ಬ್ರೇಕಿಂಗ್ ನ್ಯೂಸ್
05-09-26 08:58 pm HK News Staffer ಕ್ರೈಂ
ಭೋಪಾಲ್, ಸೆ.5: ತಾನು ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಪ್ರವಾಸೋದ್ಯಮ ಇಲಾಖೆಯ ಹೊಟೇಲುಗಳನ್ನು ಲೀಸಿಗೆ ತೆಗೆಸಿಕೊಡುವುದಾಗಿ ಹೇಳಿ ಲಕ್ಷಾಂತರ ರೂ. ಪಡೆದು ವಂಚಿಸಿದ ಆರೋಪದಲ್ಲಿ ತೃಪ್ತಿ ಸಿಂಗ್ ರಜಪೂತ್ ಎಂಬಾಕೆಯನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
“ನಾವು ಮಧ್ಯಪ್ರದೇಶ ವಿಧಾನಸಭೆಗೆ ಬಂದಿದ್ದೇವೆ. ಒಳಗೆ ಫೋಟೋ ತೆಗೆಯಲು ಅನುಮತಿ ಇಲ್ಲ. ಹಾಗಾಗಿ ಹೊರಗೆ ಈ ವೀಡಿಯೊ ಮಾಡುತ್ತಿದ್ದೇವೆ” ಎಂದು ಹೇಳಿಕೊಂಡಿದ್ದ ಈಕೆಯ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಗುಲಾಬಿ ಬಣ್ಣದ ಸೀರೆ ಧರಿಸಿದ್ದ ಮೂವರು ಯುವತಿಯರು ಅದರಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಕೆಂಪು ಸೀರೆ ಧರಿಸಿದ್ದ ಯುವತಿ, “ನಮ್ಮ ಚೇಷ್ಟೆಗಳನ್ನು ನೋಡಿದರೆ ನಾವು ಐಎಎಸ್ ಅಧಿಕಾರಿಗಳು ಎಂದು ಯಾರಿಗೂ ಅನಿಸುವುದಿಲ್ಲ” ಎಂದು ಹೇಳಿಕೊಂಡಿದ್ದಳು.
ಪೊಲೀಸರು ಇದೇ ವಿಡಿಯೋ ಮುಂದಿಟ್ಟು ತನಿಖೆ ನಡೆಸಿದ್ದು ವಿಡಿಯೋದಲ್ಲಿನ ಯಾವುದೇ ಹೇಳಿಕೆ ನಿಜವಲ್ಲ ಎಂಬುದು ಪತ್ತೆಯಾಗಿದೆ. ಈ ಮಹಿಳೆಯರು ಐಎಎಸ್ ಅಧಿಕಾರಿಗಳಲ್ಲ. ಈ ವಿಡಿಯೊವನ್ನು ವಿಧಾನಸಭೆ ಆವರಣದಲ್ಲಿ ಚಿತ್ರೀಕರಿಸಲಾಗಿಲ್ಲ. ಬದಲು ಆಂಥ್ರೊಪಾಲಾಜಿಕಲ್ ಮ್ಯೂಸಿಯಂ ಸಂಕೀರ್ಣದೊಳಗಿನ ಗ್ಯಾಲರಿಯೊಂದರಲ್ಲಿ ಚಿತ್ರೀಕರಿಸಲಾಗಿತ್ರು ಎಂದು ಭೋಪಾಲ್ ಪೊಲೀಸರು ತನಿಖೆಯಲ್ಲಿ ಪತ್ತೆಹಚ್ಚಿದ್ದಾರೆ.
ಪೊಲೀಸರ ತನಿಖೆಯಲ್ಲಿ ಕೆಂಪು ಸೀರೆ ಧರಿಸಿದ್ದ ಮಹಿಳೆಯನ್ನು ತೃಪ್ತಿ ಸಿಂಗ್ ರಜಪೂತ್ ಎಂದು ಗುರುತಿಸಿದ್ದು ವಿಡಿಯೋದಲ್ಲಿ ಕಾಣಿಸಿರುವ ಇನ್ನಿಬ್ಬರು ಯುವತಿಯರು ಐಎಎಸ್ ಆಕಾಂಕ್ಷಿಗಳಾಗಿದ್ದು ಅಧಿಕಾರಿಗಳನ್ನಾಗಿ ಮಾಡಿಸುತ್ತೇನೆಂದು ಅವರಿಂದಲೇ ತೃಪ್ತಿ ಸಿಂಗ್ ಹಣ ಪಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ತೃಪ್ತಿ ಸಿಂಗ್ ತನ್ನನ್ನು ಐಎಎಸ್ ಅಧಿಕಾರಿ ಮತ್ತು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ಎಂದು ಹೇಳಿಕೊಂಡು ಜನರಿಗೆ ಸರಕಾರಿ ಉದ್ಯೋಗ, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಆಸ್ತಿಗಳ ಗುತ್ತಿಗೆ ಹಾಗೂ ಅಧಿಕಾರಿಗಳೊಂದಿಗೆ ಸಂಪರ್ಕ ಕಲ್ಪಿಸುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡುತ್ತಿರುವುದು ಬಯಲಾಗಿದೆ.
ನಾಲ್ಕು ಎಫ್‌ಐಆರ್ ದಾಖಲು
ಅಶೋಕನಗರ ಮತ್ತು ಭೋಪಾಲ್ ಪೊಲೀಸರು ಆಕೆಯ ವಿರುದ್ಧ ನಾಲ್ಕು ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದಾರೆ. ಆಗಸ್ಟ್ 23 ರಂದು ಅಶೋಕನಗರ ಜಿಲ್ಲೆಯ ಚಂದೇರಿ ಪೊಲೀಸರು ಆಕೆಯ ಸಹೋದರ ಸುಧಾಂಶು ಸಿಂಗ್ ಜೊತೆಗೆ ಬಂಧಿಸಿದ್ದು ಆನಂತರ ಒಂದೊಂದೇ ಅಕ್ರಮಗಳು ಹೊರಗೆ ಬಂದಿವೆ. ಜೊತೆಗಿದ್ದ ಯುವಯರಿಂದಲೇ, ಐಎಎಸ್ ಅಧಿಕಾರಿಗಳನ್ನಾಗಿ ಮಾಡುವುದಾಗಿ ಭರವಸೆ ನೀಡಿ ತಲಾ 3 ಲಕ್ಷ ರೂ. ತೆಗೆದುಕೊಂಡಿದ್ದಾರೆ ಎಂದು ಭೋಪಾಲ್ ಡಿಸಿಪಿ ವಿಕಾಸ್ ಕುಮಾರ್ ಸಾಹ್ವಾಲ್ ಹೇಳಿದ್ದಾರೆ.
ನಿವಾಸದಲ್ಲಿ ಹಲವು ದಾಖಲೆ ಪತ್ತೆ
ಮಧ್ಯಪ್ರದೇಶ ಪೊಲೀಸರು ಭೋಪಾಲ್‌ನಲ್ಲಿರುವ ತೃಪ್ತಿ ಸಿಂಗ್ ರಜಪೂತ್ ನಿವಾಸದಲ್ಲಿ ಶೋಧಿಸಿದಾಗ ಹಲವು ದಾಖಲೆಗಳು ಪತ್ತೆಯಾದವು. ಸರಕಾರಿ ಇಲಾಖೆಗೆ ಸೇರಿದ ಗುರುತಿನ ಚೀಟಿಗಳು, ಲೆಟರ್‌ಹೆಡ್‌ಗಳು, ನೇಮಕಾತಿ ಪತ್ರಗಳು, ಟ್ರೋಫಿಗಳು ಮತ್ತು ಸ್ಮರಣಿಕೆಗಳನ್ನು ವಶಪಡಿಸಿದ್ದಾರೆ. ಇದಲ್ಲದೆ “Government of India” ಎಂದು ಬರೆದಿರುವ ಟೊಯೋಟಾ ಇನೋವಾ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
05-09-26 04:58 pm
HK News Staffer
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
ಕೆಆರ್ ಐಡಿಎಲ್ ಕಮಿಷನ್ ಆರೋಪದಿಂದ ಮಾನಸಿಕ ಕಿರುಕುಳ,...
04-09-26 04:44 pm
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
05-09-26 08:58 pm
HK News Staffer
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm
ಅಷ್ಟಮಿ ಭಜನಾ ಕಾರ್ಯಕ್ರಮದಲ್ಲಿ ಹೃದಯಾಘಾತ ; ತೊಕ್ಕೂರ...
05-09-26 02:04 pm
ತ್ರಿಶೂರ್ ನಲ್ಲಿ ಗುರುವಾಯೂರು ದರ್ಶನ ಮುಗಿಸಿ ಹೊರಟಿದ...
05-09-26 01:13 pm