ಬ್ರೇಕಿಂಗ್ ನ್ಯೂಸ್
10-08-26 11:09 am HK News Staffer ಕ್ರೈಂ
ಉಳ್ಳಾಲ, ಆ.10: ಶನಿವಾರ ಮಧ್ಯರಾತ್ರಿ ತೊಕ್ಕೊಟ್ಟು ಜಂಕ್ಷನ್ನಲ್ಲಿರುವ ಬಾರ್ ಒಂದರ ಎದುರುಗಡೆ ತಲವಾರು ಬೀಸಿ ಧಾಂದಲೆ ನಡೆಸಿದ್ದ ಪುಡಿ ರೌಡಿ ಹಾಗೂ ಆತನ ಸಹಚರನನ್ನ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಂಬಿಯೊಳಗೆ ತಳ್ಳಿದ್ದಾರೆ.
ಉಳ್ಳಾಲ ಮಾರ್ಗತ್ತಲೆ ನಿವಾಸಿ ರೌಡಿಶೀಟರ್ ಮಹಮ್ಮದ್ ಶಾಕೀರ್ (31) ಹಾಗೂ ರಿಕ್ಷಾ ಚಾಲಕ ಉಳ್ಳಾಲ ಮಂಚಿಲ ನಿವಾಸಿ ಅಶ್ಪಾಕ್ (28) ಬಂಧಿತ ಆರೋಪಿಗಳು. ವಿನಮ್ರ ಬಾರ್ ಎದುರುಗಡೆಗೆ ಶನಿವಾರ ಮಧ್ಯರಾತ್ರಿ ಆಟೋ ರಿಕ್ಷಾದಲ್ಲಿ ಬಂದಿದ್ದ ಶಾಕೀರ್ ಕೈಯಲ್ಲಿ ತಲವಾರನ್ನ ಝಳಪಿಸಿ ಅಲ್ಲಿದ್ದ ಗ್ರಾಹಕರನ್ನ ಬೆದರಿಸಿದ್ದಲ್ಲದೆ, ಬಾರಿನ ಶಟರ್ ಗೆ ತಲವಾರಿನಿಂದ ಹೊಡೆದು ಧಾಂದಲೆ ನಡೆಸಿದ್ದಾನೆ. ರೌಡಿಯೋರ್ವ ನಡು ರಸ್ತೆಯಲ್ಲೇ ಖುಲ್ಲಂ ಖುಲ್ಲಾ ತಲವಾರು ಬೀಸಿ ಧಾಂದಲೆ ನಡೆಸಿದ್ದ ಸಿಸಿಟಿವಿ ದೃಶ್ಯವು ಭಾನುವಾರ ಸಂಜೆ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತಕ್ಷಣ ಕಾರ್ಯಪೃವೃತ್ತರಾದ ಉಳ್ಳಾಲ ಪೊಲೀಸರು ಭಾನುವಾರ ರಾತ್ರಿಯೇ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಕಂಬಿಯೊಳಗೆ ತಳ್ಳಿದ್ದಾರೆ.
ಮದ್ಯ ಜಾಸ್ತಿ ಸೇವಿಸಿದ್ದರಿಂದ ಗಲಾಟೆ ಮಾಡಿದೆ ಸರ್ ಅಂತ ಬಂಧಿತ ಪುಡಿ ರೌಡಿ ಶಾಕೀರ್ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನಂತೆ. ಮಾಡಿದ್ದುಣ್ಣೋ ಮಾರಾಯ ಎಂಬಂತೆ ಆರೋಪಿಗಳ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಇತರ ಸಂಬಂಧಿತ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ಜಡಿಯಲಾಗಿದೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm