುಪಿ, ಜು.15: ರಾಷ್ಟ್ರೀಯ ಹೆದ್ದಾರಿ ಮಧ್ಯೆ ಯುವಕನೊಬ್ಬ ಹುಚ್ಚಾಟ ಮೆರೆದಿದ್ದಾನೆ. ರಸ್ತೆ ಮಧ್ಯೆದಲ್ಲೇ ಟೇಬಲ್ ಹಾಕಿ ಅದರ ಮೇಲೆ ಟಿವಿ, ಮ್ಯೂಸಿಕ್ ಸಿಸ್ಟಂಗಳನ್ನಿಟ್ಟು, ಸಿಕ್ಕ ಸಿಕ್ಕವರ ಮೇಲೆ ಮಚ್ಚು ಬಿಸಲು ಯತ್ನಿಸಿರುವ ಘಟನೆ ಉಡುಪಿ ಜಿಲ್ಲೆಯ ಕೋಟದಲ್ಲಿ ನಡೆದಿದೆ. ಕೋಟತಟ್ಟುವಿನ ಬೆಲ್ಲದ ಗಣಪತಿ ದೇವಸ್ಥಾನದ ಬಳಿಯ ನಿವಾಸಿ ರಂಜಿತ್ ಸೋಮಯಾಜಿ (25) ಎಂಬಾತನನ್ನ ಕೋಟ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಂಜಿತ್ ಕೈಯಲ್ಲಿ ಮಚ್ಚು ಹಿಡಿದು ವಿಚಿತ್ರವಾಗಿ ವರ್ತಿಸುತ್ತಾ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರ ಮೇಲೆಯೂ ಯುವಕ ಮಚ್ಚು ಬೀಸಿ ಹಲ್ಲೆಗೆ ಯತ್ನಿಸಿದ್ದಾನೆ. ಕೊನೆಗೆ ಪೊಲೀಸರು ಹರಸಾಹಸಪಟ್ಟು ಆತನನ್ನು ವಶಕ್ಕೆ ಪಡೆದಿದ್ದಾರೆ.
ಜುಲೈ14ರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ರಂಜಿತ್ ರಸ್ತೆಯ ಮಧ್ಯದಲ್ಲಿ ಟೇಬಲ್ ಇಟ್ಟು, ಟಿವಿ ಮತ್ತು ಮ್ಯೂಸಿಕ್ ಸಿಸ್ಟಂ ಅಳವಡಿಸಿ, ಸಂಗೀತ ನುಡಿಸಲು ಪ್ರಾರಂಭಿಸಿದ್ದ, ಇದು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟುಮಾಡಿದೆ. ಈತನ ಹುಚ್ಚಾಟ ಕಂಡು ಕೆಲ ಪ್ರಯಾಣಿಕರು ಶಾಕ್ ಆಗಿದ್ದಾರೆ. ಅಸಾಮಾನ್ಯ ದೃಶ್ಯದಿಂದ ಗಾಬರಿಗೊಂಡ ವಾಹನ ಚಾಲಕರು ಮತ್ತು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ರು.
ಮಾಹಿತಿ ತಿಳಿದು ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿತು. ಕಾರ್ಯಾಚರಣೆಯ ಸಮಯದಲ್ಲಿ, ರಂಜಿತ್ ಮಚ್ಚು ತೋರಿಸಿ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಲು ಯತ್ನಿಸಿದನೆಂದು ಆರೋಪಿಸಲಾಗಿದೆ. ನಂತರ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಪ್ರಾಥಮಿಕ ವಿಚಾರಣೆಯ ಈ ಯುವಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರಬಹುದು ಎಂದು ಶಂಕಿಸಿದ್ದಾರೆ. ಈತ ಮನೋವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದಾರೆಂದು ಸೂಚಿಸುವ ಯಾವುದೇ ಅಧಿಕೃತ ವೈದ್ಯಕೀಯ ದಾಖಲೆಗಳ ಇಲ್ಲ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 04:18 pm
HK News
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm