ಬ್ರೇಕಿಂಗ್ ನ್ಯೂಸ್
09-08-26 04:47 pm HK News Staffer ಕ್ರೈಂ
ಮಂಗಳೂರು, ಆ.8: ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ಮಹಿಳಾ ಸಿಬಂದಿಯೊಬ್ಬರು ತನ್ನ ಗಂಡನ ಚಿಕಿತ್ಸೆಯ ನೆಪದಲ್ಲಿ ನಾಲ್ಕು ಪಟ್ಟು ಬಿಲ್ ತೋರಿಸಿ 4.80 ಲಕ್ಷ ರೂ. ಹಣ ಲಪಟಾಯಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದ್ದು ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಿಷನರ್ ಕಚೇರಿಯಲ್ಲಿ ಅಕೌಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಯಶಸ್ವಿನಿ ಟಿ.ಎಸ್ ಎಂಬವರ ವಿರುದ್ಧ ಅಕೌಂಟ್ ಸುಪರಿಡೆಂಟ್ ಎಸ್.ಐ ವಂಡಾಲ್ಕರ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಯಶಸ್ವಿನಿ ಅವರು ತನ್ನ ಗಂಡ ಪುಷ್ಪ ಕುಮಾರ್ ಅವರ ಮೊಣಕಾಲಿನ ಶಸ್ತ್ರಚಿಕಿತ್ಸೆ ಸಲುವಾಗಿ ಬಿಲ್ ಭರಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕಾಗಿ ಕಚೇರಿ ಮುಖ್ಯಸ್ಥರ ಅನುಮತಿಯೊಂದಿಗೆ ಪತ್ರಗಳನ್ನು ಬರೆದು ಕ್ಲೈಮ್ ಮಾಡಲು ಮುಂದಾಗಿದ್ದರು.
ವೈದ್ಯಕೀಯ ಚಿಕಿತ್ಸೆಯ ಮೊದಲ ಬಿಲ್ ಪಾವತಿಸಲು ಲಗ್ತೀಕರಿಸಿದ ಬಿಲ್ಲುಗಳ ಮೊತ್ತ 15,398 ಆಗಿದ್ದರೂ, 1,95,243 ರೂ. ಮರು ಪಾವತಿ ಮಾಡುವಂತೆ ಕೋರಿಕೆ ಸಲ್ಲಿಸಿದ್ದರು. ಎರಡನೇ ಬಿಲ್ ನಲ್ಲಿ ವೈದ್ಯಕೀಯ ವೆಚ್ಚವನ್ನು 2,86,245 ರೂ. ಎಂದು ಹೇಳಿ ಮರು ಪಾವತಿಗೆ ಕೋರಲಾಗಿತ್ತು. ಆದರೆ, ಇದರ ಜೊತೆಗೆ ಲಗ್ತೀಕರಿಸಿದ ಬಿಲ್ ಮೊತ್ತ ಕೇವಲ 65,831 ಮಾತ್ರ ಆಗಿರುತ್ತದೆ. ಆಮೂಲಕ ಕಡಿಮೆ ವೈದ್ಯಕೀಯ ವೆಚ್ಚ ಆಗಿದ್ದರೂ, ನಾಲ್ಕು ಪಟ್ಟು ಹಣ ಪಡೆಯುವ ಸಲುವಾಗಿ ಬಿಲ್ಲುಗಳ ಮೊತ್ತವನ್ನು 4,81,488 ರೂ. ಎಂದು ಹೆಚ್ಚು ತೋರಿಸಿ ಹಣ ಲಪಟಾಯಿಸಲು ಯತ್ನಿಸಿರುವುದು ಕಂಡುಬಂದಿದೆ ಎಂದು ಅಕೌಂಟ್ ವಿಭಾಗದ ಮುಖ್ಯಸ್ಥ ವಂಡಾಲ್ಕರ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
2025ರ ಜೂನ್ ತಿಂಗಳಿನಿಂದ 2026ರ ಆಗಸ್ಟ್ 5ರ ನಡುವೆ ಈ ರೀತಿಯ ಕಳ್ಳಾಟ ನಡೆದಿದ್ದು ಈ ಕುರಿತು ಸಲ್ಲಿಸಿರುವ ಪತ್ರದಲ್ಲಿ ಕಮಿಷನರ್ ಆಫ್ ಪೊಲೀಸ್ ಮಂಗಳೂರು ಇವರ ಸಹಿ ಮತ್ತು ಮೊಹರನ್ನು ದುರ್ಬಳಕೆ ಮಾಡಿದ್ದಾರೆಂದೂ ದೂರಿನಲ್ಲಿ ತಿಳಿಸಿದ್ದಾರೆ.
07-08-26 10:42 pm
HK News Desk
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಸಾವಿಗೂ ಬಾರದ ಪ...
06-08-26 03:49 pm
ಕಲಬುರಗಿಯಲ್ಲಿ SIR ಪರಿಷ್ಕರಣೆ ಶಾಕ್ ; 5.36 ಲಕ್ಷ...
06-08-26 02:19 pm
'ಮಂತ್ರಿ ಸ್ಥಾನಕ್ಕೆ ಕೋಟಿ ಕೋಟಿ ಡೀಲ್?' ಮಾಜಿ ಸಚಿವರ...
05-08-26 10:56 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
08-08-26 12:17 pm
HK News Staffer
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
BC Road Accident, Mangalore: ಬಿಸಿ ರೋಡ್ ಬಳಿ ಟಿ...
06-08-26 11:03 pm
09-08-26 04:47 pm
HK News Staffer
ಪಾಕ್ ಗೂಢಚಾರಿಣಿ ಮಹಿಳೆಯ ಹನಿಟ್ರ್ಯಾಪ್ ; ರಹಸ್ಯ ಮಾಹ...
09-08-26 04:07 pm
ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಶಾರ್ಪ್ ಶೂಟರ್ ರಾಜ...
09-08-26 03:34 pm
ಇನ್ಸ್ಟಾಗ್ರಾಂನಲ್ಲಿ ವರ್ಕ್ ಫ್ರಮ್ ಹೋಮ್ ಹೆಸರಲ್ಲಿ...
09-08-26 12:56 pm
ರೇಣುಕಾಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದರೂ ದರ್ಶನ್ ಹ...
09-08-26 12:03 pm